ಟ್ರಂಪ್ v/s ನ್ಯಾಯಾಂಗ
Team Udayavani, Feb 6, 2017, 3:45 AM IST
ವಾಷಿಂಗ್ಟನ್: ಅಮೆರಿಕದಲ್ಲಿ ಆಡಳಿತ ಸರಕಾರ ಮತ್ತು ನ್ಯಾಯಾಂಗದ ನಡುವೆ ಜಟಾಪಟಿ ಉಂಟಾಗುವ ಲಕ್ಷಣಗಳು ಕಾಣಿಸಿಕೊಂಡಿವೆ. ಏಳು ಮುಸ್ಲಿಮ್ ರಾಷ್ಟ್ರಗಳಿಗೆ ವಲಸೆ ನಿಷೇಧ ಹೇರಿದ್ದ ಸರಕಾರದ ನೀತಿಗೆ ಫೆಡರಲ್ ಕೋರ್ಟ್ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ, ತಡೆಯಾಜ್ಞೆ ತೆರವಿಗೆ ಕೋರಿ ಟ್ರಂಪ್ ಆಡಳಿತ ಸಲ್ಲಿಸಿದ್ದ ಅರ್ಜಿಯನ್ನು ವಾಷಿಂಗ್ಟನ್ನಿನ 9ನೇ ಸಂಚಾರಿ ಪೀಠ ತಿರಸ್ಕರಿಸಿದೆ.
ವಲಸಿಗರಿಗೆ ಪುನಃ ಅಮೆರಿಕದ ಬಾಗಿಲನ್ನು ತೆರೆಯಲು ನಿರ್ದೇಶಿಸಿರುವ ಕೋರ್ಟ್, ಟ್ರಂಪ್ ಆಡಳಿತ ಮತ್ತು ವಾಷಿಂಗ್ಟನ್ ರಾಜ್ಯ ಎರಡೂ ಈ ಕುರಿತು ಸೋಮವಾರ ವಾದಗಳನ್ನು ಮಂಡಿಸುವಂತೆ ಸೂಚಿಸಿದೆ. “ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವುವೆಂದರೆ ಒಂದೇ ರಾಜಕೀಯ ಪಕ್ಷ ತನ್ನ ನಿಲುವನ್ನು ಪ್ರಜೆಗಳ ಮೇಲೆ ಹೇರುವುದಲ್ಲ. ರಾಷ್ಟ್ರೀಯ ಹಿತರಕ್ಷಣೆ ಎಂದು ಬಂದಾಗ ಕಾನೂನು ಸಲಹೆಗಾರರ ಅಭಿಪ್ರಾಯವನ್ನೂ ಪರಿಗಣಿಸಬೇಕಾಗುತ್ತದೆ. ಇಲ್ಲದಿದ್ದರೆ ಇದು ಸಾರ್ವಭೌಮ ನಿರ್ಧಾರ ಎಂದೆನಿಸಿಕೊಳ್ಳುತ್ತದೆ’ ಎಂದಿರುವ ಕೋರ್ಟ್ ಸಿಯಾಟಲ್ ನ್ಯಾಯಾಧೀಶರ ತಡೆಯಾಜ್ಞೆಯನ್ನು ಎತ್ತಿಹಿಡಿದಿದೆ.
ಟ್ರಂಪ್ ಟ್ವೀಟ್ ದಾಳಿ: ವಲಸೆ ನೀತಿಯ ಹಿನ್ನಡೆಗೆ ಕಾರಣ ಆಗಿರುವ ಸಿಯಾಟೆಲ್ ಫೆಡರಲ್ ಜಡ್ಜ್ ಜೇಮ್ಸ್ ರಾಬರ್ಟ್ ವಿರುದ್ಧ ಟ್ರಂಪ್ ನಿರಂತರ ಟ್ವೀಟ್ ದಾಳಿ ಮಾಡಿದ್ದಾರೆ. “ವಲಸೆ ವಿರೋಧಿ ನೀತಿಯ ತಡೆಯಾಜ್ಞೆಯೇ ನಗೆಪಾಟಲಿನ ಸಂಗತಿ ಮತ್ತು ಇದು ಅಪಾಯಕಾರಿ’ ಎಂದಿದ್ದಾರೆ. “ದುಷ್ಟ ಜನರೆಲ್ಲ ನ್ಯಾಯಾಂಗದ ತೀರ್ಪನ್ನು ಆನಂದಿಸುತ್ತಿದ್ದಾರೆ. ಈ ತಡೆಯಾಜ್ಞೆ ಅವರ ಗೆಲುವು. ನಮ್ಮ ಜಡ್ಜ್ಗಳಿಗೆ ಉಗ್ರರ ಮೇಲೆ ಪ್ರೀತಿಯಿದೆ. ಅಮೆರಿಕದ ಉಳಿದ ಪ್ರಜೆಗಳ ಮೇಲೆ ಯಾವ ಆಸಕ್ತಿಯನ್ನೂ ಅವರು ತೋರುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ. “ಉಗ್ರ ಮುಖಗಳನ್ನು ಹೊತ್ತ ಜನ ಧಾರಾಕಾರವಾಗಿ ಅಮೆರಿಕವನ್ನು ಸೇರುತ್ತಿದ್ದಾರೆ. ಈ ಹೊತ್ತಿನಲ್ಲಿ ನ್ಯಾಯಾಲಯ ಇಂಥ ನಿಲುವು ತಳೆದಿರುವುದು ಸರಿಯಲ್ಲ’ ಎಂದಿದ್ದಾರೆ.
ವಿವಾದ ಹುಟ್ಟಿಸಿದ ತಲೆಕಟುಕ ಟ್ರಂಪ್ ಚಿತ್ರ!
ಬರ್ಲಿನ್: ಸ್ವಾತಂತ್ರÂ ದೇವತೆಯ ರುಂಡ ಹಿಡಿಧಿದಂತೆ ಡೊನಾಲ್ಡ್ ಟ್ರಂಪ್‌ರನ್ನು ಚಿತ್ರಿಸಿರುವ ಜರ್ಮನಿಯ “ಡೆರ್ ಸ್ಪೀಗಲ್’ ಮ್ಯಾಗಧಿಜಿನ್ ಈಗ ವಿಶ್ವಾದ್ಯಂತ ಟೀಕೆಗೆ ಗುರಿಧಿಯಾಗಿದೆ. ಒಂದು ಕೈಯಲ್ಲಿ ಸ್ವಾತಂತ್ರÂ ದೇವತೆಯ ರುಂಡ, ಮತ್ತೂಂದು ಕೈಯಲ್ಲಿ ರಕ್ತ ಅಂಟಿಕೊಂಡ ಚಾಕುವನ್ನು ಹಿಡಿದಿರುವ ಟ್ರಂಪ್ ಅವರ ಚಿತ್ರದ ಇದಾಗಿದ್ದು, ಕೆಳಗೆ “ಅಮೆರಿಕ ಫಸ್ಟ್’ ಎಂಬ ಸ್ಲೋಗನ್ ನೀಡಲಾಗಿದೆ. ಅಮೆಧಿರಿಕ- ಕ್ಯೂಬಾ ಮೂಲದ ಕಲಾವಿದ ಈಡೆಲ್ ರೋಡ್ರಿಗಾಝ್ ಚಿತ್ರಿಸಿರುವ ಈ ಚಿತ್ರ ಮುಖಪುಟದಲ್ಲಿ ಮುದ್ರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವಿಪರೀತ ಟೀಕೆಗೆ ಗುರಿಯಾಗಿದ್ದು, ಕೆಲವರು “ಅಸಹ್ಯ ಅಭಿರುಚಿ’, “ಜೆಹಾದಿ ಜಾನ್’ ಎಂದಿದ್ದಾರೆ. “ಮುಖಪುಟದಲ್ಲಿರುವ ಚಿತ್ರ ಟ್ರಂಪ್ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರÂದ ಮೂಲಕ 1886ರಿಂದ ಅಮೆರಿಕ ವಲಸಿಗರನ್ನು, ನಿರಾಶ್ರಿತರನ್ನು ಸ್ವಾಗತಿಸಿದ್ದನ್ನು ನೆನಪಿಸುತ್ತದೆ’ ಎಂದು ಪತ್ರಿಕೆ ಸಂಪಾದಕ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.