US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
ಪಳೆಯುಳಿಕೆ ಇಂಧನಕ್ಕೆ ಹೆಚ್ಚು ಒತ್ತು ; ಜಾಗತಿಕ ತಾಪಮಾನ ಏರಿಕೆಯ ಭೀತಿ
Team Udayavani, Nov 8, 2024, 7:30 AM IST
ವಾಷಿಂಗ್ಟನ್: ಪ್ರಪಂಚದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಿನವೇ ಡೊನಾಲ್ಡ್ ಟ್ರಂಪ್ ಇಡೀ ಜಗತ್ತಿಗೆ “ಎನರ್ಜಿ ಶಾಕ್’ ನೀಡಿದ್ದಾರೆ.
ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ನೀಡಲಾಗುತ್ತಿರುವ ಸಹಾಯ ನಿಲ್ಲಿಸುವುದಾಗಿ ಘೋಷಿಸಿದ್ದಾರೆ.
ಸೌರಫಲಕ ಅಳವಡಿಸಿ ಅದರಿಂದ ಶಕ್ತಿ ತಯಾರು ಮಾಡಲು ಹೆಚ್ಚಿನ ವೆಚ್ಚ ಮತ್ತು ಜಾಗದ ಅವಶ್ಯಕತೆ ಬೇಕು ಎಂದು ವಾದಿಸಿರುವ ಟ್ರಂಪ್ ಪಳೆಯುಳಿಕೆ ಇಂಧನಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದಿದ್ದಾರೆ. ಜಾಗತಿಕ ತಾಪಮಾನ ಏರಿಕೆಗೆ ಪಳೆಯುಳಿಕೆ ಇಂಧನಗಳ ಅತಿಯಾದ ಬಳಕೆಯೇ ಕಾರಣ ಎಂಬ ವಾದವನ್ನು ಸದಾ ವಿರೋಧಿಸುವ ಟ್ರಂಪ್, ಇಷ್ಟೊಂದು ಶಕ್ತಿಗಾಗಿ ನವೀಕರಿಸಬಹುದಾದ ಮೂಲಗಳನ್ನು ಬಳಸುವುದು ಹಾಸ್ಯಾಸ್ಪದ ಎಂದಿದ್ದಾರೆ.
ಟ್ರಂಪ್ ನಿರ್ಧಾರದಿಂದ ಏನಾಗಬಹುದು?:
– ಪಳೆಯುಳಿಕೆ ಇಂಧನಗಳಿಗೆ ಅಮೆರಿಕದಲ್ಲಿ ಬೇಡಿಕೆ ಹೆಚ್ಚಬಹುದು.
– ಇದರ ಮೇಲೆ ನಿಯಂತ್ರಣ ಸಾಧಿಸಲು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಬಿಕ್ಕಟ್ಟು ಸೃಷ್ಟಿಯಾಗಬಹುದು.
– ಟ್ರಂಪ್ ನಿರ್ಧಾರಕ್ಕೆ ಪರಿಸರವಾದಿಗಳಿಂದ ಭಾರಿ ವಿರೋಧ ವ್ಯಕ್ತವಾಗಬಹುದು.
– ಜಾಗತಿಕ ತಾಪಮಾನ ತಡೆಗಟ್ಟುವ ಒಪ್ಪಂದಕ್ಕೆ ಬದ್ಧವಾಗಿರುವ ದೇಶಗಳು ಸಹ ಟ್ರಂಪ್ ನಡೆಯನ್ನು ವಿರೋಧಿಸಬಹುದು
ಕುಸಿದ ಮರುಬಳಕೆ ಕಂಪನಿಗಳ ಷೇರುಗಳು
ಟ್ರಂಪ್ ಹೇಳಿಕೆ ಬೆನ್ನಲ್ಲೇ ಅಮೆರಿಕ ಹಾಗೂ ಐರೋ ಪ್ಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ವಿಶೇಷವಾಗಿ ಮರುಬ ಳಕೆ ಇಂಧನ ಕಂಪನಿಗಳ ಷೇರುಗಳು ಭಾರೀ ಕುಸಿತ ದಾಖಲಿಸಿವೆ. ಜಗತ್ತಿನ ಅತಿದೊಡ್ಡ ಪವನ ಶಕ್ತಿ ಕಂಪನಿಯಾಗಿರುವ ಆರ್‌ಸ್ಟೆಡ್‌ನ ಷೇರುಗಳು ಶೇ.14ರಷ್ಟು ಕುಸಿದರೆ, ವಿಂಡ್ ಟರ್ಬೈನ್ ತಯಾರಿಕಾ ಕಂಪನಿಗಳಾದ ವೆಸ್ಟಾಸ್ ಮತ್ತು ನೊರ್ಡೆಕ್ಸ್ ಕಂಪನಿಗಳ ಷೇರುಗಳ ಕ್ರಮವಾಗಿ ಶೇ.11 ಮತ್ತು ಶೇ.7.6 ಕುಸಿತ ದಾಖಲಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.