6 ಮುಸ್ಲಿಂ ದೇಶಗಳ ವೀಸಾ ಅರ್ಜಿದಾರರಿಗೆ ಟ್ರಂಪ್‌ ಹೊಸ ಮಾನದಂಡ ಪ್ರಕಟ

Team Udayavani, Jun 29, 2017, 12:13 PM IST

America Visa-700.jpg

ವಾಷಿಂಗ್ಟನ್‌: ನಿಷೇಧಿತ ಆರು ಮುಸ್ಲಿಂ ದೇಶಗಳು ಮತ್ತು ಎಲ್ಲ ನಿರಾಶ್ರಿತ ವೀಸಾ ಅರ್ಜಿದಾರರಿಗೆ ಅಮೆರಿಕದ ಟ್ರಂಪ್‌ ಆಡಳಿತೆಯು ಅಮೆರಿಕ ಪ್ರವೇಶಕ್ಕೆ ಸಂಬಂಧಿಸಿ ಹೊಸ ಅರ್ಹತೆಗಳನ್ನು ನಮೂದಿಸಿದ್ದು ಅಮೆರಿಕದ ವಿದೇಶಾಂಗ ಇಲಾಖೆಯು ಈ ನೂನತ ಮಾರ್ಗದರ್ಶಿ ನಿಯಮಗಳನ್ನು ಪ್ರಕಟಿಸಿದೆ.

ಅಮೆರಿಕ ಪ್ರವೇಶ ನಿಷೇಧಕ್ಕೆ ಗುರಿಯಾಗಿರುವ ಆರು ಮುಖ್ಯ ಮುಸ್ಲಿಂ ದೇಶಗಳೆಂದರೆ ಇರಾನ್‌, ಲಿಬಿಯಾ, ಸೊಮಾಲಿಯಾ, ಸುಡಾನ್‌, ಸಿರಿಯಾ ಮತ್ತು ಯೆಮೆನ್‌. 

ಈ ಆರು ಮುಸ್ಲಿಂ ದೇಶಗಳ ಮೇಲಿನ ಅಮೆರಿಕ ಪ್ರವೇಶದ ಟ್ರಂಪ್‌ ನಿಷೇಧಾಜ್ಞೆಯು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿತ್ತಲ್ಲದೆ ಅಮೆರಿಕದ ಉನ್ನತ ನ್ಯಾಯಾಂಗವು ಈ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. 

ಇದೀಗ ಅಮೆರಿಕದ ಸುಪೀಂ ಕೋರ್ಟ್‌, ಟ್ರಂಪ್‌ ನಿಷೇಧಾಜ್ಞೆಯನ್ನು ಪುನರ್‌ ಸ್ಥಾಪಿಸಿರುವ ಕಾರಣ ನಿಷೇಧಿತ ಆರು ಮುಸ್ಲಿಂ ರಾಷ್ಟ್ರಗಳ ಹಾಗೂ ನಿರಾಶ್ರಿತರ ವೀಸಾ ಅರ್ಜಿಗಳಿಗೆ ಹೊಸ ಅರ್ಹತಾ ನಿಯಮಗಳನ್ನು ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಿಸಿದೆ. 

ಅಮೆರಿಕ ಪ್ರವೇಶ ಬಯಸುವ ವೀಸಾ ಅರ್ಜಿದಾರರು ತಮ್ಮೊಂದಿಗೆ ಕರೆತರಬಹುದಾದ ನಿಕಟ ಬಂಧುಗಳು ಯಾರು ಎಂಬುದನ್ನು ಈ ಹೊಸ ಅರ್ಹತಾ ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಆ ಪ್ರಕಾರ ಹೆತ್ತವರು, ಗಂಡ-ಹೆಂಡತಿ, ಮಕ್ಕಳು, ಪ್ರಾಯಪ್ರಬುದ್ಧ ಮಗ-ಮಗಳು, ಅಳಿಯ, ಸೊಸೆ ಅಥವಾ ಅವರ ಮಕ್ಕಳು (ಮಲ ಮಕ್ಕಳು ಮತ್ತು ಮಲ ಕಟುಂಬ ಸಂಬಂಧಿಗಳು ಸೇರಿ) ಈ ವ್ಯಾಖ್ಯಾನಕ್ಕೆ ಒಳಪಟ್ಟಿದ್ದಾರೆ.

ಯಾರು ಅರ್ಜಿದಾರರ ನಿಕಟ ಸಂಬಂಧಿಗಳಲ್ಲ ಎಂಬ ವ್ಯಾಖ್ಯಾನದ ವ್ಯಾಪ್ತಿಗೆ, ಅಜ್ಜ-ಅಜ್ಜಿ, ಮೊಮ್ಮಕ್ಕಳು, ಚಿಕ್ಕಮ್ಮ, ಚಿಕ್ಕಪ್ಪ, ಸೋದರ ಸಂಬಂಧಿಗಳು, ಭಾವ, ನಾದಿನಿ, ಭಾವೀ ಪತಿ – ಪತ್ನಿ ಮತ್ತು ವಿಸ್ತರಿತ ಕುಟುಂಬ ಸದಸ್ಯರು ಸೇರುತ್ತಾರೆ. 

ವಿದೇಶಾಂಗ ಇಲಾಖೆಯ ಈ ಹೊಸ ನೀತಿ-ನಿಯಮಗಳ ಸವಿವರ ಮಾಹಿತಿಯನ್ನು ಅಮೆರಿಕದ ಎಲ್ಲ ರಾಜತಂತ್ರಜ್ಞ ಹುದ್ದೆಗಳಿಗೆ ಮತ್ತು ರಾಯ್‌ಟರ್‌ ಹಾಗೂ ಅಸೋಸಿಯೇಟೆಡ್‌ ಸುದ್ದಿ ಸಂಸ್ಥೆಗೆ ತಲುಪಿಸಿದೆ. 

ಟಾಪ್ ನ್ಯೂಸ್

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.