Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”
Team Udayavani, May 8, 2024, 6:17 PM IST
ಕತಾರ್: ತುಳುವಿನ “ತುಡರ್” ಚಿತ್ರದ ಮೊದಲ ಬಾರಿಗೆ ಕತಾರಿನ ಏಷ್ಯನ್ ಟೌನ್ ನಲ್ಲಿ ಪ್ರದರ್ಶನಗೊಂಡಿತು.
ಈ ಚಿತ್ರ ಹಾಸ್ಯ, ರಹಸ್ಯ ,ಆಕ್ಷನ್ ಹಾಗೂ ರೊಮಾನ್ಸ್ ಹೀಗೆ ಪ್ರತಿಯೊಂದು ಅಂಶವನ್ನು ಒಳಗೊಂಡಿದ್ದು, ಸಿನಿಮಾ ನೋಡಿ ಪ್ರೇಕ್ಷಕರು ಖುಷ್ ಆಗಿದ್ದಾರೆ.
ದರ್ಶಕರು ಚಿತ್ರದ ಕಥೆಯನ್ನು, ನಟನೆಯನ್ನು ಹಾಗೂ ನಿರ್ದೇಶನವನ್ನು ಮೆಚ್ಚಿ ಪ್ರಶಂಶಿಸಿದರು. “ತುಡರ್” ಚಿತ್ರವನ್ನು 2024ರ ಜೂನ್ 14ರಂದು ವಿಶ್ವದಾದ್ಯಂತ ಬಿಡುಗಡೆಗೊಳಿಸುವುದಾಗಿ ಅನೌನ್ಸ್ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಕತಾರಿನ ಅಧ್ಯಕ್ಷ ಶ್ರೀ ರವಿ ಶೆಟ್ಟಿ, ಕರ್ನಾಟಕ ಸಂಘ ಕತಾರಿನ ಮಾಜಿ ಅಧ್ಯಕ್ಷ ಶ್ರೀ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಿಲನ್ ಅರುಣ್ ಮತ್ತು ಡಿಪಿಎಸ್ ಶಾಲೆಯ ಮುಖ್ಯ ಅಧ್ಯಾಪಕ ಶ್ರೀ ಸುಜಿತ್ ಕುಮಾರ್‌ರವರು ಹಾಗೂ ವಿವಿಧ ಕರ್ನಾಟಕದ ಸಂಘಗಳ ಅಧ್ಯಕ್ಷರುಗಲು ಉಪಸ್ಥಿತರಿದ್ದರು.
ಇದಲ್ಲದೆ, ತುಡರ್ ಚಿತ್ರದ ನಾಯಕ ನಟ ಸಿದ್ಧಾರ್ಥ್ ಶೆಟ್ಟಿಯ ಉಪಸ್ಥಿತಿಯು ಕಾರ್ಯಕ್ರಮದ ಗರಿಮೆಯನ್ನು ಹೆಚ್ಚಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.