ಸೆಲಾ ಪಾಸ್ಗೆ ಸುರಂಗ: ಚೀನಾ ಗಡಿ ಇನ್ನಷ್ಟು ಹತ್ತಿರ
Team Udayavani, Jul 24, 2017, 7:00 AM IST
ತವಾಂಗ್: ಅರುಣಾಚಲ ಪ್ರದೇಶದಲ್ಲಿ ಹಾದುಹೋಗುವ ತೇಜ್ಪುರ-ತವಾಂಗ್ ಮಧ್ಯದ ಕಡಿದಾದ ಸೆಲಾ ಪಾಸ್ನಲ್ಲಿ ಹೊಸ ಸುರಂಗ ನಿರ್ಮಿಸಲು ಇದೀಗ ಕೇಂದ್ರ ಸರ್ಕಾರದ ಗಡಿ ರಸ್ತೆ ಸಂಸ್ಥೆ (ಬಿಆರ್ಒ) ಯೋಜಿಸಿದೆ.
ಇದರಿಂದ ಪಶ್ಚಿಮ ಅರುಣಾಚಲ ಪ್ರದೇಶ ಮತ್ತು ಚೀನಾ ಗಡಿಗೆ ಸಂಪರ್ಕ ಮತ್ತಷ್ಟು ಹತ್ತಿರವಾಗಲಿದ್ದು, ಚೀನಾ ವಿರುದ್ಧ ತ್ವರಿತ ಸೈನಿಕ ಜಮಾವಣೆಗೆ, ವ್ಯೂಹಾತ್ಮಕ ದೃಷ್ಟಿಯಿಂದಲೂ ನೆರವಾಗಲಿದೆ. ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಈ ಸುರಂಗ ನಿರ್ಮಾಣವಾಗಲಿದ್ದು, 2 ಸುರಂಗಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 475 ಮೀ ಮತ್ತು 1790 ಮೀ. ಉದ್ದದ 2 ಸುರಂಗಗಳು ಇರಲಿದ್ದು, 12.37 ಕಿ.ಮೀ. ದೂರ ಇರಲಿದೆ. ಇದರಿಂದ ರಾ.ಹೆ.ರಿಯ ಬೊಮಿªಲಾ-ತವಾಂಗ್ ನಡುವಿನ ದೂರ 10 ಕಿ.ಮೀ. ದೂರ ಕಡಿತಗೊಳ್ಳಲಿದೆ. ಈ ದಾರಿ ಅತ್ಯಂತ ದುರ್ಗಮವಾಗಿದ್ದು, ಸುರಂಗ ನಿರ್ಮಾಣದಿಂದ ಸರ್ವಋತು ರಸ್ತೆ ಲಭ್ಯವಾಗಲಿದೆ. ಈಗಾಗಲೇ ಸುರಂಗದ ತಾಂತ್ರಿಕ ಸರ್ವೇ ಮುಗಿದಿದ್ದು, ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಾಗಿದೆ. ಇದಕ್ಕೆ ಒಪ್ಪಿಗೆಯೂ ಸಿಕ್ಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.