Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ
Team Udayavani, Sep 30, 2024, 10:11 AM IST
ಅಂಕಾರಾ (ಟರ್ಕಿ): ಸಾಮಾಜಿಕ ಜಾಲತಾಣದ ಪ್ರಭಾವಿಯೊಬ್ಬರು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.
ಟರ್ಕಿ ದೇಶದ ಸೋಶಿಯಲ್ ಮೀಡಿಯಾ ಪ್ರಭಾವಿ ಕುಬ್ರಾ ಆಯ್ಕುತ್ (26) ಟರ್ಕಿಯ ಸುಲ್ತಾನ್ಬೇಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್ಮೆಂಟ್ ನ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಸೆ.23ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿಗಳಿಗೆ ಘಟನಾ ಸ್ಥಳದಲ್ಲಿ ಪತ್ರವೊಂದು ಸಿಕ್ಕಿರುವುದಾಗಿ ವರದಿಯಾಗಿದೆ.
ಕುಬ್ರಾ ಸಾವಿಗೆ ಕೆಲವೇ ಗಂಟೆಗಳ ಮೊದಲು ತನ್ನ ಖಾತೆಯಲ್ಲಿ ತೂಕ ಹೆಚ್ಚಾಗಿ ಅದರೊಂದಿಗೆ ಜೀವನ ಕಳೆಯುವುದರ ಬಗೆಗಿನ ಕುರಿತ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ಅವರ ಫಾಲೋವರ್ಸ್ ಕಳವಳ ವ್ಯಕ್ತಪಡಿಸಿದ್ದರು.
ತನ್ನ ಟಿಕ್ ಟಾಕ್ ವಿಡಿಯೋಗಳಿಂದ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದ ಅವರಿಗೆ ಟಿಕ್ಟಾಕ್ ಖಾತೆಯಲ್ಲಿ ಒಂದು ಮಿಲಿಯನ್ ಅನುಯಾಯಿಗಳಿದ್ದರು. ಇನ್ಸ್ಟಾಗ್ರಾಮ್ ಖಾತೆಯಲ್ಲಿ 2,07,000 ಅನುಯಾಯಿಗಳನ್ನು ಹೊಂದಿದ್ದರು.
ಕುಬ್ರಾ 2023 ರಲ್ಲಿ ಟಿಕ್ಟಾಕ್ನಲ್ಲಿ ತನ್ನ ವಿಶಿಷ್ಟ ಕಂಟೆಂಟ್ ನಿಂದ ಗಮನ ಸೆಳೆದಿದ್ದರು.”ವೆಡ್ಡಿಂಗ್ ವಿತ್ ಔಟ್ ಎ ಗ್ರೂಮ್”(ವರನಿಲ್ಲದೆ ಮದುವೆ) ಸರಣಿಯ ವಿಡಿಯೋಗಳಿಂದ ಖ್ಯಾತಿ ಆಗಿದ್ದರು. ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದ್ದರು. ಕುಬ್ರಾ ಸಾಂಕೇತಿಕವಾಗಿ ತನ್ನನ್ನು ತಾನೇ ಮದುವೆಯಾಗಿದ್ದರು.
ಅವರ ಸಾವಿನ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕೊನೆಯ ದಾಗಿ ಅವರು ತನ್ನ ಮನೆಯನ್ನು ಸ್ವಚ್ಛಗೊಳಿಸುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.