ಉದ್ಯೋಗಿಗಳ ವಜಾ: ಯೂಟರ್ನ್ ಹೊಡೆದ ಟ್ವಿಟರ್
Team Udayavani, Nov 8, 2022, 7:30 AM IST
ಬೋಸ್ಟನ್: ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಶೇ.50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಈಗ ಯೂಟರ್ನ್ ಹೊಡೆದಿದೆ. ವಜಾಗೊಂಡವರ ಪೈಕಿ ಕೆಲ ಉದ್ಯೋಗಿಗಳನ್ನು ವಾಪಸು ಕೆಲಸಕ್ಕೆ ಹಿಂತಿರುಗುವಂತೆ ಟ್ವಿಟರ್ ಮನವಿ ಮಾಡಿದೆ.
“ಕೆಲವರನ್ನು ತಪ್ಪಾಗಿ ಕೆಲಸದಿಂದ ತೆಗೆದುಹಾಕಲಾಗಿದೆ. ಮಸ್ಕ್ ಅವರ ಆಲೋಚನೆಗಳಿಗೆ ತಕ್ಕಂತೆ ಹೊಸ ವೈಶಿಷ್ಟ್ಯಗಳನ್ನು ರೂಪಿಸಲು ಅವರ ಕೆಲಸ ಮತ್ತು ಅನುಭವದ ಅಗತ್ಯವಿದೆ ಎಂದು ಮ್ಯಾನೇಜ್ಮೆಂಟ್ ಗೆ ಅರಿವಾಗುವ ಮೊದಲೇ ಅವರನ್ನು ವಜಾಗೊಳಿಸಲಾಗಿತ್ತು,’ ಎಂದು ಟ್ವಿಟರ್‌ನ ಉನ್ನತ ಮೂಲಗಳು ತಿಳಿಸಿವೆ.
ಕಳೆದ ಶುಕ್ರವಾರ ಟ್ವಿಟರ್ ನಿರ್ದಯವಾಗಿ 3,700 ಮಂದಿಯನ್ನು ವಜಾಗೊಳಿಸಿತ್ತು. ಭಾರತದ 230 ಉದ್ಯೋಗಿಗಳ ಪೈಕಿ 180 ಉದ್ಯೋಗಿಗಳನ್ನು ಕಿತ್ತುಹಾಕಿತ್ತು.
ನಕಲು ಹೆಸರಿರುವ ಖಾತೆಗಳ ಅಮಾನತು:
“ಟ್ವಿಟರ್‌ನಲ್ಲಿ ಮತ್ತೊಬ್ಬರನ್ನು ನಕಲು ಮಾಡಿದರೆ, ತಮ್ಮ ಖಾತೆಗಳಿಗೆ ಬೇರೆಯವರ ಹೆಸರು ಮತ್ತು ಪ್ರೊಫೈಲ್ ಚಿತ್ರಗಳನ್ನು ಹಾಕಿದರೆ ಅಂಥವರ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುವುದು,’ ಎಂದು ಮಸ್ಕ್ ಎಚ್ಚರಿಸಿದ್ದಾರೆ.
“ವಿಡಂಬನೆ ಎಂದು ಪೋಸ್ಟ್‌ನಲ್ಲಿ ಸ್ಟಷ್ಟವಾಗಿ ಉಲ್ಲೇಖಿಸಬೇಕು. ಇಲ್ಲದಿದ್ದರೆ ಅಂಥ ಟ್ವಿಟರ್ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುವುದು,’ ಎಂದು ಹೇಳಿದ್ದಾರೆ.
8 ಡಾಲರ್ ಪಾವತಿಸಿ:
ಅಮೆರಿಕದ ಕಾಮಿಡಿಯನ್ ಕ್ಯಾಥಿ ಗ್ರಿಫಿನ್ ಅವರು ತಮ್ಮ ಟ್ವಿಟರ್ ಖಾತೆಯ ಸ್ಕ್ರೀನ್ ಹೆಸರನ್ನು “ಮಸ್ಕ್’ ಎಂದು ಹಾಕಿಕೊಂಡಿದ್ದರು. ಅಲ್ಲದೇ ಮಾಸಿಕ 8 ಡಾಲರ್ ವಿಧಿಸುವ ಮಸ್ಕ್ ಅವರ ನಿರ್ಧಾರದ ಬಗ್ಗೆ ವ್ಯಂಗ್ಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಖಾತೆ ಪುನಃ ಸಕ್ರಿಯವಾಗಬೇಕಾದರೆ 8 ಡಾಲರ್ ಪಾವತಿಸಿ ಎಂದು ಅವರಿಗೆ ಸೂಚಿಸಲಾಗಿದೆ.
ಇನ್ನೊಂದೆಡೆ, ಮೆಲ್ಬೋರ್ನ್ನ ಲಾ ಟ್ರೋಬ್ ವಿಶ್ವವಿದ್ಯಾಲಯದ ಹಿಂದಿ ಪ್ರೊಫೆಸರ್ ಇಯಾನ್ ವೂಲೊ#àರ್ಡ್, ಮಸ್ಕ್ ಅವರ ಚಿತ್ರವನ್ನು ಪ್ರೊಫೈಲ್ ಪೋಟೋ ಆಗಿ ಬಳಸಿದ್ದರು. ಅಲ್ಲದೇ ಹಿಂದಿಯಲ್ಲಿ ಜೋಕ್‌ಗಳನ್ನು ಹಾಕಿದ್ದರು. ಅವರ ಖಾತೆಯನ್ನು ಸಹ ಅಮಾನತುಗೊಳಿಸಲಾಗಿದೆ.
ಫೇಸ್‌ಬುಕ್ ಉದ್ಯೋಗಿಗಳ ವಜಾ?:
ಟ್ವಿಟರ್ ನಂತರ ಈಗ ಉದ್ಯೋಗ ಕಡಿತದ ಸರದಿ ಫೇಸ್‌ಬುಕ್‌ದ್ದಾಗಿದೆ. ಮೆಟಾ ಕಂಪನಿಯು ದೊಡ್ಡ ಮಟ್ಟದಲ್ಲಿ ತನ್ನ ಫೇಸ್‌ಬುಕ್ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಸಿದ್ಧವಾಗಿದೆ. ಈ ಕುರಿತು ಈ ವಾರದಲ್ಲೇ ಕಂಪನಿಯು ನಿರ್ಧಾರ ಪ್ರಕಟಿಸಲಿದೆ ಎಂದು ವರದಿಗಳು ತಿಳಿಸಿದೆ. ಪ್ರಸ್ತುತ ಮೆಟಾ ಕಂಪನಿಯಲ್ಲಿ 87,000ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Cold Weather: ಕೊನೆಗೂ ಚಳಿ ಶುರು ಆಯ್ತು ಗುರು
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.