ಭೂಮಿಗೆ ಇನ್ನೆರಡು ಚಂದ್ರ!
Team Udayavani, Nov 8, 2018, 9:51 AM IST
ವಾಷಿಂಗ್ಟನ್: ಭೂಮಿಗೆ ಕೇವಲ ಒಂದು ಚಂದ್ರನಲ್ಲ. ಇನ್ನೂ ಎರಡು ಚಂದ್ರರಿದ್ದಾರೆ ಎಂಬುದಕ್ಕೆ ಈಗ ಮತ್ತಷ್ಟು ಸಾಕ್ಷ್ಯ ಸಿಕ್ಕಿದೆ. ಇತ್ತೀಚೆಗೆ ನ್ಯಾಷನಲ್ ಜಿಯೋಗ್ರಫಿಕ್ ವರದಿ ಪ್ರಕಾರ ಹಂಗೇರಿಯ ಬಾಹ್ಯಾಕಾಶ ತಜ್ಞರು ಹಾಗೂ ಭೌತಶಾಸ್ತ್ರಜ್ಞರು ಈ ಬಗ್ಗೆ ಇನ್ನಷ್ಟು ದತ್ತಾಂಶಗಳನ್ನು ಪೋಣಿಸಿದ್ದಾರೆ. ಸುಮಾರು 50 ವರ್ಷಗಳಿಂದಲೂ ಈ ಬಗ್ಗೆ ವಿಜ್ಞಾನಿಗಳ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಎರಡೂ ಚಂದ್ರರು ಧೂಳಿನಿಂದ ತುಂಬಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಇದಕ್ಕೆ ಕೊರ್ಡಿಲೆವ್‌ಸ್ಕಿ ಎಂದು ಹೆಸರಿಡ ಲಾಗಿದ್ದು, ಪೋಲೆಂಡ್ ಬಾಹ್ಯಾಕಾಶ ತಜ್ಞ ಕಜಿಮೀರ್ಸ್ ಕೊರ್ಡಿಲೆವ್‌ಸ್ಕಿ 1961ರಲ್ಲಿ ಈ ಬಗ್ಗೆ ಮೊದಲು ಪ್ರಸ್ತಾಪಿಸಿದ್ದರು. ಇವರ ನೆನಪಿಗಾಗಿ ಇದಕ್ಕೆ ಕೊರ್ಡಿಲೆವ್‌ಸ್ಕಿ ಎಂದು ಹೆಸರಿಸಲಾಗಿದೆ. ಭೂಮಿಗೆ ಹೋಲಿಸಿದರೆ ಸುಮಾರು 9 ಪಟ್ಟು ಹೆಚ್ಚು ದೊಡ್ಡದಾಗಿದೆ. 65 ಸಾವಿರ ಮೈಲು ವ್ಯಾಪ್ತಿಯನ್ನು ಇದು ಹೊಂದಿದೆ ಎನ್ನಲಾಗಿದೆ.
ಸುಮಾರು ಒಂದು ಮೈಕ್ರೋಮೀಟರಿನಷ್ಟು ಸಣ್ಣ ಧೂಳಿನ ಕಣಗಳಿಂದ ಇದು ರೂಪಿಸ ಲ್ಪಟ್ಟಿದೆ. ಸೂರ್ಯನ ಕಿರಣಗಳು ಈ ಧೂಳಿನ ಕಣಗಳ ಮೇಲೆ ಬಿದ್ದಾಗ ಇವು ಪ್ರಕಾಶಮಾನ ವಾಗಿ ಹೊಳೆಯುತ್ತವೆ. ಈ ಧೂಳಿನ ಕಣಗಳು ಆಗಾಗ್ಗೆ ತನ್ನ ಸ್ಥಾನ ಬದಲಾಯಿಸುತ್ತಿರುತ್ತವೆ. ಕೋಟ್ಯಂತರ ವರ್ಷಗಳಿಂದಲೂ ಇವು ಅಸ್ತಿತ್ವದಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.