ದುಬೈ ಉದ್ಯೋಗಕ್ಕೆ ಇನ್ನು ಪ್ರಾಯೋಜಕತ್ವ ಬೇಕಿಲ್ಲ
ಅರ್ಥವ್ಯವಸ್ಥೆ ಚೇತರಿಕೆಗೆ ಯುಎಇ ಹಲವು ಕ್ರಮ ಘೋಷಣೆ
Team Udayavani, Sep 5, 2021, 11:15 PM IST
ದುಬೈ: ಇನ್ನು ಮುಂದೆ ಯುಎಇಯಲ್ಲಿ ಭಾರತೀಯರೂ ಸೇರಿದಂತೆ ವಿದೇಶಿಯರು ಕಂಪನಿಯ ಪ್ರಾಯೋಜಕತ್ವ ಇಲ್ಲದೆಯೇ ಉದ್ಯೋಗ ಮಾಡಲು ಅವಕಾಶವಿದೆ.
ಈವರೆಗೆ ಯಾರೇ ಇಲ್ಲಿ ಕೆಲಸಕ್ಕೆ ಸೇರಬೇಕಿದ್ದರೂ ಆ ಕಂಪ ನಿಯ ಪ್ರಾಯೋಜಕತ್ವದ ಮೂಲಕ ಸೀಮಿತ ಅವಧಿಯ ವೀಸಾ ನೀಡಲಾಗುತ್ತಿತ್ತು. ದೀರ್ಘಾವಧಿ ವಾಸಕ್ಕೆ ಅನುಮತಿ ಇರಲಿಲ್ಲ. ಆದರೆ ಈಗ ವಿತರಿಸಲಾಗುವ ಹೊಸ “ಗ್ರೀನ್ ವೀಸಾ’ದ ಅನ್ವಯ ಕಂಪನಿಯ ಪ್ರಾಯೋಜಕತ್ವ ಇಲ್ಲದೆಯೇ ಉದ್ಯೋಗ ಮಾಡಬಹುದು. ಜತೆಗೆ, ತಮ್ಮ ಹೆತ್ತವರು, ಮಕ್ಕಳಿಗೆ 25 ವರ್ಷಗಳ ಕಾಲ ಪ್ರಾಯೋಜಕತ್ವ ನೀಡಬಹುದು. ಉನ್ನತ ಕೌಶಲ್ಯ ಹೊಂದಿರುವವರು, ಹೂಡಿಕೆದಾರರು, ಉದ್ಯಮಿಗಳು, ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.
ಇದನ್ನೂ ಓದಿ:ಐತಿಹಾಸಿಕ ಪ್ಯಾರಾಲಿಂಪಿಕ್ಸ್ ಮುಕ್ತಾಯ
ಕಠಿಣ ನಿಯಮ ಸಡಿಲಿಕೆ:
ಹೆಚ್ಚು ಹೆಚ್ಚು ವಿದೇಶಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಠಿಣ ವಸತಿ ಕಾನೂನುಗಳನ್ನೂ ಯುಎಇ ಸಡಿಲಿಸಿದೆ. ಈವರೆಗೆ ಉದ್ಯೋಗ ಕಳೆದು ಕೊಂಡ ವ್ಯಕ್ತಿ ಕೂಡಲೇ ತನ್ನ ದೇಶಕ್ಕೆ ವಾಪಸಾಗಬೇಕಿತ್ತು. ಇನ್ನು ಮುಂದೆ ಕೆಲಸ ಕಳೆದುಕೊಂಡ ವರು ಹೊಸ ಉದ್ಯೋಗ ಹುಡುಕುವವರೆಗೂ ಅಲ್ಲಿರಲು ಅವ ಕಾಶವಿದೆ. ಜತೆಗೆ, ಹೆತ್ತವರ ಜೊತೆ ವಾಸವಿರುವ 15 ವರ್ಷ ಮೇಲ್ಪಟ್ಟ ಯುವಕರು ಅಲ್ಲೇ ಕೆಲಸಕ್ಕೆ ಸೇರಲು, ವಿಧವೆಯರು ಹಾಗೂ ವಿಚ್ಛೇದಿತ ದಂಪತಿ ವೀಸಾ ನಿರ್ಬಂಧವಿಲ್ಲದೆ ದೀರ್ಘ ಕಾಲ ಅಲ್ಲಿರಲು ಅನುಮತಿ ನೀಡಲಾಗಿದೆ.
ದೇಶದ ಅರ್ಥ ವ್ಯವಸ್ಥೆ ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ವಿದೇಶಿ ಹೂಡಿಕೆಗೆ ಉತ್ತೇಜನ ನೀಡಲು ನಿರ್ಧರಿಸಿದೆ ಎಂದು ವಿತ್ತ ಸಚಿವ ಅಬ್ದುಲ್ಲಾ ಬಿನ್ ತೋಕ್ ಭಾನುವಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.