ಇಂಗ್ಲೆಂಡ್ ವೃದ್ಧಾಶ್ರಮಗಳಲ್ಲಿ ಸಂಭವಿಸುತ್ತಿವೆ ನೂರಾರು ಸಾವು
Team Udayavani, Apr 11, 2020, 2:15 PM IST
ವೃದ್ಧಾಶ್ರಮಗಳಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕೃತ ಅಂಕಿಅಂಶಗಳು ಹೇಳಿದ್ದರೂ ನಿಜವಾದ ಸಾವಿನ ಸಂಖ್ಯೆ ಇದರ ಎಷ್ಟೋ ಪಾಲು ಹೆಚ್ಚು ಇದೆ. ವೃದ್ಧಾಶ್ರಮ ಮತ್ತು ಅನಾಥಶ್ರಮಗಳ ಸಾವಿನ ಲೆಕ್ಕ ಇಟ್ಟವರಿಲ್ಲ. ಸರಕಾರಕ್ಕೆ ಪ್ರಮಾಣಪತ್ರವಿರುವ ಸಾವುಗಳ ಲೆಕ್ಕ ಮಾತ್ರ ಸಿಗುತ್ತದೆ. ಎಷ್ಟೋ ಸಾವುಗಳು ಅಧಿಕೃತವಾಗಿ ದಾಖಲಾಗಿಲ್ಲ. ವೃದ್ಧಾಶ್ರಮಗಳ ಮೇಲೆ ಕೋವಿಡ್ 19 ಮಾಡಿರುವ ಪರಿಣಾಮಗಳನ್ನು ಸರಕಾರ ಸರಿಯಾಗಿ ಅಂದಾಜಿಸಿಲ್ಲ. ಹೀಗಾಗಿ ಅಲ್ಲಿಗೆ ಸಮರ್ಪಕವಾದ ನೆರವುಗಳು ತಲುಪುತ್ತಿಲ್ಲ.
ಇಂಗ್ಲೆಂಡ್: ಇಂಗ್ಲೆಂಡ್‌ನ ವೃದ್ಧಾಶ್ರಮಗಳಲ್ಲಿ ಕೋವಿಡ್ 19 ಸೋಂಕಿಗೆ ತುತ್ತಾಗಿರುವ ಇಲ್ಲವೇ ಸೋಂಕಿನ ಶಂಕೆ ಇರುವ ನೂರಾರು ಮಂದಿ ಅಸುನೀಗಿದ್ದಾರೆ. ಆದರೆ ಇವರ ಸಾವು ಅಧಿಕೃತವಾಗಿ ದಾಖಲಾಗಿಲ್ಲ ಎಂದು ದ ಗಾರ್ಡಿಯನ್ ವರದಿ ಮಾಡಿದೆ.
ಅತಿ ದೊಡ್ಡ ವೃದ್ಧಾಶ್ರಮದಲ್ಲಿ ಕಳೆದ ಮೂರು ವಾರಗಳಲ್ಲಿ ಕನಿಷ್ಠ 120 ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ ಇನ್ನೊಂದು ವೃದ್ಧಾಶ್ರಮದಲ್ಲಿ 88 ಮಂದಿ ಅಸುನೀಗಿದ್ದಾರೆ. ಈ ವೃದ್ಧಾಶ್ರಮಗಳಲ್ಲಿ ಸತ್ತವರಿಗಾಗಿ ದುಃಖೀಸಲು ಕೂಡ ಪುರುಸೊತ್ತಿಲ್ಲದಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಕೋವಿಡ್ 19 ಸಾವುಗಳ ಸಂಖ್ಯೆ ಏರುತ್ತಿರುವಂತೆಯೇ ವೃದ್ಧಾಶ್ರಮಗಳು ತಮ್ಮಲ್ಲಿರುವ ವೃದ್ಧರನ್ನು ರಕ್ಷಿಸಲು ಇನ್ನಿಲ್ಲದ ಹೋರಾಟ ನಡೆಸುತ್ತಿವೆ.
ಮಾ.27ಕ್ಕಾಗುವಾಗಲೇ ಇಂಗ್ಲಂಡ್ ಮತ್ತು ವೇಲ್ಸ್‌ನಲ್ಲಿರುವ ವೃದ್ಧಾಶ್ರಮಗಳಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕೃತ ಅಂಕಿ ಅಂಶಗಳು ಹೇಳಿದ್ದರೂ ನಿಜವಾದ ಸಾವಿನ ಸಂಖ್ಯೆ ಇದರ ಎಷ್ಟೋ ಪಾಲು ಹೆಚ್ಚು ಇದೆ. ವೃದ್ಧಾಶ್ರಮಗಳ ಮೇಲೆ ಕೋವಿಡ್ 19 ಮಾಡಿರುವ ಪರಿಣಾಮಗಳನ್ನು ಸರಕಾರ ಸರಿಯಾಗಿ ಅಂದಾಜಿಸಿಲ್ಲ. ಹೀಗಾಗಿ ಅಲ್ಲಿಗೆ ಸಮರ್ಪಕವಾದ ನೆರವುಗಳು ತಲುಪುತ್ತಿಲ್ಲ ಎಂದು ಪತ್ರಿಕೆ ಹೇಳಿದೆ.
ವೃದ್ಧರು ಬೇಗನೆ ವೈರಸ್‌ಗೆ ತುತ್ತಾಗುತ್ತಿದ್ದಾರೆ. ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯಕೀಯ ಸಿಬಂದಿಗಳು ಮತ್ತು ಪರಿಚಾರಕರು ಕೂಡ ಸರಿಯಾದ ರಕ್ಷಣಾ ಸಲಕರಣೆಗಳು ಮತ್ತು ಪೋಷಾಕುಗಳಿಲ್ಲದೆ ಪರದಾಡುತ್ತಿದ್ದಾರೆ.
ಗ್ಲಂಡ್‌ನಲ್ಲಿರುವ ಅರ್ಧಾಂಶಕ್ಕಿಂತಲೂ ಹೆಚ್ಚಿನ ವೃದ್ಧಾಶ್ರಮಗಳಲ್ಲಿ ಕೋವಿಡ್ 19 ಹಾವಳಿಯಿದೆ ಎಂದು ಕೇರ್ ಹೋಮ್ಸ್ ಉದ್ಯಮದ ಮುಖ್ಯಸœರು ಮತ್ತು ಅಲ್ಜೀಮರ್ ಸೊಸೈಟಿ ಹೇಳಿದೆ. ಅಲ್ಜೀಮರ್ ಸೊಸೈಟಿಯಡಿಯಲ್ಲಿರುವ ವೃದ್ಧಾಶ್ರಮಗಳಲ್ಲೇ 4ಲಕ್ಷದಷ್ಟು ವೃದ್ಧರಿದ್ದಾರೆ. ಇಂಗ್ಲಂಡ್‌ನ ಮುಖ್ಯ ವೈದ್ಯಾಧಿಕಾರಿ ಪ್ರೊ|ಕ್ರಿಸ್ ವಿಟ್ಟಿ ವೃದ್ಧಾಶ್ರಮಗಳಲ್ಲಿ ಬರೀ ಶೇ.9 ಕೋವಿಡ್ 19 ವೈರಸ್ ಕೇಸ್‌ಗಳು ವರದಿಯಾಗಿದೆ ಎಂದಿರುವ ವಾಸ್ತವಕ್ಕೆ ಬಹಳ ದೂರವಿರುವ ಅಂಕಿ ಅಂಶ.
ಇಂಗ್ಲಂಡ್‌ನ ಅತಿ ದೊಡ್ಡ ಸಮಾಜ ಸೇವಾ ಸಂಸ್ಥೆಯಾಗಿರುವ ಎಂಎಚ್‌ಎ ಅಡಿಯಲ್ಲಿರುವ ಯೋರ್ಕ್‌ಶಯರ್‌ನ ವೃದ್ಧಾಶ್ರಮದ ಶೇ.70ರಷ್ಟು ವೃದ್ಧರು ಕೋವಿಡ್ 19 ಸೋಂಕಿಗೊಳಗಾಗಿದ್ದಾರೆ. ಇಲ್ಲಿರುವ ಇನ್ನೊಂದು ವೃದ್ಧಾಶ್ರಮದಲ್ಲಿ ಈಗಾಗಲೇ 13 ಮಂದಿ ಕೋವಿಡ್ 19ಗೆ ಬಲಿಯಾಗಿದ್ದಾರೆ. ಲುಟನ್‌ನ ವೃದ್ಧಾಶ್ರಮದಲ್ಲಿ 15 ಮಂದಿ ಸತ್ತಿದ್ದಾರೆ. ಸ್ಕಾಟ್‌ಲ್ಯಾಂಡ್‌ನ ಒಂದು ವೃದ್ಧಾಶ್ರಮ 30 ಮಂದಿ ಅಸುನೀಗಿದ್ದಾರೆ ಎಂದು ಘೋಷಿಸಿದೆ. ಹೀಗೆ ದೇಶಾದ್ಯಾಂತ ವೃದ್ಧಾಶ್ರಮಗಳಲ್ಲಿ ಸಾವಿಗೀಡಾಗಿರುವವರ
ವರದಿಗಳು ಬರುತ್ತಿವೆ.
ಕಳೆದ ಆರು ತಿಂಗಳಲ್ಲಿ ವೃದ್ಧಾಶ್ರಮಗಳಲ್ಲಿ ಕೋವಿಡ್ 19ಗೆ ಬಲಿಯಾದವರೆಷ್ಟು ಮಂದಿ ಎಂಬ ಖಚಿತ ಲೆಕ್ಕ ಯಾರ ಬಳಿಯೂ ಇಲ್ಲ. ಏನಿದ್ದರೂ ನೂರಾರು ಸಾವುಗಳು ಸಂಭವಿಸಿವೆ ಎನ್ನುವುದು ನಿಜ. ಸರಕಾರ ಈ ವಿಚಾರವಾಗಿ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಈಗ ಸ್ಪಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಅಲ್ಲಿನ ನಾಗರಿಕರು.
ಮಾನಸಿಕ ಸಮಸ್ಯೆಯವರ ಗೋಳು ಅಪಾರ
ಮಾನಸಿಕ ಸಮಸ್ಯೆಯುಳ್ಳವರ ವೃದ್ಧಾಶ್ರಮಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ. ಈ ವೃದ್ಧರನ್ನು ಕ್ವಾರಂಟೈನ್ ಮಾಡುವ ಹಾಗಿಲ್ಲ. ಹೀಗಾಗಿ ಸಮಸ್ಯೆ ಬಿಗಡಾಯಿಸುತ್ತಿದೆ. ಅವರ ಶುಶ್ರೂಷಕರು ಇನ್ನಷ್ಟು ಟೆಸ್ಟಿಂಗ್ ಉಪಕರಣಗಳು ಹಾಗೂ ಇತರ ಸವಲತ್ತುಗಳಿಗಾಗಿ ಒತ್ತಾಯಿಸುತ್ತಿದ್ದಾರೆ.
ನೂರಾರು ಮಾನಸಿಕ ರೋಗಿಗಳು ವೃದ್ಧಾಶ್ರಮಗಳಲ್ಲಿ ಅಕ್ಷರಶಃ ಪರಿತ್ಯಕ್ತರಂತೆ ಬದುಕುತ್ತಿದ್ದಾರೆ. ಕೆಲವು ವೃದ್ಧಾಶ್ರಮಗಳ ಪರಿಚಾರಕರು ಸಾಮಾನ್ಯವಾದ ಮಾಸ್ಕ್ ಕೂಡ ಇಲ್ಲದೆ ಮುಖಕ್ಕೆ ಬಟ್ಟೆಯ ಚೀಲಗಳನ್ನು ಕಟ್ಟಿಕೊಂಡು ಆರೈಕೆ ಮಾಡುತ್ತಿದ್ದಾರೆ ಎಂದು ಅಲ್ಜೀಮರ್ ಸೊಸೈಟಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.