ಬಹುಮತ ಪಡೆಯುಲು ತೆರೆಸಾ ಮೇ ವಿಫಲ; ಬ್ರಿಟನ್ ಸಂಸತ್ತು ತ್ರಿಶಂಕು
Team Udayavani, Jun 9, 2017, 11:50 AM IST
ಲಂಡನ್ : ಬ್ರಿಟಿಷ್ ಪ್ರಧಾನಿ ತೆರೆಸಾ ಮೇ ಅವರ ಕನ್‌ಸರ್ವೇಟಿವ್ ಪಕ್ಷ ಬ್ರಿಟನ್ ಸಂಸತ್ತಿಗೆ ನಡೆದ ದಿಢೀರ್ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾಗಿದೆ. ಪರಿಣಾಮವಾಗಿ ಬ್ರಿಟಿಷ್ ಸಂಸತ್ತು ತ್ರಿಶಂಕು ಸ್ಥಿತಿಯನ್ನು ತಲುಪಿದೆ ಎಂದು ಮಾಧ್ಯಮ ವರದಿಗಳು ಇಂದು ಶುಕ್ರವಾರತಿಳಿಸಿವೆ.
650 ಸದಸ್ಯ ಬಲದ ಬ್ರಿಟಿಷ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 629 ಸ್ಥಾನಗಳ ಫಲಿತಾಂಶ ಬಹಿರಂಗವಾಗಿದೆ. ಆ ಪ್ರಕಾರ ಕನ್‌ಸರ್ವೇಟಿವ್ ಪಕ್ಷಕ್ಕೆ ಶೇ.42(+5 ಸ್ಥಾನ), ಲೇಬರ್ ಪಾರ್ಟಿಗೆ ಶೇ.40 (+10), ಲಿಬರಲ್ ಡೆಮೊಕ್ರಾಟ್ಸ್‌ಗೆ ಶೇ.7 (-1), ಸ್ಕಾಟಿಷ್ ನ್ಯಾಶನಲಿಸ್ಟ್ ಪಕ್ಷ (ಎಸ್‌ಎನ್‌ಪಿ)ಗೆ ಶೇ.3 (-2), ಯುಕೆ ಇಂಡಿಪೆಂಡೆಂಟ್ ಪಾರ್ಟಿಗೆ ಶೇ.2 (-11) ಮತ್ತು ಗ್ರೀನ್ಸ್ ಪಾರ್ಟಿಗೆ ಶೇ.2 (-2) ಪ್ರಾಪ್ತವಾಗಿವೆ ಎಂದು ಗಾರ್ಡಿಯನ್ ವರದಿ ಮಾಡಿದೆ.
ತೆರೇಸಾ ಮೇ ಲೆಕ್ಕಾಚಾರ ಉಲ್ಟಾ
ಬಲವಾದ ಜನಾದೇಶವನ್ನು ಪಡೆಯಬೇಕೆಂಬ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರ ಲೆಕ್ಕಾಚಾರ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ. ಪರಿಣಾಮವಾಗಿ ಆಕೆ ತನ್ನ ಹುದ್ದೆಯನ್ನು ತ್ಯಜಿಸಬೇಕೆಂಬ ಕರೆ ಈಗ ಬಲವಾಗಿ ಕೇಳಿ ಬರುತ್ತಿದೆ.
ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿ ಇರುವಂತೆಯೇ ಬ್ರಿಟನ್ ಸಂಸತ್ತು ಈಗ ಅತಂತ್ರ ಸ್ಥಿತಿಯನ್ನು ತಲುಪಿರುವ ಸೂಚನೆಗಳು ಸಿಗುತ್ತಿವೆ. ಪರಿಣಾಮವಾಗಿ ನಿರ್ಣಾಯಕ ಬ್ರೆಕ್ಸಿಟ್ ಮಾತುಕತೆ ಆರಂಭವು ವಿಳಂಬಗೊಳ್ಳುವುದು ಅನಿವಾರ್ಯವಾಗಿದೆ.
ಗುರುವಾರದ ಮತ ಎಣಿಕೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರಕಿಲ್ಲ. ಪ್ರಬಲ ಜನಾದೇಶದ ನಿರೀಕ್ಷೆಯಲ್ಲಿದ್ದ ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ತೀವ್ರ ನಿರಾಶೆಗೆ ಗುರಿಯಾಗಿರುವ ನಡುವೆಯೂ ತಾನು ದೇಶಕ್ಕೆ ಸ್ಥಿರತೆಯನ್ನು ಒದಗಿಸಲು ಶ್ರಮಿಸುವೆ ಎಂದಿದ್ದಾರೆ. ಲೇಬರ್ ಪಕ್ಷದ ಆಕೆಯ ಎದುರಾಳಿ ಜೆರೆಮಿ ಕಾರ್ಬಿನ್ ಅವರು “ತೆರೇಸಾ ಮೇ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕು’ ಎಂದು ಆಗ್ರಹಿಸಿದ್ದಾರೆ.
ಬಿಬಿಸಿಯ ಪರಿಷ್ಕೃತ ಅಂದಾಜಿನ ಪ್ರಕಾರ ಮೇ ಅವರ ಕನ್‌ಸರ್ವೇಟಿವ್ ಪಕ್ಷಕ್ಕೆ 650 ಸದಸ್ಯ ಬಲದ ಹೌಸ್ ಆಫ್ ಕಾಮನ್ಸ್‌ನಲ್ಲಿ 318 ಸ್ಥಾನಗಳು ಸಿಗಲಿದೆ. ಎಂದರೆ ಬಹುಮತ ಪ್ರಾಪ್ತಿಗೆ ಎಂಟು ಸ್ಥಾನಗಳ ಕೊರತೆ ಆಗುವುದು. ಎಡಪಂಥೀಯ ವಿರೋಧ ಪಕ್ಷವಾಗಿರುವ ಲೇಬರ್ ಪಾರ್ಟಿಗೆ 267 ಸ್ಥಾನಗಳು ದೊರಕಬಹುದು ಎನ್ನಲಾಗಿದೆ. ಪರಿಣಾಮವಾಗಿ ಬ್ರಿಟನ್ “ತ್ರಿಶಂಕು ಸಂಸತ್’ ಪಡೆಯುವುದು ಬಹುತೇಕ ನಿಶ್ಚಿತವಾದಂತಾಗಿದೆ.
ಸ್ಕೈ ನ್ಯೂಸ್ “ತೆರೇಸಾ ಮೇ ತನ್ನ ಬಹುಮತ ಕಳೆದುಕೊಳ್ಳಲಿದ್ದಾರೆ’ ಎಂದು ಭವಿಷ್ಯ ನುಡಿದಿತ್ತು. ಆಕೆಯ ಪಕ್ಷಕ್ಕೆ 315ರಿಂದ 325ರ ತನಕದ ಸ್ಥಾನಗಳು ಪ್ರಾಪ್ತವಾದೀತು ಎಂದು ಅದು ಹೇಳಿತ್ತು.
ಇದೇ ವೇಳೆ ಸ್ಕಾಟ್ಲಂಡ್‌ನಲ್ಲಿ ಸ್ವಾತಂತ್ರ್ಯ ಪರ ಸ್ಕಾಟಿಶ್ ನ್ಯಾಶನಲಿಸ್ಟ್ ಪಾರ್ಟಿ ಭಾರೀ ಹಿನ್ನಡೆಗೆ ಗುರಿಯಾಗಿದೆ. 2015ರಲ್ಲಿ ಇದು ಸ್ಕಾಟ್ಲಂಡ್‌ನ 59ರಲ್ಲಿ 56 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಅದರ ನಿರ್ವಹಣೆ ಅತ್ಯಂತ ಕಳಪೆಯಾಗಿದೆ. ತನ್ನ ಬಹುತೇಕ ಸ್ಥಾನಗಳನ್ನು ಅದು ಕನ್‌ಸರ್ವೇಟಿವ್, ಲೇಬರ್ ಮತ್ತು ಲಿಬರಲ್ ಡೆಮೊಕ್ರಾಟ್ಸ್‌ಗಳಿಗೆ ಬಿಟ್ಟುಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.