ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯ ಚೇತರಿಕೆ, ಐಸಿಯುವಿನಿಂದ ವಾರ್ಡ್ ಗೆ ಶಿಫ್ಟ್
Team Udayavani, Apr 10, 2020, 8:24 AM IST
ಲಂಡನ್: ಕೋವಿಡ್19 ಮಹಾಮಾರಿ ವೈರಸ್ ಗೆ ತುತ್ತಾಗಿ ನಲುಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿದ್ದು, ಅವರನ್ನು ಐಸಿಯುವಿನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಬೋರಿಸ್ ಜಾನ್ಸನ್ ಅವರು ಆಸ್ಪತ್ರೆಯಲ್ಲಿರುವ ಕಾರಣ ವಿದೇಶಾಂಗ ಸಚಿವ ಡೊಮಿನಿಕ್ ರಾಬ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು, ಪ್ರಧಾನಿಯವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ ಎಂದಿದ್ದಾರೆ.
55ರ ಹರೆಯದ ಜಾನ್ಸನ್ ಅವರ ಕೋವಿಡ್19 ವೈರಸ್ ಗೆ ತುತ್ತಾಗಿ ತೀವ್ರ ಅಸ್ವಸ್ತರಾದ್ದರಿಂದ ಸೋಮವಾರ ಅವರನ್ನು ಲಂಡನ್ ನಲ್ಲಿರುವ ಸೆಂಟ್ ಥಾಮಸ್ ಆಸ್ಪತ್ರೆಯ ಐಸಿಯುವಿಗೆ ದಾಖಲು ಮಾಡಲಾಗಿತ್ತು. ಎರಡು ವಾರಗಳ ಹಿಂದೆ ಬ್ರಿಟನ್ ಪ್ರಧಾನಿಗೆ ಮಾರಕ ವೈರಸ್ ತಗುಲಿರುವುದು ಖಚಿತವಾಗಿತ್ತು.
ಅಮೆರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಟ್ವೀಟ್ ಮಾಡಿ ‘ ಶುಭ ಸುದ್ದಿ, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ತೀವ್ರ ನಿಗಾ ಘಟಕದಿಂದ ವಾರ್ಡ್ ಗೆ ಸ್ಥಳಾಂತರವಾಗಿದ್ದಾರೆ. ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಬ್ರಿಟನ್ ನಲ್ಲಿ ಮುಂದಿನ ಹಲವು ವಾರಗಳ ವರೆಗೂ ಲಾಕ್ ಡೌನ್ ಮುಂದುವರೆಸಲಾಗುತ್ತದೆ ಎಂದು ಸರ್ಕಾರದ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.