ಕ್ಯಾನ್ಸರ್ ಅಂತ್ಹೇಳಿ 45 ಲಕ್ಷ ದೇಣಿಗೆ ಪಡೆದು ಜೈಲು ಸೇರಿದ್ಲು ಖತರ್ನಾಕ್ ವಂಚಕಿ
Team Udayavani, Feb 12, 2021, 10:12 PM IST
ಲಂಡನ್ : ಬೇರೆಯವರ ಕಷ್ಟಕ್ಕೆ ಜನ ಬೇಗನೆ ಸ್ಪಂದಿಸುತ್ತಾರೆ. ಅವರ ನೋವಿಗೆ ಕನಿಕರ ಪಟ್ಟು ಕೈಲಾದ ಸಹಾಯ ಮಾಡ್ತಾರೆ. ಜನರ ಈ ಒಳ್ಳೆಯತನವನ್ನೆ ಬಂಡವಾಳ ಮಾಡಿಕೊಂಡ ಲಂಡನ್ ಮಹಿಳೆಯೋರ್ವಳು ಬರೋಬ್ಬರಿ 45 ಲಕ್ಷ ರೂ. ದೇಣಿಗೆ ಪಡೆದು, ಇದೀಗ ಜೈಲು ಪಾಲಾಗಿದ್ದಾಳೆ.
ನಿಕೊಲೊ ಹೆಸರಿನ 42 ವಯಸ್ಸಿನ ಖತರ್ನಾಕ್ ಮಹಿಳೆ ತನಗೆ ಕ್ಯಾನ್ಸರ್ ಇದೆ ಅಂತಾ ಹೇಳಿ, ಜನರಿಂದ ಹಣ ಪಡೆದು ವಂಚನೆ ಮಾಡಿದ್ದಾಳೆ. ವಿಲಾಸಿ ಜೀವನ ನಡೆಸುತ್ತಿದ್ದ ನಿಕೊಲೊ, ನನಗೆ ಕ್ಯಾನ್ಸರ್ ಇದೆ. ಚಿಕಿತ್ಸೆಗೆ ಹಣ ಬೇಕಾಗಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಫೇಸ್ ಬುಕ್ ನಲ್ಲಿ ಪೇಜ್ ತೆರೆದು ದೇಣಿಗೆ ಸಂಗ್ರಹಿಸಲು ಶುರು ಮಾಡಿದ್ದಳು.
ಸುಮಾರು 600 ಕ್ಕೂ ಹೆಚ್ಚು ಜನರು ಆಕೆಯ ಮಾತು ನಂಬಿ ದೇಣಿಗೆ ನೀಡಿದ್ದರು. ಇದರಿಂದ ಸಂಗ್ರಹಗೊಂಡ 45 ಲಕ್ಷ ರೂ.ದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ ನಿಕೊಲೊ, 3 ಲಕ್ಷ ಹಣ ಪಾವತಿಸಿ ಫುಟ್ ಬಾಲ್ ಪಂದ್ಯ ನೋಡಲು ಟಿಕೆಟ್ ಖರೀದಿಸಿದ್ದಳು.
ಸದ್ಯ ಇವಳ ವಂಚನೆಯ ಮುಖವಾಡ ಕಳಚಿದೆ. ಲಂಡನ್ ನ್ಯಾಯಾಲಯ ಎರಡು ವರ್ಷ, ಒಂಭತ್ತು ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಜೈಲಿಗಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.