ಕಾಳಗ ನಡುವೆ ಮಾತುಕತೆ; ಬೆಲಾರುಸ್‌ ಗಡಿಯಲ್ಲಿ ಸಂಧಾನಕ್ಕೆ ಒಪ್ಪಿದ ಉಕ್ರೇನ್‌

ಖಾರ್ಕಿವ್‌ನಿಂದ ರಷ್ಯಾ ಸೈನಿಕರ ಹಿಮ್ಮೆಟ್ಟಿಸಿದ ಝೆಲೆನ್ಸ್ಕಿ ಪಡೆ

Team Udayavani, Feb 28, 2022, 7:00 AM IST

ಕಾಳಗ ನಡುವೆ ಮಾತುಕತೆ; ಬೆಲಾರುಸ್‌ ಗಡಿಯಲ್ಲಿ ಸಂಧಾನಕ್ಕೆ ಒಪ್ಪಿದ ಉಕ್ರೇನ್‌

ಮಾಸ್ಕೋ/ಕೀವ್‌: ರಷ್ಯಾ ಮತ್ತು ಉಕ್ರೇನ್‌ ನಡುವಿನ ಕಾಳಗ ಭೀಕರ ಹಂತಕ್ಕೆ ತಲುಪಿದ್ದು, ಕೀವ್‌ ನಂತರ ಈಗ ಉಕ್ರೇನ್‌ನ 2ನೇ ದೊಡ್ಡ ನಗರ ಖಾರ್ಕಿವ್‌ನೊಳಗೆ ರಷ್ಯಾದ ಸೇನೆ ಪ್ರವೇಶ ಮಾಡಿದೆ. ಇದರ ನಡುವೆಯೇ, ಶಾಂತಿ ಮಾತುಕತೆಗೆ ಉಭಯ ದೇಶಗಳು ಮುಂದಾಗಿದ್ದು, ಬೆಲಾರಸ್‌ ಗಡಿಯಲ್ಲಿ ಮಾತುಕತೆ ನಡೆಸಲಿವೆ.

ಭಾನುವಾರ ಉಕ್ರೇನ್‌ನ ಎರಡನೇ ಅತ್ಯಂತ ದೊಡ್ಡ ನಗರ ಖಾರ್ಕಿವ್‌ ವಶಪಡಿಸಲು ಘೋರ ಹೋರಾಟವೇ ನಡೆದಿದೆ. ನಗರದ ಪ್ರಾದೇಶಿಕ ಅಧಿಕಾರಿ ಒಲೇಹ್‌ ಸೆನುØಬೋವ್‌ ಮಾತನಾಡಿ ರಷ್ಯಾ ಸೈನಿಕರ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ. ಹಲವಾರು ಮಂದಿ ರಷ್ಯಾ ಸೈನಿಕರನ್ನು ಸೆರೆ ಹಿಡಿಯಲಾಗಿದೆ ಮತ್ತು ಕೆಲವರು ಶರಣಾಗತರಾಗಿದ್ದಾರೆ ಎಂದು ಹೇಳಿದ್ದಾರೆ. ಎರಡೂ ಸೇನೆಗಳ ನಡುವೆ ಕದನದಿಂದಾಗಿ ವೃದ್ಧೆ ಅಸುನೀಗಿದ್ದಾರೆ.

ಸ್ಥಳೀಯರು ಕಾಳಗವನ್ನು ಬಾನಂಗಳದಲ್ಲಿ ನಡೆದ ಸ್ಟಾರ್‌ ವಾರ್‌ ಎಂದು ಬಣ್ಣಿಸಿದ್ದಾರೆ. ಜತೆಗೆ ಒಂಭತ್ತು ಅಂತಸ್ತಿನ ವಚತಿ ಸಮುತ್ಛಯ ಸೇರಿದಂತೆ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ರಾಜಧಾನಿ ಕೀವ್‌ನ ವಿವಿಧ ಭಾಗಗಳಲ್ಲಿಯೂ ಹೋರಾಟಗಳು ಮುಂದುವರಿದಿವೆ.

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಮತ್ತು ಬೆಲಾರಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಶೆಂಕೋ ನಡುವೆ ಶಾಂತಿ ಮಾತುಕತೆ ಬಗ್ಗೆ ಪ್ರಸ್ತಾಪವಾಗಿದೆ. ಈ ಹಿನ್ನೆಲೆಯಲ್ಲಿ ಬೆಲಾರಸ್‌ ಗಡಿಯಲ್ಲಿರುವ ಚರ್ನೋಬಿಲ್‌ ವಿಶೇಷ ವಲಯದ ವ್ಯಾಪ್ತಿಯಲ್ಲಿ ಈ ಮಾತುಕತೆ ನಡೆಯಲಿದೆ.

ಉಕ್ರೇನ್‌ ವಿದೇಶಾಂಗ ಸಚಿವ ಡುಮೆಟ್ರಾ ಕುಲೇಬಾ ಮಾತನಾಡಿ, ಖಾರ್ಕಿವ್‌ನಲ್ಲಿ ರಷ್ಯಾ ಸೇನೆಗೆ ಹಿನ್ನಡೆಯಾಗಿರುವುದರಿಂದಲೇ ಪೂರ್ವ ಷರತ್ತುಗಳಿಲ್ಲದೆ ಮಾತುಕತೆಗೆ ಸಮ್ಮತಿ ನೀಡಿದೆ. ಇದು ನಮಗೆ ಸಂದ ಜಯ ಎಂದು ಹೇಳಿದ್ದಾರೆ.

ತೈಲ ಸ್ಥಾವರ, ಪೈಪ್‌ಲೈನ್‌ ಸ್ಫೋಟ:
ಬಿರುಸಿನ ಹೋರಾಟ ನಡೆಯುತ್ತಿದ್ದಂತೆಯೇ ಆ ನಗರಕ್ಕೆ ಅನಿಲ ಪೂರೈಕೆ ಮಾಡುವ ಪೈಪ್‌ಲೈನ್‌ ಅನ್ನು ಸ್ಫೋಟಿಸಲಾಗಿದೆ. ರಷ್ಯಾ ಯೋಧರು ಈ ಕೃತ್ಯವೆಸಗಿದ್ದಾರೆ. ಇದರಿಂದಾಗಿ ಖಾರ್ಕಿವ್‌ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಮತ್ತೊಂದೆಡೆ, ರಾಜಧಾನಿ ಕೀವ್‌ನ ವಿಮಾನ ನಿಲ್ದಾಣದ ಸಮೀಪದಲ್ಲಿರುವ ವ್ಯಾಸಿಲ್‌ಕೀವ್‌ ಎಂಬಲ್ಲಿರುವ ತೈಲ ಸ್ಥಾವರದ ಮೇಲೆ ಕೂಡ ಕ್ಷಿಪಣಿ ದಾಳಿ ನಡೆಸಲಾಗಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ರಷ್ಯಾಕ್ಕೆ “ಸ್ವಿಫ್ಟ್ ಹೊಡೆತ’
ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ವಿರುದ್ಧ ಮುಗಿ ಬಿದ್ದಿರುವ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು, ಆ ದೇಶದ ಅರ್ಥವ್ಯವಸ್ಥೆಗೆ ಮರ್ಮಾಘಾತ ನೀಡುವ ಯೋಜನೆ ರೂಪಿಸಿವೆ. ಅಂತಾರಾಷ್ಟ್ರೀಯ ಹಣಕಾಸು ಒಕ್ಕೂಟ ವ್ಯವಸ್ಥೆ, “ಸ್ವಿಫ್ಟ್’ ನಿಂದ ರಷ್ಯಾದ ಕೆಲವು ಬ್ಯಾಂಕ್‌ಗಳಿಗೆ ನಿಷೇಧ ಹೇರಲಾಗಿದೆ. ಇದರಿಂದಾಗಿ ರಷ್ಯಾದ ಕಂಪನಿಗಳಿಗೆ ಮತ್ತು ಶ್ರೀಮಂತರಿಗೆ ವಿದೇಶಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯಿಕ ವಹಿವಾಟು ನಡೆಸುವುದಕ್ಕೆ ಭಾರೀ ಪ್ರಮಾಣದಲ್ಲಿ ಅಡ್ಡಿ ಉಂಟಾಗಲಿದೆ.

ಅಂತಾರಾಷ್ಟ್ರೀಯ ಕೋರ್ಟ್‌ಗೆ
ದೇಶದ ಮೇಲೆ ದಾಳಿ ನಡೆಸಿ ರಷ್ಯಾ ಸೇನೆ ನರಹತ್ಯೆ ಎಸಗಿದೆ ಎಂದು ಉಕ್ರೇನ್‌ ಆರೋಪಿಸಿ, ದ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್‌ಗೆ ದೂರು ನೀಡಿದೆ. ತಕ್ಷಣವೇ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆದೇಶ ನೀಡಬೇಕು ಎಂದು ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.

688 ಮಂದಿ ವಿದ್ಯಾರ್ಥಿಗಳ ಆಗಮನ
ಉಕ್ರೇನ್‌ನಲ್ಲಿ ಅತಂತ್ರರಾಗಿರುವ 13 ಸಾವಿರ ವಿದ್ಯಾರ್ಥಿಗಳ ಪೈಕಿ ಭಾನುವಾರ 688 ಮಂದಿ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸಾಗಿದ್ದಾರೆ. “ಆಪರೇಷನ್‌ ಗಂಗಾ’ದ ಅನ್ವಯ ರೊಮೇನಿಯಾ ರಾಜಧಾನಿ ಬುಕಾರೆಸ್ಟ್‌ನಿಂದ, ಹಂಗೇರಿ ರಾಜಧಾನಿ ಬುಡಾಫೆಸ್ಟ್‌ನಿಂದ ಏರ್‌ ಇಂಡಿಯಾದ ಮೂರು ವಿಮಾನಗಳಲ್ಲಿ ಮರಳಿದ್ದಾರೆ. ಇದುವರೆಗೆ ಒಟ್ಟು 907 ಮಂದಿ ವಿದ್ಯಾರ್ಥಿಗಳು ದೇಶಕ್ಕೆ ಆಗಮಿಸಿದಂತಾಗಿದೆ. ಶನಿವಾರ ಮೊದಲ ವಿಮಾನ ಮುಂಬೈಗೆ ಆಗಮಿಸಿತ್ತು.

ಸಮರಾಂಗಣದಲ್ಲಿ
4,300- ಹತರಾಗಿರುವ ರಷ್ಯಾ ಯೋಧರು
146- ಯುದ್ಧಟ್ಯಾಂಕ್‌ಗಳು
27- ವಿಮಾನಗಳು
26- ಹೆಲಿಕಾಪ್ಟರ್‌ಗಳು
3,68,000- ಉಕ್ರೇನ್‌ ನಿರಾಶ್ರಿತರು
1,50,000- ಪೋಲೆಂಡ್‌ ಒಂದಕ್ಕೇ ತೆರಳಿದ ಉಕ್ರೇನ್‌ ನಿರಾಶ್ರಿತರು
240- ಅಸುನೀಗಿರುವ ಉಕ್ರೇನ್‌ ನಾಗರಿಕರು

ಅಣ್ವಸ್ತ್ರ ಪ್ರಯೋಗಿಸುವರೇ ಪುಟಿನ್‌?
ಮತ್ತೊಂದು ಹಿರೋಶಿಮಾ ಮತ್ತು ನಾಗಸಾಕಿ ದುರಂತ ಸಂಭವಿಸಲಿದೆಯೋ? ಹೀಗೊಂದು ಆತಂಕ ಜಗತ್ತಿಗೆ ಕಾಡಲಾರಂಭಿಸಿದೆ. ಉಕ್ರೇನ್‌ ವಿರುದ್ಧದ ಕಾಳಗದಲ್ಲಿ ತಮ್ಮ ದೇಶದ ಅಣ್ವಸ್ತ್ರ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಭಾನುವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿರುವುದೇ ಈ ಬೆಳವಣಿಗೆಗೆ ಕಾರಣ.  ಮಾಸ್ಕೋದಲ್ಲಿ ಸೇನೆಯ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಮಾತನಾಡಿದ ಪುಟಿನ್‌, ಯಾವುದೇ ಪರಿಸ್ಥಿತಿಯನ್ನು ಎದುರಿಸಲೂ ಅಣ್ವಸ್ತ್ರ ಪಡೆಗಳು ಸಿದ್ಧರಾಗಿರಬೇಕು. ಅದಕ್ಕಾಗಿ ಆ ಪಡೆಯ ಮುಖ್ಯಸ್ಥರು ಸದಾ ಸಿದ್ಧತೆಯಲ್ಲಿರಬೇಕು ಎಂದು ಆದೇಶ ನೀಡಿದ್ದಾರೆ. ಇದರ ಜತೆಗೆ ನ್ಯಾಟೋ ರಾಷ್ಟ್ರಗಳು ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಪುಟಿನ್‌ ಸಭೆಯಲ್ಲಿ ಆರೋಪಿಸಿದ್ದಾರೆ. ಜತೆಗೆ ದೇಶದ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುತ್ತಿದ್ದಾರೆ ಎಂದರು. ಪುಟಿನ್‌ ಹೇಳಿಕೆ ಹಿನ್ನೆಲೆಯಲ್ಲಿ ಬುಧವಾರ ಮಹತ್ವದ ಸಭೆ ನಡೆಯಲಿದೆ.

ಟಾಪ್ ನ್ಯೂಸ್

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.