ಟ್ರಂಪ್ ಕರೆ ಮಾಡಿದ 90 ನಿಮಿಷಗಳಲ್ಲಿ ಉಕ್ರೇನ್‌ಗೆ ಮಿಲಿಟರಿ ಸಹಾಯ ಸ್ಥಗಿತ


Team Udayavani, Dec 23, 2019, 8:30 PM IST

Donald-Trump01-730

ವಾಷಿಂಗ್ಟನ್‌: ಅಮೆರಿಕಯ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧಿಕಾರದಿಂದ ಅವರನ್ನು ಕೆಳಗಿಳಿಸುವ ಮಹಾಭಿಯೋಗ ಪ್ರಕ್ರಿಯೆಗೆ (ಇಂಪೀಚ್‌ಮೆಂಟ್‌) ಚಾಲನೆ ದೊರೆತಿದೆ. ಈ ನಡುವೆ ಟ್ರಂಪ್‌ ವಿರುದ್ಧ ಮತ್ತೊಂದು ದೋಷಾರೋಪಣೆ ಕೇಳಿಬಂದಿದೆ.
ಜೋ ಬೈಡನ್‌ ಅವರ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್‌ ಮೇಲೆ ಒತ್ತಡ ಹೇರಿರುವ ಟ್ರಂಪ್‌ ಅವರು ತನಿಖೆ ನಡೆಸುವವರೆಗೆ ಮಿಲಿಟರಿ ಸಹಾಯವನ್ನು ತಡೆಹಿಡಿಯುವಂತೆ ಮಾಡುವಂತೆ ಅವರು ಆದೇಶಿಸಿದ್ದರು ಎಂದು ವರದಿಯಾಗಿದೆ.

ಟ್ರಂಪ್‌ ಅವರು ಜುಲೈ 25ರಂದು ಉಕ್ರೇನ್‌ ಅಧ್ಯಕ್ಷ ವ್ಲಾದಿಮೆರ್ ಎಲೆನ್ಸ್ಕಿ (Volodymyr Zelensky) ಅವರಿಗೆ ಮಾಡಿದ ದೂರವಾಣಿ ಕರೆಮಾಡಿದ್ದರು. 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್‌ ಅವರು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಲಿದ್ದು, ಅವರ ವಿರುದ್ಧ ಆರೋಪವೊಂದನ್ನು ಹೊರಿಸುವಂತೆ ಅವರು ಕೊರಿಕೊಂಡಿದ್ದರು.

ಉಕ್ರೇನ್‌ ತನಿಖೆಗೆ ಮುಂದಾಗದೇ ತಾನು ಕೊಡಬೇಕಿದ್ದ 400 ಮಿಲಿಯನ್‌ ಡಾಲರ್‌ ಮೊತ್ತದ ಸಹಾಯವನ್ನು ನೀಡದಿರುವಂತೆ ಪೆಂಟಗನ್‌ಗೆ ತಾಕೀತು ಮಾಡಿದ್ದರು. ಈ ಸಂಬಂಧ ಅವರ ಫೋನ್‌ ಮಾತುಕತೆ ನಡೆದ 90 ನಿಮಿಷಗಳಲ್ಲಿ ಅನುದಾನವನ್ನು ಸ್ಥಗಿತಮಾಡಲಾಗಿತ್ತು ಎಂದು ತನಿಖಾ ವರದಿಯೊಂದು ತಿಳಿಸಿದೆ.

ಜುಲೈ 25ರಂದು ವ್ಲಾದಿಮೆರ್ ಎಲೆನ್ಸ್ಕಿ ಅವರಿಗೆ ಕರೆ ಮಾಡಿದ್ದರು. ಕರೆ ಮಾಡಿದ 31 ನಿಮಿಷದಲ್ಲಿ (ಬೆಳಗ್ಗೆ) 11.04ಕ್ಕೆ ಮೇಲ್‌ ವೊಂದನ್ನು ಕಳುಹಿಸಿಕೊಡಲಾಗಿತ್ತು.
ಜೋ ಬೈಡನ್‌ ಅವರ ಮಗ ಹಂಟರ್‌ ಬೈಡನ್‌ ಉಕ್ರೇನಿನಲ್ಲಿ ವ್ಯಾಪಾರಿಯಾಗಿದ್ದಾರೆ. ತಂದೆ ಮಗನ ವಿರುದ್ಧ ಉಕ್ರೇನಿನಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸಿ ಪ್ರಕರಣವೊಂದರಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕು ಎಂದು ಟ್ರಂಪ್‌ ಅವರು ಎಲೆನ್ಸ್ಕಿ ಅವರನ್ನು ಕೋರಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಟ್ರಂಪ್‌ ಮಹಾಭಿಯೋಗವನ್ನು ಎದುರಿಸುತ್ತಿದ್ದಾರೆ. ಅಮೆರಿಕದ ಸೆನೆಟ್‌ನಲ್ಲಿ ಈ ಮಹಾಭಿಯೋಗದ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಪ್ರಕ್ರಿಯೆ ಹೇಗೆ ನಡೆಯುತ್ತದೆ
ಅಮೆರಿಕದ ಅಧ್ಯಕ್ಷರ ‘ಇಂಪೀಚ್‌ಮೆಂಟ್‌’ ಮತ್ತು ಆನಂತರದ ಪದಚ್ಯುತಿಯು ಎರಡು ಹಂತದ ಪ್ರಕ್ರಿಯೆಯಾಗಿದೆ. ಅಧ್ಯಕ್ಷರ ವಿರುದ್ಧ ಆಪಾದನೆಗಳನ್ನು ಪ್ರಸ್ತಾಪಿಸುವ ಗೊತ್ತುವಳಿಯೊಂದನ್ನು ಸಂಸತ್ತಿನ ಕೆಳಮನೆಯಲ್ಲಿ ಮೊದಲು ಮಂಡಿಸಬೇಕು. ಈ ಗೊತ್ತುವಳಿಯ ಕುರಿತು ಸಂಸದರು ಚರ್ಚೆ ನಡೆಸಬೇಕು. ಗೊತ್ತುವಳಿ ಬಹುಮತದಿಂದ ಅಂಗೀಕಾರ ಆದರೆ ಅಧ್ಯಕ್ಷರು ‘ಇಂಪೀಚ್‌’ ಆದಂತೆ. ಆಗ ಆತ ಸೆನೆಟ್‌ ಸಭೆಯಲ್ಲಿ ವಿಚಾರಣೆ ಎದುರಿಸಬೇಕು.

ವಿಚಾರಣೆ ನಡೆಸುವುದು ಯಾರು?
ಒಂದು ವೇಳೆ ಟ್ರಂಪ್‌ ವಿರುದ್ಧದ ಕೇಸು ವಿಚಾರಣೆಯ ಹಂತ ತಲುಪಿದರೆ, ವಿಚಾರಣೆಯ ಅಧ್ಯಕ್ಷತೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಹಿಸುವರು. ಸೆನೆಟ್‌ ಮುಂದೆ ತಮ್ಮ ಪರ ವಾದ ಮಂಡಿಸಲು ನ್ಯಾಯವಾದಿಯೊಬ್ಬರನ್ನು ಟ್ರಂಪ್‌ ನೇಮಿಸಿಕೊಳ್ಳಬಹುದು. ವಿಚಾರಣೆಯ ಕೊನೆಯ ಹಂತದಲ್ಲಿ ಸೆನೆಟ್‌ ಸಭೆ ಮತ ಚಲಾಯಿಸುತ್ತದೆ.

ಟ್ರಂಪ್‌ ಅವರಿಗೆ ಶಿಕ್ಷೆಯ ಪರವಾಗಿ ಸೆನೆಟ್‌ನ ಮೂರನೆಯ ಎರಡರಷ್ಟು ಸದಸ್ಯರು ಮತ ಚಲಾಯಿಸಿದರೆ ಟ್ರಂಪ್‌ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ. ಇನ್ನುಳಿದ ಕೆಲವು ತಿಂಗಳುಗಳನ್ನು ಉಪಾಧ್ಯಕ್ಷರು ಅಮೆರಿಕದ ಅಧ್ಯಕ್ಷರಾಗಿರುತ್ತಾರೆ.

ಸಂವಿಧಾನ ಏನು ಹೇಳುತ್ತದೆ
ಅಮೆರಿಕದ ಸಂಸತ್ತಿನ ಕೆಳಮನೆಗೆ ಇಂಪೀಚ್‌ಮೆಂಟ್‌ ಅಧಿಕಾರವಿದ್ದರೆ ಎಲ್ಲ ಇಂಪೀಚ್‌ಮೆಂಟ್‌ಗಳ ವಿಚಾರಣೆ ನಡೆಸುವ ಅಧಿಕಾರವನ್ನು ಸೆನೆಟ್‌ (ಮೇಲ್ಮನೆ) ಹೊಂದಿರುತ್ತದೆ. ಸನೆಟ್‌ನಲ್ಲಿ ಜರುಗುವ ಇಂಪೀಚ್‌ಮೆಂಟ್‌ ವಿಚಾರಣೆಗಳ ಅಧ್ಯಕ್ಷತೆಯನ್ನು ಅಮೆರಿಕದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ವಹಿಸುತ್ತಾರೆ.

ದೇಶದ್ರೋಹ, ಭ್ರಷ್ಟಾಚಾರ, ಇತರೆ ಉನ್ನತ ಹಂತದ ಅಪರಾಧಗಳು ಇಲ್ಲವೇ ದುರ್ವರ್ತನೆಗಳಿಗಾಗಿ ಶಿಕ್ಷೆಯಾದರೆ ಅಮೆರಿಕದ ಅಧ್ಯಕ್ಷರನ್ನು ಇಂಪೀಚ್‌ಮೆಂಟ್‌ ಮೇರೆಗೆ ಹುದ್ದೆಯಿಂದ ಕೆಳಗಿಳಿಸಬಹುದು ಎಂದು ಅಮೆರಿಕದ ಸಂವಿಧಾನ ಹೇಳುತ್ತದೆ.

ಟ್ರಂಪ್‌ಗೆ‌ ಸಮಸ್ಯೆಇಲ್ಲ
ಡೊನಾಲ್ಡ್‌ ಟ್ರಂಪ್‌ ಅವರ ಇಂಪೀಚ್‌ಮೆಂಟ್‌ ಪ್ರಕ್ರಿಯೆ ಆರಂಭವಾಗಿದ್ದರೂ ವಿಚಾರಣೆಯ ಹಂತ ತಲುಪುವ ಸಾಧ್ಯತೆ ವಿರಳ ಎನ್ನಲಾಗಿದೆ. ಸೆನೆಟ್‌ನಿಂದ ಶಿಕ್ಷೆಗೊಳಗಾಗುವ ಅವಕಾಶ ಇನ್ನಷ್ಟೂ ವಿರಳ. ಕೆಳಮನೆಯಲ್ಲಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷಕ್ಕೆ ಬಹುಮತ ಇಲ್ಲ.

ಡೆಮಾಕ್ರಟಿಕ್‌ ಪಕ್ಷ 235 ಸದಸ್ಯರನ್ನೂ, ರಿಪಬ್ಲಿಕನ್‌ ಪಕ್ಷ 199 ಸದಸ್ಯರನ್ನೂ ಹೊಂದಿದೆ. ಒಬ್ಬ ಪಕ್ಷೇತರ. ಮೇಲ್ಮನೆಯಲ್ಲಿ ಬಹುಮತ ರಿಪಬ್ಲಿಕನ್‌ ಪಕ್ಷದ್ದು. 53 ಮಂದಿ ರಿಪಬ್ಲಿಕನ್‌ ಪಕ್ಷದ ಸದಸ್ಯರಿದ್ದರೆ, ಡೆಮಕ್ರಾಟ್‌ಗಳ ಸಂಖ್ಯೆ 45. ಅಧ್ಯಕ್ಷನಿಗೆ ಶಿಕ್ಷೆ ವಿಧಿಸಲು ಅಗತ್ಯವಿರುವ ಮತಗಳ ಸಂಖ್ಯೆ 67.

ಅಧ್ಯಕ್ಷ ಪದವಿ ಕಳೆದುಕೊಂಡ ಇತಿಹಾಸವೇ ಇಲ್ಲ
ಈ ತನಕ ಅಮೆರಿಕದ ಯಾವುದೇ ಅಧ್ಯಕ್ಷರನ್ನು ಇಂಪೀಚ್‌ಮೆಂಟ್‌ ಅನ್ವಯ ಪದಚ್ಯುತಗೊಳಿಸಲಾಗಿಲ್ಲ. 1968ರಲ್ಲಿ ಆ್ಯಂಡ್ರೂ ಜಾನ್ಸನ್‌ ಮತ್ತು 1998ರಲ್ಲಿ ಬಿಲ್‌ ಕ್ಲಿಂಟನ್‌ ಅವರು ಇಂಪೀಚ್‌ಮೆಂಟ್‌ ಎದುರಿಸಿದರು. ಆದರೆ ಸೆನೆಟ್‌ ಅವರಿಗೆ ಶಿಕ್ಷೆ ವಿಧಿಸಲಿಲ್ಲ.

1974ರಲ್ಲಿ ವಾಟರ್‌ ಗೇಟ್‌ ಹಗರಣದ ಆಪಾದನೆ ಎದುರಿಸಿದ ರಿಚರ್ಡ್‌ ನಿಕ್ಸನ್‌ ತಮ್ಮ ಪದಚ್ಯುತಿಗೆ ಮುನ್ನವೇ ರಾಜೀನಾಮೆ ನೀಡಿದ್ದರು. ಹಿಂದೆ ಅಮೆರಿಕದ ಸಂಸತ್ತಿನ ಕೆಳಮನೆಯು, ಅಧ್ಯಕ್ಷ ಆ್ಯಂಡ್ರೂ ಜಾನ್ಸನ್‌ ಅವರ ವಿರುದ್ಧದ ಆಪಾದನೆಗಳ ಕುರಿತು ನಿರ್ಣಯ ಮಂಡಿಸಿ ಬಹುಮತದಿಂದ ಅಂಗೀಕರಿಸಿತ್ತು. ಸೆನೆಟ್‌ ಮುಂದೆ ನಡೆದ ವಿಚಾರಣೆಯ ನಂತರ ಜರುಗಿದ ಮತದಾನದಲ್ಲಿ ಜಾನ್ಸನ್‌ ಒಂದು ಮತದ ಅಂತರದಲ್ಲಿ ಪಾರಾಗಿದ್ದರು. ಅವರೂ ರಿಪಬ್ಲಿಕನ್‌ ಪಾರ್ಟಿಗೆ ಸೇರಿದವರಾಗಿದ್ದರು.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Canada Court: ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Canada Court:ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Pakistan; 6 brothers marry 6 sisters to save expenses!

Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.