ಪುಟಿನ್ ಆಪ್ತರೇ ಅವರ ಹತ್ಯೆ ಮಾಡಲಿದ್ದಾರೆ..: ಭವಿಷ್ಯ ನುಡಿದ ಉಕ್ರೇನ್ ಅಧ್ಯಕ್ಷ
Team Udayavani, Feb 27, 2023, 3:15 PM IST
ಕೈವ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅವರ ಆಪ್ತರೇ ಹತ್ಯೆ ಮಾಡುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ನ್ಯೂಸ್ ವೀಕ್ ನಲ್ಲಿನ ವರದಿಯ ಪ್ರಕಾರ, ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ‘ಇಯರ್’ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.
ರಷ್ಯಾದ ಅಧ್ಯಕ್ಷರ ನಾಯಕತ್ವದಲ್ಲಿ ದುರ್ಬಲತೆಯ ಅವಧಿ ಬರಲಿದೆ. ಇದರಿಂದಾಗಿ ಅವರ ಆಪ್ತರೇ ಅವರ ವಿರುದ್ಧ ‘ಕ್ರಮ’ ಕೈಗೊಳ್ಳಬಹುದು ಎಂದು ಎಂದು ಝೆಲೆನ್ಸ್ಕಿ ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶುಕ್ರವಾರ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯೂಸ್‌ವೀಕ್ ವರದಿ ಮಾಡಿದೆ.
ಇದನ್ನೂ ಓದಿ:ರಾಜಕೀಯ ಧಣಿಗಳಿಗೆ ವಿಧೇಯರಾಗಿ ಸಿಬಿಐಅಧಿಕಾರಿಗಳು ಸಿಸೋಡಿಯಾರನ್ನು ಬಂಧಿಸಿದ್ದಾರೆ;ಕೇಜ್ರಿವಾಲ್
ಯುದ್ಧದಿಂದ ಆಗುತ್ತಿರುವ ಜೀವಹಾನಿಗಳ ಕಾರಣದಿಂದ ಪುಟಿನ್ ಅವರ ನಿಕಟ ಮಿತ್ರರು ಅವರ ಬಗ್ಗೆ ಹತಾಶರಾಗಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಈ ಹಿಂದೆ ವರದಿ ಮಾಡಿದೆ.
ಜಂಟಿ ಪಡೆಗಳ ಕಾರ್ಯಾಚರಣೆಯ ಕಮಾಂಡರ್ ಮೇಜರ್ ಜನರಲ್ ಎಡ್ವರ್ಡ್ ಮೈಖೈಲೋವಿಚ್ ಮೊಸ್ಕಲೋವ್ ಅವರನ್ನು ಝೆಲೆನ್ಸ್ಕಿ ಭಾನುವಾರ ವಜಾಗೊಳಿಸಿದ್ದಾರೆ ಎಂದು ಸಿಎನ್ ಎನ್ ವರದಿ ಮಾಡಿದೆ.
ಕಳೆದ ಮಾರ್ಚ್‌ನಲ್ಲಿ ಲೆಫ್ಟಿನೆಂಟ್ ಜನರಲ್ ಒಲೆಕ್ಸಾಂಡರ್ ಪಾವ್ಲಿಯುಕ್ ಅವರನ್ನು ಕೈವ್ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥರನ್ನಾಗಿ ನೇಮಿಸಿದಾಗ ಮೊಸ್ಕಲೋವ್ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.