ನೆರವು ದಾನವಲ್ಲ, ಜಾಗತಿಕ ಭದ್ರತೆಯ ಮೇಲಿನ ಹೂಡಿಕೆ: ಝೆಲೆನ್‌ಸ್ಕಿ
Team Udayavani, Dec 23, 2022, 6:15 AM IST
ವಾಷಿಂಗ್ಟನ್: ರಷ್ಯಾದ ಆಕ್ರಮಣದ ವಿರುದ್ಧದ ತನ್ನ ಹೋರಾಟಕ್ಕೆ ಸಹಾಯ ಮಾಡಲು ಅಮೆರಿಕ ಸಂಸತ್ ಹತ್ತಾರು ಶತಕೋಟಿ ಡಾಲರ್ ಮೊತ್ತದ ನೆರವು ನೀಡಲು ಅನುಮೋದನೆ ನೀಡಿದೆ. ಇದು ದಾನವಲ್ಲ, ಬದಲಾಗಿ ಜಾಗತಿಕ ಭದ್ರತೆಯ ಮೇಲಿನ ಹೂಡಿಕೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು.
ರಷ್ಯಾ ಜತೆಗಿನ ಯುದ್ಧ ಆರಂಭವಾದ ನಂತರ ಎರಡನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಅವರು, ಅಮೆರಿಕ ಸಂಸತ್ ಅನ್ನು ಉದ್ದೇಶಿಸಿ ಮಾತನಾಡಿ, “ಉಕ್ರೇನ್‌ಗೆ ಬೆಂಬಲ ನೀಡುವುದನ್ನು ಜಗತ್ತು ಮುಂದುವರಿಸುತ್ತದೆ ಎಂಬ ಆಶಾಭಾವ ನನಗಿದೆ,’ ಎಂದರು.
“ನಿಮ್ಮ ಹಣ ದಾನವಲ್ಲ. ಇದು ಜಾಗತಿಕ ಭದ್ರತೆ ಹಾಗೂ ಪ್ರಜಾಪ್ರಭುತ್ವದ ಮೇಲಿನ ಹೂಡಿಕೆಯಾಗಿದೆ. ಅನೇಕ ಕಹಿ ಘಟನೆಗಳ ನಡುವೆಯೂ ಉಕ್ರೇನ್ ಸೋತಿಲ್ಲ, ಇನ್ನೂ ಜೀವಂತವಾಗಿದೆ. ಯುದ್ಧದಲ್ಲಿ ನಾವು ರಷ್ಯಾವನ್ನು ಸೋಲಿಸಲಿದ್ದೇವೆ,’ ಎಂದು ಝೆಲೆನ್‌ಸ್ಕಿ ಭರವಸೆ ವ್ಯಕ್ತಪಡಿಸಿದರು. ಇದು ಅಮೆರಿಕಕ್ಕೆ ಝೆಲೆನ್‌ಸ್ಕಿ ಅವರ ಸರ್‌ಪ್ರೈಸ್ ಪ್ರವಾಸವಾಗಿದ್ದು, ಅವರ ಈ ಭೇಟಿಯನ್ನು ಬಹಿರಂಗಪಡಿಸದೇ ಗುಟ್ಟಾಗಿಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.