ನಡುಕದ ನಡುವೆ ಭಾವ ಬಂಧ: ಅಂದು ಸಂಗೀತಗಾರರು,ಇಂದು ಸಮಾಜ ಸೇವಕರು! :
Team Udayavani, Mar 4, 2022, 7:45 AM IST
ಪ್ರಾಣಿಗಳಿಗೂ ತೆರವಿಗೆ ಅವಕಾಶ! :
ಮನುಷ್ಯ ಮತ್ತು ಪ್ರಾಣಿಗಳ ಅನುಬಂಧ ಇಂದು ನಿನ್ನೆಯದ್ದಲ್ಲ. ಅದು, ಮನುಷ್ಯನ ಉಗಮದಷ್ಟೇ ಹಳೆಯದು. “ಯುದ್ಧಪೀಡಿತ ಉಕ್ರೇನ್‌ನನ್ನು ಯಾವಾಗ ಬಿಟ್ಟು ನಮ್ಮ ದೇಶಕ್ಕೆ ಹೋದೇವೋ’ ಎಂದು ತುದಿಗಾಲಲ್ಲಿ ಕಾಯುತ್ತಿರುವ ಭಾರತೀಯರಲ್ಲಿ ಕೆಲವರು, ತಮ್ಮ ಸಾಕು ಪ್ರಾಣಿಗಳನ್ನು ಬಿಟ್ಟು ಹೋಗುವುದು ಹೇಗೆ ಎಂಬ ತೊಳಲಾಟದಲ್ಲಿದ್ದಾರೆ. ಇದನ್ನು ಅರ್ಥ ಮಾಡಿಕೊಂಡಿರುವ ಭಾರತ ಸರಕಾರ, ವಾಯುಪಡೆಯ ಸಿ-17 ವಿಮಾನದಲ್ಲಿ ಸಾಕು ಪ್ರಾಣಿಗಳನ್ನೂ ಕರೆತರಲು ಅವಕಾಶ ಕಲ್ಪಿಸಿದೆ. ಈ ವಿಮಾನ ಹತ್ತಲು ಬರುತ್ತಿರುವ ಹಲವಾರು ನಿರಾಶ್ರಿತರು, ತಮ್ಮ ಜತೆಗೆ ನಾಯಿ, ಇನ್ನಿತರ ಸಾಕು ಪ್ರಾಣಿಗಳನ್ನು ತರುತ್ತಿರುವ ವೀಡಿಯೋಗಳನ್ನು ಕೇಂದ್ರ ಸಚಿವರಾದ ವಿಜಯ್ ಕುಮಾರ್ ಸಿಂಗ್, ಜನರಲ್. ವಿ.ಕೆ. ಸಿಂಗ್ ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಅಂದು ಸಂಗೀತಗಾರರು, ಇಂದು ಸಮಾಜ ಸೇವಕರು! :
ದಿನದ 24 ಗಂಟೆಯೂ ಸಂಗೀತದಲ್ಲೇ ಮುಳುಗೇಳುತ್ತಿದ್ದ ಉಕ್ರೇನ್‌ನ ಸುಪ್ರಸಿದ್ಧ ಡಿಜೆ (ಈಒ) ಆಗಿರುವ ಒಲ್ಗಾ ಕೊರೊಲೊವಾ, ಸ್ಲಾವಾ ಹೆಸರಿನಲ್ಲಿ ಖ್ಯಾತಿ ಪಡೆದಿರುವ ಸ್ವ್ಯಾ
ತೋಸ್ಲಾವ್, ರಾಕ್‌ಬ್ಯಾಂಡ್ ಜಿಂಜರ್ ತಂಡದ ಸದಸ್ಯರು ಪ್ರಮುಖರು. ಒಲ್ಗಾ ಕೊರೊಲೊವಾ ಅವರು ಮನೆ ಬಿಟ್ಟು ಹೊರಟು ಏಳು ದಿನಗಳೇ ಕಳೆದಿವೆ. ಉಕ್ರೇನ್ ಸೇನೆಗೆ ಒಂದಿಷ್ಟು ಧನ ಸಹಾಯ ಮಾಡಿರುವ ಅವರು, ಯುದ್ಧದಿಂದ ನಿರ್ಗತಿಕರಾದ ಜನರ ಸಹಾಯಕ್ಕಾಗಿ “ಯು ಟ್ಯೂಬ್’ನಲ್ಲಿ ಶೋ ನಡೆಸಿ ಅದರಿಂದ ಬಂದ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸಿದ್ದಾರೆ. ಸ್ಲಾವಾ ಅವರು, ಆಸ್ಪತ್ರೆಗಳಿಗೆ ಭೇಟಿ ನೀಡಿ ಜನರ ಯೋಗಕ್ಷೇಮ ವಿಚಾರಿಸಿ, ಅವರಿಗೆ ಬೇಕಾದ ಸಹಾಯ ಮಾಡುತ್ತಿದ್ದಾರೆ. ಜಿಂಜರ್ ರಾಕ್‌ಬ್ಯಾಂಡ್‌ನವರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ನಿರ್ಗತಿಕರಿಗೆ ಆಹಾರ, ಭದ್ರತೆ ಒದಗಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.