Russia: ಉಕ್ರೇನಿನ 20 ಡ್ರೋನ್ ನಾಶ: ರಷ್ಯಾ ಘೋಷಣೆ
Team Udayavani, Aug 13, 2023, 12:11 AM IST
ಕೀವ್: ರಷ್ಯಾದಿಂದ ಆಕ್ರಮಿಸಿಕೊಳ್ಳಲ್ಪ ಟ್ಟಿರುವ ಕ್ರಿಮಿಯಾದ ಮೇಲೆ ಉಕ್ರೇನ್ ಹಾರಿಸಿರುವ 20 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ರಕ್ಷಣ ಸಚಿವಾಲಯ ಹೇಳಿದೆ.
ಈ ಪೈಕಿ 14 ಡ್ರೋನ್‌ಗಳನ್ನು ಹೊಡೆದುರುಳಿ ಸಿದ್ದರೆ ಬಾಕಿ ಆರು ಡ್ರೋನ್‌ಗಳನ್ನು ಜ್ಯಾಮ್ ಮಾಡಿ ನಿಷ್ಕ್ರಿಯ ಮಾಡಲಾ ಗಿದೆ. ಎರಡೂ ದೇಶಗಳ ನಡುವೆ ತೀವ್ರವಾಗಿ ಆರಂಭವಾದ ಕದನ, ಈಗ ಕೆಲವು ತಿಂಗಳುಗಳಿಂದ ನಾಮ್‌ಕೇ ವಾಸ್ತೆಗೆ ತಲುಪಿದೆ. ಹಾಗಂತ ನಿಂತಿಲ್ಲ. ಹೀಗಿರುವಾಗ ಉಕ್ರೇನ್ ಡ್ರೋನ್ ಹಾರಿಸುವುದರಿಂದ ಏನು ಲಾಭ ಎಂಬ ಪ್ರಶ್ನೆಯೂ ಇದೆ. ಇದು ಕೇವಲ ಒತ್ತಡ ತಂತ್ರ ಮಾತ್ರ, ರಷ್ಯನ್ನರ ಮೇಲೆ ನಿರಂತರವಾಗಿ ಡ್ರೋನ್ ಹಾರಿಸು ವುದರಿಂದ ಸದಾ ಭೀತಿ ಯಲ್ಲಿರುತ್ತಾರೆ, ನಿಧಾನಕ್ಕೆ ರಷ್ಯಾ ಸೇನೆ ಉಕ್ರೇನನ್ನು ಪೂರ್ಣ ವಾಗಿ ತೊರೆಯಬಹುದು ಎಂಬ ಉದ್ದೇಶದಿಂದಲೇ ಹೀಗೆ ಮಾಡ ಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಉಕ್ರೇನ್ ಸೇನಾಧಿಕಾರಿಗಳ ಉಚ್ಚಾಟನೆ
ಉಕ್ರೇನಿಯನ್ನರಿಗೆ ಕಡ್ಡಾಯ ಸೇನಾ ಶಿಕ್ಷಣ ನೀಡುವ 30 ಸೇನಾಧಿಕಾರಿಗಳನ್ನು ಉಚ್ಚಾಟನೆ ಮಾಡಲಾಗಿದೆ. ದೇಶ ತೀವ್ರ ಯುದ್ಧದಲ್ಲಿ ತೊಡಗಿರುವ ವೇಳೆ ಈ ಅಧಿಕಾರಿಗಳು ಹಣ ಪಡೆದು ಕೊಂಡು, ಜನರನ್ನು ದೇಶದಿಂದ ಕಳ್ಳಸಾಗಣೆ ಮಾಡುತ್ತಿದ್ದಾರೆ, ಇದು ಮಹಾ ರಾಜದ್ರೋಹ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.