ರಷ್ಯಾ ಸೈನಿಕರ ಕೆಟ್ಟ ದೃಷ್ಠಿಯಿಂದ ತಪ್ಪಿಸಲು ಕೂದಲು ಕತ್ತರಿಸುತ್ತಿರುವ ಉಕ್ರೇನ್ ಹುಡುಗಿಯರು!
Team Udayavani, Apr 9, 2022, 11:27 AM IST
Representative Image Used
ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ಶುಕ್ರವಾರ ಉಕ್ರೇನ್ ನ ರೈಲು ನಿಲ್ದಾಣಕ್ಕೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ನಡುವೆ ರಷ್ಯನ್ ಸೈನಿಕರ ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಉಕ್ರೇನ್ ಹುಡುಗಿಯರು ತಮ್ಮ ಕೂದಲು ಕತ್ತರಿಸುತ್ತಿದ್ದಾರೆ ಎಂದು ಇವಾಂಕಿವ್ ನಗರದ ಉಪ ಮೇಯರ್ ಮರಿನಾ ಬೆಸ್ಕ್ಯಾಸ್ಟ್ನ ಹೇಳಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ನಗರದಿಂದ ಸುಮಾರು 50 ಕಿ.ಮೀ ದೂರವಿರುವ ಇವಾಂಕಿವ್ ನಗರವನ್ನು ರಷ್ಯನ್ ಪಡೆಗಳು ಮಾರ್ಚ್ 30ರಂದು ಆಕ್ರಮಿಸಿದ್ದವು. ಸುಮಾರು ಒಂದು ತಿಂಗಳ ಆಕ್ರಮಣದ ಬಳಿಕ ಇದೀಗ ನಗರ ಸ್ವತಂತ್ರವಾಗಿದೆ.
ನಗರದಲ್ಲಿ ಹುಡುಗಿಯರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸುತ್ತಿದ್ದಾರೆ. ರಷ್ಯನ್ ಸೈನಿಕರು ತಮ್ಮ ಕಡೆ ದೃಷ್ಠಿ ಬೀರಬಾರದು ಎಂದು ತಾವೇ ತಮ್ಮ ಸೌಂದರ್ಯವನ್ನು ಮರೆ ಮಾಚುತ್ತಿದ್ದಾರೆ ಎಂದು ಉಪ ಮೇಯರ್ ಹೇಳಿದರು.
ಹತ್ತಿರದ ಹಳ್ಳಿಯೊಂದರಲ್ಲಿ 15 ಮತ್ತು 16 ವರ್ಷ ವಯಸ್ಸಿನ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಅವರು ಒಂದು ಘಟನೆಯನ್ನು ವಿವರಿಸಿದರು. ಇವಾಂಕಿವ್ ಮಾತ್ರವಲ್ಲದೆ ಉಕ್ರೇನ್ ನ ಹಲವು ನಗರಗಳಲ್ಲಿ ಅತ್ಯಾಚಾರ ನಡೆದ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ:ಪಾಕ್ ಬಿಟ್ಟು ತೊಲಗಿ, ಭಾರತದಲ್ಲೇ ನೆಲೆಸಿ: ಇಮ್ರಾನ್ ವಿರುದ್ಧ ನವಾಜ್ ಷರೀಫ್ ಪುತ್ರಿ ಕಿಡಿ
ತನ್ನ ಪತಿಯನ್ನು ಗುಂಡಿಕ್ಕಿ ಕೊಂದ ಬಳಿಕ ನಾಲ್ಕು ವರ್ಷದ ಮಗನನ್ನು ಕೋಣೆಯಲ್ಲಿ ಕೂಡಿ ಹಾಕಿ ರಷ್ಯನ್ ಸೈನಿಕನು ತನ್ನ ಮೇಲೆ ಅತ್ಯಾಚಾರ ಮಾಡಿದ್ದ ಎಂದು ಉಕ್ರೇನ್ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.