ದಿನಖರ್ಚಿಗೂ ಹಣವಿಲ್ಲದ ಸ್ಥಿತಿಗೆ ತಲುಪಿದ ವಿಶ್ವಸಂಸ್ಥೆ
Team Udayavani, Oct 12, 2019, 4:10 PM IST
ವಿಶ್ವಸಂಸ್ಥೆ: ನಿಗದಿತ ಸಭೆ ರದ್ದು, ಕಚೇರಿ ಕಟ್ಟದೊಳಗಿನ ಎಸ್ಕಲೇಟರ್ ಸ್ವಿಚ್ ಆಫ್. ಅಧಿಕಾರಿಗಳ ಪ್ರವಾಸಕ್ಕೆ ಕತ್ತರಿ, ಕಚೇರಿ ಎದುರಿನ ಕಾರಂಜಿ ಬಂದ್, ದೈನಂದಿನ ಚಟುವಟಿಕೆಗಳಿಗೇ ಗ್ರಹಣ.
ಇದು ಸದ್ಯ ವಿಶ್ವಸಂಸ್ಥೆಯ ಪರಿಸ್ಥಿತಿ. ಕಾರಣ ನಿತ್ಯದ ಖರ್ಚಿಗೂ ಹಣವಿಲ್ಲದ ಸ್ಥಿತಿ. ಇದರಿಂದಾಗಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆ್ಯಂಟೋನಿಯೋ ಗುಟೆರ್ರಸ್ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದು, ಸೋಮವಾರದಿಂದ ವಿಶ್ವಸಂಸ್ಥೆಯ ಹಲವು ಕಾರ್ಯಚಟುವಟಿಕೆಗಳನ್ನು ಸ್ಥಗಿತೊಳಿಸುವುದಾಗಿ ಹೇಳಿದ್ದಾರೆ.
ಈ ಕುರಿತು ಅಲ್ಲದೇ ವಿಶ್ವಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಹಣವಿಲ್ಲದ ಪರಿಸ್ಥಿತಿಯಿಂದ ಕಾರ್ಯಚಟವಟಿಕೆಗಳಿಗೆ ಧಕ್ಕೆಯಾಗಲಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ವಿವಿಧ ವಿಭಾಗಗಳಲ್ಲಿ 37 ಸಾವಿರ ಮಂದಿ ಸಿಬಂದಿಯಿದ್ದು, ನವೆಂಬರ್ ತಿಂಗಳ ಸಂಬಳ ಕೊಡಲು ಹಣಕಾಸು ಕೊರತೆ ಕಾಡಿದೆ.
ಏತನ್ಮಧ್ಯೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ 128 ರಾಷ್ಟ್ರಗಳು ಕೊಡಬೇಕಾಗಿರುವ 14,121 ಕೋಟಿ ರೂ.ಗಳನ್ನು ಪಾವತಿಸಿವೆ ಎಂದು ವಿಶ್ವಸಂಸ್ಥೆ ನಿರ್ವಹಣೆ ಮುಖ್ಯಸ್ಥರಾದ ಕ್ಯಾಥರೀನ್ ಪೊಲಾರ್ಡ್ ಬಜೆಟ್ ಸಮಿತಿಗೆ ಹೇಳಿದ್ದಾರೆ. ಇದರಲ್ಲಿ ಭಾರತವೂ ಒಂದಾಗಿದೆ.
ಇದೇ ವೇಳೆ 9498 ಕೋಟಿ ರೂ.ಗಳನ್ನು 65 ದೇಶಗಳಿಂದ ಸಾಲ ಪಡೆಯಲಾಗಿದೆ. ಇದರಲ್ಲಿ 7 ಸಾವಿರ ಕೋಟಿ ರೂ.ಗಳನ್ನು ಅಮೆರಿಕದಿಂದ ಪಡೆಯಾಗಿದೆ ಎಂದು ಹೇಳಿದ್ದಾರೆ.
ಇತ್ತ ಹಣಕಾಸು ಪಾವತಿ ಬಗ್ಗೆ ಭಾರತದ ವಿಶ್ವಸಂಸ್ಥೆ ರಾಯಭಾರಿ ಸಯ್ಯದ್ ಅಕºರುದ್ದೀನ್ ಅವರು ಟ್ವೀಟ್ ಮಾಡಿದ್ದು ಬಾಕಿ ಪಾವತಿಯಲ್ಲಿ ಸಂಪೂರ್ಣ ಪಾವತಿ ಮಾಡಿದ್ದ 193 ರಾಷ್ಟ್ರಗಳಲ್ಲಿ 35 ರಾಷ್ಟ್ರಗಳು ಮಾತ್ರ ಎಂದು ಹೇಳಿದ್ದಾರೆ. ಇನ್ನು ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ವಿಶ್ವಸಂಸ್ಥೆಗೆ ಅಮೆರಿಕ ಮಾತ್ರ ಹಣಕೊಡುತ್ತಿದ್ದು, ಬೇರಾವುದೇ ರಾಷ್ಟ್ರಗಳು ಕೊಡುತ್ತಿಲ್ಲ. ಎಲ್ಲ ರಾಷ್ಟ್ರಗಳೂ ದೇಣಿಗೆ ಕೊಡುವಂತೆ ಮಾಡಿ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.