ಶಾಂಘೈ:ವಿಶ್ವದ ಮೊದಲ ನೆಲಮಾಳಿಗೆ ಹೋಟೆಲ್:ಭೂಗರ್ಭದಲ್ಲಿ ರೆಸಾರ್ಟ್!
Team Udayavani, Nov 20, 2018, 4:36 PM IST
ಶಾಂಘೈ: ವಿಶ್ವದ ಮೊಟ್ಟ ಮೊದಲ ನೆಲ ಮಾಳಿಗೆ ಯಲ್ಲಿನ ಐಷಾರಾಮಿ ಹೊಟೇಲ್‌ಗಳಿಂದ ಕೂಡಿದ 10 ವರ್ಷಗಳ ನಿರಂತರ ಕಾಮಗಾರಿ ಪೂರ್ಣಗೊಳಿಸಿ, ಈಗ ಸೇವೆಗೆ ಮುಕ್ತ ವಾಗಿದೆ. ಚೀನಿಗರ ಮಹತ್ವಾಕಾಂಕ್ಷೆಯ ಯೋಜನೆ ಗಳಲ್ಲಿ ಒಂದಾದ ಈ ಕಟ್ಟಡ ಬೃಹತ್ ಕ್ವಾರಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಈ ತಿಂಗಳು ಪ್ರಾಯೋಗಿಕ ನಿರ್ವಹಣೆ ಆಗಲಿದ್ದು, ಇಲ್ಲಿನ ಐಷಾರಾಮಿ ಕೊಠಡಿಗಳನ್ನು ಪ್ರವಾಸಿಗರಿಗೆ ನೀಡಲಾಗುತ್ತಿದೆ.
ಭೂಮಿಯ ಒಳಭಾಗದಲ್ಲಿ ನಿರ್ಮಾಣ ಗೊಂಡಿ ರುವ ಏಕೈಕ ಐಷಾರಾಮಿ ರೆಸಾರ್ಟ್ ಎನ್ನುವ ಹೆಗ್ಗಳಿಕೆ ಇದರದ್ದಾಗಿದೆ. 300 ಅಡಿ ಯಷ್ಟು ಆಳದ ಕ್ವಾರಿ ಪ್ರದೇಶವನ್ನೇ ಬಳಸಿ ಕೊಂಡು ಕಟ್ಟಡದ ವಿನ್ಯಾಸ ಮಾಡ ಲಾಗಿದೆ. ಬುರ್ಜ್ ಅಲ್ ಅರಬ್ ಕಟ್ಟಡದ ವಿನ್ಯಾಸಕ ಮಾರ್ಟಿನ್ ಜಾಕ್‌ಮನ್ ವಿನ್ಯಾಸ ಮಾಡಿದ್ದಾರೆ.ಒಟ್ಟು 2 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ.
ಎಲ್ಲಿದೆ ರೆಸಾರ್ಟ್?
ಶಾಂಘೈನಿಂದ ಹೆಚ್ಚುಕಡಿಮೆ 32 ಕಿಲೋ ಮೀಟರ್ ದೂರದ ಸಾಂಗ್‌ಜಿಯಾಂಗ್ ಜಿಲ್ಲಿಯಲ್ಲಿರುವ ಈ ರೆಸಾರ್ಟ್ 18 ಮಹಡಿಗಳಿಂದ ಕೂಡಿದೆ. ಭೂ ಮೇಲ್ಪದರದಿಂದ ಕೆಳಕ್ಕೆ 16 ಮಹಡಿಗಳಿದ್ದು, ಇವುಗಳಲ್ಲಿ 2 ಮಹಡಿಗಳು ಅಕ್ವೇರಿಯಂನಿಂದ ಕೂಡಿದೆ. 300ಕ್ಕೂ ಹೆಚ್ಚು ಐಷಾರಾಮಿ ಕೊಠಡಿಗಳಿಂದ ಕೂಡಿದೆ.
ಹೌಸ್‌ಫುಲ್: ಪ್ರವಾಸಿಗರ ಸೇವೆಗೆ ಮುಕ್ತವಾಗಿ ಸಿದ ಕೆಲವು ದಿನಗಳಲ್ಲೇ ನವೆಂಬರ್ ತಿಂಗಳಿನ ಎಲ್ಲಾ ದಿನಗಳಲ್ಲೂ ಕಾಯ್ದಿರಿಸಲಾಗಿದೆ. ಡಿಸೆಂಬರ್‌ನಲ್ಲಿ ಲಭ್ಯವಿದೆ. ಒಂದು ಹಾಸಿಗೆಯಿಂದ ಕೂಡಿದ ಕೊಠಡಿಯ ಒಂದು ದಿನದ ಬಾಡಿಗೆ 39,000 ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.