ಮಂಗಳನ ಅಂಗಳದಲ್ಲಿ ಕೆರೆ
Team Udayavani, Jul 26, 2018, 6:00 AM IST
ತಂಪಾ(ಅಮೆರಿಕ): ಮಂಗಳನ ಅಂಗಳಕ್ಕೆ ಹೋಗುತ್ತೇವೆ ಎಂಬ ಕನಸಿಟ್ಟುಕೊಂಡವರಿಗೆ ಇಲ್ಲೊಂದು ಶುಭ ಸುದ್ದಿ… ಇದೇ ಮೊದಲ ಬಾರಿಗೆ ಮಂಗಳನ ಅಂಗಳದಲ್ಲಿ “ನೀರು ಇರುವ ಕೆರೆ’ ಪತ್ತೆಯಾಗಿದೆ. ಅಲ್ಲದೆ ಇನ್ನೂ ಹಲವಾರು ಕಡೆಗಳಲ್ಲಿ ನೀರು ಇರುವ ಸಾಧ್ಯತೆಗಳಿದ್ದು, ಜೀವಿಗಳೂ ಇರಬಹುದು ಎಂಬ ಆಶಾವಾದವೂ ವ್ಯಕ್ತವಾಗಿದೆ.
ಮಂಗಳನಲ್ಲಿರುವ ಹಿಮದ ಅಡಿಯಲ್ಲಿರುವ ಈ ಕೆರೆ ಸುಮಾರು 20 ಕಿ.ಮೀ. ಅಗಲದಷ್ಟು ವಿಸ್ತೀರ್ಣಹೊಂದಿದೆ ಎಂದು ಇಟಲಿಯ ಸಂಶೋಧಕರು ಹೇಳಿದ್ದಾರೆ. ಈ ಬಗ್ಗೆ ಅಮೆರಿಕದ ಜರ್ನಲ್ ಸೈನ್ಸ್‌ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ. ಇದಷ್ಟೇ ಅಲ್ಲ, ಮಂಗಳನಲ್ಲಿ ಜೀವಿಗಳು ಇರಬಹುದು ಎಂಬ ಹುಡುಕಾಟಕ್ಕೂ ಈ ಸಂಶೋಧನೆ ಸಹಾಯಕವಾಗಬಲ್ಲದು ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ಐರೋಪ್ಯ ಬಾಹ್ಯಾಕಾಶ ಏಜೆನ್ಸಿಯ ಮಾರ್ಸ್ ಎಕ್ಸ್‌ಪ್ರೆಸ್ ಆರ್ಬಿಟರ್‌ನಲ್ಲಿನ ರಾಡಾರ್ ಉಪಕರಣದ ಸಹಾಯದಿಂದ ಈ ಶೋಧ ಮಾಡಲಾಗಿದೆ. ಮಂಗಳನಲ್ಲಿ ನೀರು ಇದೆಯೇ ಇಲ್ಲವೇ ಎಂಬ ಬಗ್ಗೆ ತಿಳಿಯುವ ಸಲುವಾಗಿ 2003ರಲ್ಲಿ ಈ ಉಪಗ್ರಹ ಹಾರಿಸಲಾಗಿತ್ತು. ಇದೀಗ ಈ ಉಪಕರಣ ನೀರು ಇರುವ ಬಗ್ಗೆ ಮಾಹಿತಿ ನೀಡಿದೆ. ಭೂಮಿಯಲ್ಲಿನ ಅಂಟಾರ್ಟಿಕ್ ಮತ್ತು ಗ್ರೀನ್‌ಲ್ಯಾಂಡ್ನಲ್ಲಿನ ಹಿಮಪದರದ ಕೆಳಗಿರುವ ಕೆರೆಗಳ ರೀತಿ ಮಂಗಳನಲ್ಲೂ ಕೆರೆಗಳಿವೆ ಎಂದು ಈ ರಾಡಾರ್ ಹೇಳಿದೆ.
ಹೇಗಿದೆ ಕೆರೆ? ಭೂಮಿಯಲ್ಲಿ ಇರುವ ರೀತಿಯಲ್ಲಿ ಕೆರೆಗಳು ಇರುವುದಿಲ್ಲ. ಬದಲಾಗಿ 1.5 ಕಿ.ಮೀ. ಆಳದಲ್ಲಿ ಹಿಮದ ಅಡಿಯಲ್ಲಿ ಇರುತ್ತವೆ. ನೀರು ದ್ರವ ರೂಪದಲ್ಲಿದ್ದರೂ, ಕುಡಿಯಲು ಬರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.