ಕಾರ್ಮಿಕ ವಲಯದ ವೇತನ ರಕ್ಷಣೆಗೆ ಮುಂದಾದ ಬ್ರಿಟನ್ ಸರಕಾರ
'ಕೋವಿಡ್ 19 ಉದ್ಯೋಗ ಉಳಿತಾಯ ಯೋಜನೆ' ಸುನಾಕ್
Team Udayavani, Mar 24, 2020, 12:01 PM IST
ಲಂಡನ್: ಕೋವಿಡ್ 19 ವೈರಸ್ ನಿಂದ ಇಡೀ ಜಗತ್ತೇ ಸ್ತಬ್ಧವಾಗಿದೆ. ಎಲ್ಲ ರಾಷ್ಟ್ರಗಳ ಆರ್ಥಿಕ ಕ್ಷೇತ್ರ ಹಿಂಜರಿತಕ್ಕೆ ಸಿಲುಕಿದ್ದು, ಸಾಮಾನ್ಯ ವರ್ಗದ ಜನರು, ದಿನಗೂಲಿಗಾರರು, ಕಾರ್ಮಿಕರು ಅಭದ್ರತೆಯಿಂದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನಲೆ ಕಾರ್ಮಿಕ ವಲಯದ ವೇತನ ರಕ್ಷಣೆಗೆ ಬ್ರಿಟನ್ ಸರಕಾರ ಮುಂದಾಗಿದ್ದು, ಅಲ್ಲಿನ ಹಣಕಾಸು ಸಚಿವ ರಿಷಿ ಸುನಕ್ ಭಾರಿ ಮೊತ್ತದ ನೆರವಿನ ಯೋಜನೆ ಪ್ರಕಟಿಸಿದ್ದಾರೆ.
‘ಸಾಂಕ್ರಾಮಿಕ ಹಾವಳಿಯಿಂದ ದೇಶದ ಉದ್ಯಮ ವಲಯಕ್ಕೆ ಪೆಟ್ಟು ಬಿದ್ದಿದೆ. ಕಾರ್ಮಿಕರು ಮನೆಯಿಂದ ಹೊರ ಬರಲಾರದೇ ಭಯಭೀತಗೊಂಡಿದ್ದಾರೆ. ಉದ್ಯೋಗ ನಷ್ಟ ಹಾಗೂ ಸಂಬಳ ಕಡಿತದ ಆತಂಕವೂ ಅವರನ್ನು ಕಾಡುತ್ತಿದೆ. ಆದರೆ ಅಂತಹ ನಷ್ಟ ಆಗಲು ಸರಕಾರ ಬಿಡುವುದಿಲ್ಲ. ಈ ಹೋರಾಟದಲ್ಲಿ ಜನರ ಜತೆಗೆ ನಾವಿರುತ್ತೇವೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಜತೆ ಡೌನ್ ಸೋಂಕಿತ ಪ್ರದೇಶಕ್ಕೆ ಭೇಟಿ ನೀಡಿದ ಸುನಾಕ್ ಜನರಿಗೆ ಧೈರ್ಯ ತುಂಬಿದ್ದಾರೆ.
ಕೋವಿಡ್ 19 ವೈರಸ್ ಹೊಡೆತಕ್ಕೆ ಬ್ರಿಟನ್ ಅಲ್ಲಿ ಇದುವರೆಗೆ 177 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿಗೆ ಸೋಂಕು ತಗುಲಿದೆ. ಕಂಪನಿಗಳು ಕೆಲಸ ಸ್ಥಗಿತಗೊಳಿಸಿವೆ. ಅವುಗಳ ನಷ್ಟದ ಬಾಬ್ತು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನೆರವಿಗೆ ಮುಂದಾದ ಸರಕಾರ, ‘ಕೋವಿಡ್ 19 ವೈರಸ್ ಉದ್ಯೋಗ ಉಳಿತಾಯ ಯೋಜನೆ’ ಆರಂಭಿಸಿದೆ. ಇದರ ಅಡಿಯಲ್ಲಿ ಸರಕಾರವು ಉದ್ಯೋಗಕ್ಕೆ ತೆರಳಲು ಸಾಧ್ಯವಾಗದ ಕಾರ್ಮಿಕರ ತಿಂಗಳ ವೇತನದಲ್ಲಿ ಶೇ.80 ರಷ್ಟು ಪಾಲು ಅಥವಾ 2,500 ಪೌಂಡ್ ಭರಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.