![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Mar 27, 2020, 7:59 PM IST
ಲಂಡನ್: ಇಂಗ್ಲಂಡ್ ನಲ್ಲಿ ಕೋವಿಡ್ 19 ವೈರಸ್ ಘಟಾನುಘಟಿಗಳನ್ನೇ ಗುರಿಯಾಗಿಸುತ್ತಿದೆ. ಮೊನ್ನೆ ರಾಜಕುಮಾರ ಚಾರ್ಲ್ಸ್ ಕೋವಿಡ್ 19 ಸೋಂಕಿಗೆ ಒಳಗಾದ ನಂತರ ಇಂದು ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲೂ ಈ ಸೋಂಕು ಪಾಸಿಟಿವ್ ಆಗಿದೆ.
ಇದರ ಬೆನ್ನಲ್ಲೇ ಇದೀಗ ಬೋರಿಸ್ ಅವರ ಸಚಿವ ಸಂಪುಟ ಸಹೋದ್ಯೋಗಿ ಮತ್ತು ದೇಶದ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ ಕಾಕ್ ಅವರಲ್ಲೂ ಸಹ ಇದೀಗ ಈ ಮಹಾಮಾರಿ ವೈರಸ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.
ವೈದ್ಯರ ಸೂಚನೆಯಂತೆ ಕೋವಿಡ್ 19 ತಪಾಸಣೆಗೆ ಒಳಗಾದ ಮ್ಯಾಟ್ ಅವರಲ್ಲಿ ಈ ಸೋಂಕಿನ ಪಾಸಿಟಿವ್ ಲಕ್ಷಣಗಳು ಪತ್ತೆಯಾಗಿದೆ ಆದರೆ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳಿರುವುದರಿಂದ ಅವರು ಇದೀಗ ಮನೆಯಲ್ಲೇ ಐಸೊಲೇಷನ್ ನಲ್ಲಿದ್ದಾರೆ ಮತ್ತು ಅಲ್ಲಿಂದಲೇ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಸಚಿವರು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.
ಈ ಸಮಯದವರೆಗೆ ಇಂಗ್ಲೆಂಡ್ ನಲ್ಲಿ 11,658 ಕೋವಿಡ್ 19 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಈ ರಾಷ್ಟ್ರದಲ್ಲಿ ಇದುವರೆಗೆ 578 ಜನ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ವಿಶೇಷವೆಂದರೆ ಇಂದು ಇಂಗ್ಲಂಡ್ ನಲ್ಲಿ ಯಾವುದೇ ಹೊಸ ಕೋವಿಡ್ 19 ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ ಮತ್ತು 135 ಜನರು ಈ ಸೋಂಕಿನಿಂದ ಇದುವರೆಗೆ ಚೇತರಿಸಿಕೊಂಡಿದ್ದಾರೆ.
Following medical advice, I was advised to test for #Coronavirus.
I‘ve tested positive. Thankfully my symptoms are mild and I’m working from home & self-isolating.
Vital we follow the advice to protect our NHS & save lives#StayHomeSaveLives pic.twitter.com/TguWH6Blij
— Matt Hancock (@MattHancock) March 27, 2020
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.