ಜಗತ್ತಿನ 54 ಬಡರಾಷ್ಟ್ರಗಳಿಗೆ ಉಂಟಾಗಲಿದೆ ಸಾಲ ಬಿಕ್ಕಟ್ಟು
ಯುಎನ್ಡಿಪಿಯ ಹೊಸ ವರದಿಯಲ್ಲಿ ಎಚ್ಚರಿಕೆ; ಪಾಕಿಸ್ತಾನ, ಶ್ರೀಲಂಕವೂ 54 ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆ
Team Udayavani, Oct 12, 2022, 7:30 AM IST
ಲಂಡನ್: ಜಗತ್ತಿನ ಅತ್ಯಂತ 54 ಬಡರಾಷ್ಟ್ರಗಳಿಗೆ ಮುಂದಿನ ದಿನಗಳಲ್ಲಿ ಗಂಭೀರ ಸಾಲಬಿಕ್ಕಟ್ಟು ಎದುರಾಗಲಿದೆ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ವಿಭಾಗ (ಯುಎನ್ಡಿಪಿ) ಮುನ್ನೆಚ್ಚರಿಕೆ ನೀಡಿದೆ.
ಮಂಗಳವಾರ ಬಿಡುಗಡೆಯಾದ ಹೊಸ ವರದಿ ಪ್ರಕಾರ “ಈಗಾಗಲೇ 54 ರಾಷ್ಟ್ರಗಳ ಬಿಕ್ಕಟ್ಟು ಕೈಮೀರಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹದಗೆಡುವ ಆತಂಕ ಇದೆ.
ಹೀಗಾಗಿ, ಆ ರಾಷ್ಟ್ರಗಳಲ್ಲಿನ ಬಡವರ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ತಕ್ಷಣ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾದ ಪ್ರತಿಕೂಲ ಪರಿಸ್ಥಿತಿಯ ಜತೆಗೆ ಗಂಭೀರವಾಗಿರುವ ಸಾಲದ ಬಿಕ್ಕಟ್ಟು ಕೂಡ ಎದುರಾಗಿವೆ’ ಎಂದು ಉಲ್ಲೇಖಿಸಲಾಗಿದೆ.
ಹಾಲಿ ವರ್ಷಾಂತ್ಯದಲ್ಲಿ ಮತ್ತು ಮುಂದಿನ ವರ್ಷದಲ್ಲಿ ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂಬ ವರದಿಗಳ ನಡುವೆಯೇ ಈ ಆಘಾತಕಾರಿ ವರದಿ ಬಹಿರಂಗವಾಗಿದೆ. ಭಾರತದ ನೆರೆಯ ದೇಶಗಳಾಗಿರುವ ಪಾಕಿಸ್ತಾನ, ಶ್ರೀಲಂಕಾ, ಇಥಿಯೋಪಿಯಾ, ಛಾಡ್, ಜಾಂಬಿಯಾ ಸೇರಿದಂತೆ ಹಲವು ರಾಷ್ಟ್ರಗಳು ಈ ಆತಂಕದ ಸುಳಿಗೆ ಸಿಲುಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.