ಆಫ್ಘನ್‌ನಿಂದ ಅಮೆರಿಕಾ ಸೇನಾ ಪಡೆಗಳ ವಾಪಾಸಾತಿ ಪ್ರಾರಂಭ
Team Udayavani, Mar 11, 2020, 7:42 PM IST
ಕಾಬೂಲ್: ಉಗ್ರ ಸಂಘಟನೆ ತಾಲಿಬಾನ್ ಜತೆಗೆ ಮಾಡಿಕೊಂಡಿರುವ ಒಪ್ಪಂದ ದಂತೆ ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆಕೊಳ್ಳುವ ಕಾರ್ಯವನ್ನು ಮಂಗಳವಾರದಿಂದ ಅಮೆರಿಕ ಶುರು ಮಾಡಿದೆ. ಇದರ ಜತೆಗೆ ಸೂಕ್ತ ರೀತಿಯಲ್ಲಿ ಒಪ್ಪಂದ ಅನುಷ್ಠಾನವಾಗುವ ರೀತಿಯಲ್ಲಿ ಕಾರಾಗೃಹದಲ್ಲಿರುವ ತಾಲಿಬಾನ್ ಉಗ್ರರನ್ನು ಬಿಡುಗಡೆ ಮಾಡುವ ಬಗ್ಗೆಯೂ ಟ್ರಂಪ್ ಸರಕಾರ ಅಧ್ಯಕ್ಷ ಅಶ್ರಫ್ ಘನಿ ಮೇಲೆ ಒತ್ತಡ ಹೇರಲಾರಂಭಿಸಿದೆ. 18 ವರ್ಷಗಳ ಭಾರಿ ಸಂಘರ್ಷದ ಬಳಿಕ ಫೆ. 29ರಂದು ಅಮೆರಿಕ ಮತ್ತು ತಾಲಿಬಾನ್ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಆದರೆ ತಾಲಿಬಾನ್, ಇತರ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಅಫ್ಘಾನಿಸ್ಥಾನ ಸರಕಾರದ ಜತೆಗೆ ನಡೆಯಲಿರುವ ಮಾತುಕತೆಗಳ ಫಲಿತಾಂಶ ಆ ದೇಶದ ಭವಿಷ್ಯತ್ತನ್ನು ನಿರ್ಧರಿಸಲಿವೆ.
ಈ ನಡುವೆ ಸೋಮವಾರ ಎರಡನೇ ಬಾರಿಗೆ ಚುನಾವಣೆ ಗೆದ್ದಿರುವ ಅಶ್ರಫ್ ಗುಂಡಿನ ಚಕಮಕಿ, ಗ್ರೆನೇಡ್ ದಾಳಿ ನಡುವೆಯೇ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಶ್ರಫ್ ಪ್ರತಿಸ್ಪರ್ಧಿ ಡಾ| ಅಬ್ದುಲ್ಲಾ ಅಬ್ದುಲ್ಲಾ ಕೂಡ ತಾನೇ ಅಧ್ಯಕ್ಷ ಎಂದು ಪ್ರಮಾಣ ಸ್ವೀಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.