ಬಾಲಕಿ ಶ್ರಾವ್ಯಗೆ ಟ್ರಂಪ್ ಗೌರವ
ಆರೋಗ್ಯ ಕಾರ್ಯಕರ್ತರಿಗೆ ಗ್ರೀಟಿಂಗ್ಸ್ , ಸಿಹಿ ತಿನಸುಗಳ ವಿತರಿಸಿ ಪ್ರೋತ್ಸಾಹ
Team Udayavani, May 19, 2020, 7:15 AM IST
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 10 ವರ್ಷದ ಭಾರತೀಯ ಮೂಲದ ಬಾಲಕಿ ಶ್ರಾವ್ಯ ಅಣ್ಣಪ್ಪ ರೆಡ್ಡಿ ಅವರನ್ನು ಗೌರವಿಸಿದ್ದಾರೆ.
ಕೋವಿಡ್ ವೈರಸ್‌ನಿಂದ ತತ್ತರಿಸಿರುವ ಅಮೆರಿಕದಲ್ಲಿ ಜನರ ಪ್ರಾಣ ರಕ್ಷಣೆಗಾಗಿ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯ, ನರ್ಸ್ ಹಾಗೂ ಅಗ್ನಿಶಾಮಕ ದಳದ ಸಿಬಂದಿಗೆ ಶ್ರಾವ್ಯ ಸಿಹಿ ತಿನಿಸುಗಳನ್ನು ಹಂಚಿದ್ದರು. ಆರೋಗ್ಯ ಕಾರ್ಯಕರ್ತರಿಗೆ ಗ್ರೀಟಿಂಗ್ ಕಾರ್ಡ್‌ಗಳನ್ನು ಕೊಡುವ ಮೂಲಕ ಅವರಲ್ಲಿ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದ್ದರು.
ಒಟ್ಟಾರೆ ತನ್ನ ಕೈಯಾರೆ ಬರೆದ 200ಕ್ಕೂ ಹೆಚ್ಚು ಗ್ರೀಟಿಂಗ್ ಕಾರ್ಡ್‌ಗಳನ್ನು ಶ್ರಾವ್ಯ ಹಂಚಿದ್ದರು. ಈ ಸಾಮಾಜಿಕ ಕಾರ್ಯಕ್ಕಾಗಿ ಶ್ರಾವ್ಯ ಸೇರಿದಂತೆ ಒಟ್ಟಾರೆ ಮೂರು ಮಂದಿಯನ್ನು ಸ್ಮರಣಿಕೆ ನೀಡಿ ಟ್ರಂಪ್ ಸನ್ಮಾನಿಸಿದರು. ವಿಶೇಷವೆಂದರೆ ಮೂವರು ಬಾಲಕಿಯರು ಕೂಡ 10 ವರ್ಷದವರೇ ಆಗಿದ್ದಾರೆ.
ಶ್ರಾವ್ಯ ಮೇರಿಲ್ಯಾಂಡ್ ನಲ್ಲಿರುವ ಹ್ಯಾನೋವರ್ ಹಿಲ್ಸ್‌ನ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಮಾತ್ರವಲ್ಲ ಆ ಶಾಲೆಯ ಗರ್ಲ್ಸ್ ಸ್ಕೌಟ್ ತಂಡದ ಸದಸ್ಯೆಯೂ ಆಗಿದ್ದಾರೆ. ಶ್ರಾವ್ಯ ತಂದೆ – ತಾಯಿ ಮೂಲತಃ ಆಂಧ್ರಪ್ರದೇಶದವರಾಗಿದ್ದಾರೆ.
ಒಬಾಮಾ ಅಸಮರ್ಥ ಅಧ್ಯಕ್ಷ: ತಿರುಗೇಟು
ಒಂದೆಡೆ ಕೋವಿಡ್ ರಣಕೇಕೆ, ಇನ್ನೊಂದೆಡೆ ಅಧ್ಯಕ್ಷ- ಮಾಜಿ ಅಧ್ಯಕ್ಷರ ನಡುವಿನ ವಾಗ್ಯುದ್ಧ! ಅಮೆರಿಕ ಪ್ರಜೆಗಳು ಇವೆರಡನ್ನೂ ಅನುಭವಿಸಬೇಕಾದ ದುಃಸ್ಥಿತಿ ಎದುರಾಗಿದೆ. ‘ಬರಾಕ್ ಒಬಾಮಾ ಬಗ್ಗೆ ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ. ಅವರು ಅಮೆರಿಕ ಕಂಡ ಅಸಮರ್ಥ ಅಧ್ಯಕ್ಷ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜರಿದಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗೋಷ್ಠಿ ವೇಳೆ, ಟ್ರಂಪ್ ಹೀಗೆ ಚಾಟಿ ಬೀಸಿದ್ದಾರೆ. ಇತ್ತೀಚೆಗಷ್ಟೇ ಬರಾಕ್ ಒಬಾಮಾ, ‘ಕೋವಿಡ್ ಸಾಂಕ್ರಾಮಿಕವು ಅಮೆರಿಕದ ನಾಯಕತ್ವವನ್ನೇ ಬೆತ್ತಲುಮಾಡಿದೆ. ನಾಯಕನ ವಿವೇಚನೆಯಿಲ್ಲದ ಮಾತುಗಳಿಂದ ಜಗತ್ತಿನಲ್ಲಿ ಅಮೆರಿಕ ಜಗಳಗಂಟ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ’ ಎಂದು ತಮ್ಮ ಅಭಿಮಾನಿ ಬಳಗದ ನಡುವೆ ಹೇಳಿಕೊಂಡಿದ್ದರು. ಟ್ರಂಪ್ ಹೆಸರು ಎತ್ತದೆ ಹೇಳಿದ್ದ ಈ ಮಾತು, ಸೋರಿಕೆಯಾಗಿ, ವೈರಲ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.