ಯುನೆಸ್ಕೋದಿಂದ ಅಮೆರಿಕ ಹೊರಕ್ಕೆ
Team Udayavani, Oct 13, 2017, 9:39 AM IST
ವಾಷಿಂಗ್ಟನ್: ವಿಶ್ವಸಂಸ್ಥೆಯ ಸಾಂಸ್ಕೃತಿಕ ವಿಭಾಗ ಯುನೆಸ್ಕೋದ ಚಟುವಟಿಕೆಗಳಿಂದ ಡಿ.31ರ ಬಳಿಕ ಹಿಂದೆ ಸರಿಯುವುದಾಗಿ ಅಮೆರಿಕ ಘೋಷಿಸಿದೆ.
ಸಾಂಸ್ಕೃತಿಕ ವಿಭಾಗ ಇಸ್ರೇಲಿ ವಿರೋಧಿ ಧೋರಣೆ ಅನುಸರಿಸುತ್ತಿದೆ. ಅದರಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಅಮೆರಿಕ ಸರಕಾರ ಒತ್ತಾಯಿಸುತ್ತಿದೆ. ಡೊನಾಲ್ಡ್ ಟ್ರಂಪ್ ಸರಕಾರದ ನಿರ್ಧಾರವನ್ನು ಸಂಘಟನೆಗೆ ಈಗಾಗಲೇ ತಿಳಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ತಿಳಿಸಿದ್ದಾರೆ.
ಸಂಘಟನೆಯಿಂದ ಹೊರ ಬಂದರೂ ಅದರ ಜತೆ ನಿಕಟ ಸಂಪರ್ಕ ಇರಿಸಲು ಸರಕಾರಕ್ಕೆ ಆಸಕ್ತಿ ಇದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.