Brian Thompson: ಹೂಡಿಕೆದಾರರ ಸಭೆಗೂ ಮುನ್ನವೇ ಯುನೈಟೆಡ್ ಹೆಲ್ತ್‌ಕೇರ್ ಸಿಇಒ ಹತ್ಯೆ
Team Udayavani, Dec 5, 2024, 9:52 AM IST
ನ್ಯೂಯಾರ್ಕ್: ಯುನೈಟೆಡ್ ಹೆಲ್ತ್‌ನ ವಿಮಾ ಘಟಕದ ಸಿಇಒ ಬ್ರಿಯಾನ್ ಥಾಂಪ್ಸನ್ ಅವರನ್ನು ಬುಧವಾರ (ಡಿ.4) ಬೆಳಿಗ್ಗೆ ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಲ್ಲಿರುವ ಹಿಲ್ಟನ್ ಹೋಟೆಲ್ ಮುಂಭಾಗ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.
ಗಂಭೀರ ಗಾಯಗೊಂಡಿದ್ದ ಥಾಂಪ್ಸನ್ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.
ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಘಟನೆಯ ಮೊದಲೇ ಶಂಕಿತ ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಅಲ್ಲದೆ ಆತ ಜಾಕೆಟ್ ಮತ್ತು ಬೂದು ಬಣ್ಣದ ಕಪ್ಪು ಪ್ಯಾಕ್ ಧರಿಸಿದ್ದು, ಥಾಂಪ್ಸನ್ ಹೋಟೆಲ್ ಕಡೆ ಬರುತ್ತಿದ್ದಂತೆ ಗುಂಡು ಹಾರಿಸಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಹೂಡಿಕೆದಾರರ ಸಮಾವೇಶ ನಡೆಯಬೇಕಿತ್ತು:
ಬುಧವಾರ ಮ್ಯಾನ್‌ಹ್ಯಾಟನ್‌ನಲ್ಲಿ ಯುನೈಟೆಡ್‌ಹೆಲ್ತ್‌ನ ಹೂಡಿಕೆದಾರರ ಸಮಾವೇಶ ನಡೆಸಲು ನಿರ್ಧರಿಸಲಾಗಿತ್ತು ಅದರಂತೆ ಎಲ್ಲ ತಯಾರಿಗಳೂ ನಡೆದಿತ್ತು ಇನ್ನೇನು ಗಣ್ಯರು ಸಭೆಗೆ ಆಗಮಿಸುತ್ತಿದ್ದರು ಹಾಗೆಯೇ ಯುನೈಟೆಡ್ ಹೆಲ್ತ್‌ನ ವಿಮಾ ಘಟಕದ ಸಿಇಒ ಬ್ರಿಯಾನ್ ಥಾಂಪ್ಸನ್ ಅವರೂ ಹೋಟೆಲ್ ಕಡೆಗೆ ಬರುತ್ತಿದ್ದರು ಈ ವೇಳೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಿಂದಾಗಿ ಹೂಡಿಕೆದಾರರ ಸಮಾವೇಶವನ್ನು ಮುಂದೂಡಲಾಯಿತು.
2021ರಲ್ಲಿ ಸಿಇಒ ಪಟ್ಟ ಅಲಂಕಾರ:
ಏಪ್ರಿಲ್ 2021 ರಲ್ಲಿ ಯುನೈಟೆಡ್ ಹೆಲ್ತ್ ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬ್ರಿಯಾನ್ ಥಾಂಪ್ಸನ್, ಅವರ ನಾಯಕತ್ವದಿಂದ ಸಂಸ್ಥೆ ಉನ್ನತಮಟ್ಟಕ್ಕೆ ಏರುವಲ್ಲಿ ಅವರ ಶ್ರಮ ಮಹತ್ವದ್ದು ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ ಇದೀಗ ಅವರ ಅಗಲುವಿಕೆ ಸಂಸ್ಥೆಗೆ ಅಪಾರ ನಷ್ಟ ಎಂದು ಹೇಳಿಕೊಂಡಿದ್ದಾರೆ.
ಜೀವ ಬೆದರಿಕೆ ಇತ್ತು:
ಇತ್ತ ಥಾಂಪ್ಸನ್ ಹತ್ಯೆ ಬೆನ್ನಲ್ಲೇ ಪೊಲೀಸರು ಹಂತಕನ ಪತ್ತೆ ಕಾರ್ಯಾಚರಣೆ ನಡೆಸುತ್ತಿರುವ ನಡುವೆ ಥಾಂಪ್ಸನ್ ಅವರ ಪತ್ನಿ ನನ್ನ ಪತಿಗೆ ಜೀವ ಬೆದರಿಕೆ ಕರೆಗಳು ಬರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 95ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.