ಮನಿಲಾದಲ್ಲಿ ಮಹಾತ್ಮನ ಪುತ್ಥಳಿ ಅನಾವರಣ
Team Udayavani, Oct 21, 2019, 6:01 AM IST
ಮನಿಲಾ: ಫಿಲಿಪ್ಪೀನ್ಸ್ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಮನಿಲಾದ ಮಿರಿಯಮ್ ಕಾಲೇಜಿನ ಆವರಣದಲ್ಲಿ ಮಹಾತ್ಮ ಗಾಂಧೀಜಿಯ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. ಬಳಿಕ ಕಾಲೇಜಿನ ಶಾಂತಿ ಶಿಕ್ಷಣ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲೂ ಭಾಗವಹಿಸಿ ಮಾತನಾಡಿದ ಅವರು, “ಮಹಾತ್ಮನ ಸತ್ಯ, ನೀತಿ ಹಾಗೂ ಸಹಾನುಭೂತಿಗಳಿಂದ ಭವಿಷ್ಯದ ತಲೆಮಾರು ಪ್ರೇರಣೆ ಪಡೆದುಕೊಳ್ಳಬೇಕು.
ಈ ಪುತ್ಥಳಿಯು ಭಾರತೀಯರು ನಿಮಗೆ ನೀಡುತ್ತಿರುವ ಪ್ರೀತಿಯ ಕೊಡುಗೆ. ಆದರೆ, ಮಹಾತ್ಮನು ಎಲ್ಲ ಜನರಿಗೂ, ಎಲ್ಲ ಜನಾಂಗಕ್ಕೂ, ಎಲ್ಲ ಸಂಸ್ಕೃತಿ ಹಾಗೂ ಸಮಾಜಕ್ಕೆ ಸೇರಿದವರು.
ಅವರ ಮಾರ್ಗದರ್ಶನದಲ್ಲೇ ನಮ್ಮ ಶಾಂತಿ, ಸಾಮರಸ್ಯ ಹಾಗೂ ಸುಸ್ಥಿರ ಅಭಿ ವೃದ್ಧಿಯ ಪಯಣ ಸಾಗಲಿ’ ಎಂದಿದ್ದಾರೆ. ಬಳಿಕ ಮನಿಲಾದಲ್ಲಿ ಭಾರತೀಯ ಸಮು ದಾಯವನ್ನು ಉದ್ದೇಶಿಸಿಯೂ ಕೋವಿಂದ್ ಮಾತನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.