H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Team Udayavani, Dec 19, 2024, 7:45 AM IST
ವಾಷಿಂಗ್ಟನ್: ಅಧಿಕಾರದಿಂದ ಕೆಳಗಿಳಿಯಲು ತಿಂಗಳು ಬಾಕಿಯಿರುವಂತೆಯೇ ಅಧ್ಯಕ್ಷ ಬೈಡೆನ್ ಅವರು ಮಹತ್ವದ ನಿರ್ಣಯ ಕೈಗೊಂಡಿದ್ದು, ಎಚ್1ಬಿ ವೀಸಾ ನಿಯಮ ಸಡಿಲಿಕೆಯ ಘೋಷಣೆ ಮಾಡಿದ್ದಾರೆ. ಇದರಿಂದ ಭಾರತದ ಸಾವಿರಾರು ಸಾಫ್ಟ್ವೇರ್ ತಂತ್ರಜ್ಞರಿಗೆ ಲಾಭವಾಗಲಿದೆ.
ಕೌಶಲಯುತ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಲು ಅಮೆರಿಕ ಕಂಪೆನಿಗಳಿಗೆ ನೆರವಾಗುವಂತೆ ಎಚ್-1ಬಿ ವೀಸಾ ವಿತರಣ ಪ್ರಕ್ರಿಯೆ ಸರಳೀಕರಣ ಮತ್ತು ತ್ವರಿತವಾಗಿ ಪೂರ್ಣಗೊಳಿಸಲು ಯೋಜನೆಯನ್ನು ಅಮೆರಿಕ ರೂಪಿಸಿದೆ. ಈ ಹೊಸ ನೀತಿ ಜ.17ರಿಂದಲೇ ಜಾರಿಗೆ ಬರಲಿದೆ.
ಹೊಸ ನೀತಿಯಲ್ಲಿ ಏನಿದೆ?: ಈವರೆಗೆ ಎಚ್-1ಬಿಗೆ ವೀಸಾಗೆ ವಾರ್ಷಿಕ ಮಿತಿ ವಿಧಿಸಲಾಗುತ್ತಿತ್ತು. ಮಿತಿಗಿತಿಂತ ಹೆಚ್ಚಿನ ಅರ್ಜಿಗಳು ಇದ್ದರೆ ಲಾಟರಿ ಮೂಲಕ ಅವಕಾಶ ನೀಡಲಾಗುತ್ತಿತ್ತು. ಆಗ ಹಲವರಿಗೆ ಅರ್ಹತೆ ಇದ್ದರೂ ವೀಸಾ ಸಿಗುತ್ತಿರಲಿಲ್ಲ. ಈಗ ನಾನ್-ಪ್ರಾಫಿಟ್ ಸಂಸ್ಥೆಗಳು ಮತ್ತು ಸರಕಾರಿ ಸಂಶೋಧನ ಸಂಸ್ಥೆಗಳಿಗೆ ಎಚ್-1ಬಿ ವೀಸಾ ವಾರ್ಷಿಕ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ವಾರ್ಷಿಕ ಮಿತಿಗಿಂತ ಹೆಚ್ಚಿನ ಜನರಿಗೆ ಎಚ್-1ಬಿ ವೀಸಾಗಳು ದೊರೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.