ಅಮೆರಿಕ ಪಡೆಗಳ ಮೇಲೆ ಇರಾನ್ ದಾಳಿ; ವಿಮಾನ ಸಂಚಾರಕ್ಕೆ ನಿಷೇಧ ಹೇರಿದ ಅಮೆರಿಕ
ಮೆರಿಕ ವಿಮಾನಗಳು ಇರಾಕ್ ವಾಯು ಮಾರ್ಗದಲ್ಲಿ 26 ಸಾವಿರ ಅಡಿಗಿಂತ ಕೆಳಗೆ ಹಾರಾಟ ನಡೆಸದಂತೆ ಸೂಚನೆ
Team Udayavani, Jan 8, 2020, 10:38 AM IST
ವಾಷಿಂಗ್ಟನ್: ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿ ಹತ್ಯೆಗೆ ಪ್ರತೀಕಾರವಾಗಿ ಇರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಪಡೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಇರಾನ್, ಇರಾಕ್ ಗೆ ವಿಮಾನ ಸಂಚಾರಕ್ಕೆ ಅಮೆರಿಕ ನಿಷೇಧ ಹೇರಿದೆ ಎಂದು ವರದಿ ತಿಳಿಸಿದೆ.
ಇರಾಕ್ ನ ಎರಡು ವಾಯುನೆಲೆಯಲ್ಲಿರುವ ಅಮೆರಿಕ ನೇತೃತ್ವದ ಮೈತ್ರಿ ಪಡೆಗಳ ಮೇಲೆ ಟೆಹ್ರಾನ್ ಸುಮಾರು 12ಕ್ಕೂ ಅಧಿಕ ಮಿಸೈಲ್ಸ್ ದಾಳಿ ನಡೆಸಿದೆ ಎಂದು ಅಮೆರಿಕ ಮಿಲಿಟರಿ ತಿಳಿಸಿದೆ.
ಮಿಲಿಟರಿ ಚಟುವಟಿಕೆ ಬಿಗಿಗೊಳಿಸಲು ಹಾಗೂ ಮಧ್ಯಏಷ್ಯಾದಲ್ಲಿ ರಾಜಕೀಯ ಸಂಘರ್ಷ ಉತ್ತುಂಗಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಮತ್ತು ಇರಾಕ್ ವಾಯುಮಾರ್ಗವನ್ನು ಬಳಸದಂತೆ ನಿಷೇಧ ಹೇರಲಾಗಿದೆ ಎಂದು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಶನ್ ವಿವರಿಸಿದೆ.
ಇರಾನ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಮೆರಿಕ ವಿಮಾನಗಳು ಇರಾಕ್ ವಾಯು ಮಾರ್ಗದಲ್ಲಿ 26 ಸಾವಿರ ಅಡಿಗಿಂತ ಕೆಳಗೆ ಹಾರಾಟ ನಡೆಸದಂತೆ ಎಫ್ ಎಎ ಸೂಚನೆ ನೀಡಿದೆ. ಕಳೆದ ಜೂನ್ ನಲ್ಲಿ ಅತೀ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಅಮೆರಿಕದ ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿತ್ತು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.