ಪಾಕ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಹಾರಾಟ ಅಮೆರಿಕ ನಿಷೇಧಿಸಿದ್ದು ಯಾಕೆ ಗೊತ್ತಾ?
ಜನವಸತಿ ಪ್ರದೇಶದಲ್ಲಿ ಪಿಐಎ ವಿಮಾನ ಪತನಗೊಂಡು ಸುಮಾರು 97 ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು.
Team Udayavani, Jul 10, 2020, 5:14 PM IST
ವಾಷಿಂಗ್ಟನ್:ಗಡಿ ವಿಚಾರದಲ್ಲಿ ಸದಾ ಭಾರತದೊಂದಿಗೆ ಕ್ಯಾತೆ ತೆಗೆಯುವ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೊಳಗಾಗುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನ(ಪಿಐಎ)ಗಳ ಹಾರಾಟಕ್ಕೆ ಅಮೆರಿಕ ನಿಷೇಧ ಹೇರಿರುವುದಾಗಿ ವರದಿ ತಿಳಿಸಿದೆ.
ಸುಳ್ಳು ಪ್ರಮಾಣ ಪತ್ರ ಹೊಂದಿರುವ ಪೈಲಟ್ ಗಳನ್ನು ಪಾಕಿಸ್ತಾನ ಕಳೆದ ತಿಂಗಳು ಪತ್ತೆಹಚ್ಚಿತ್ತು. ಈ ಹಿನ್ನೆಲೆಯಲ್ಲಿ ಯುರೋಪಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ, ಪಿಐಎಯನ್ನು ಸುಮಾರು ಆರು ತಿಂಗಳ ಕಾಲ ನಿಷೇಧಿಸಿತ್ತು.ಪಿಐಎನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೈಲಟ್ ಗಳು ನಕಲಿ ಪ್ರಮಾಣ ಪತ್ರ ಪಡೆದು ಉದ್ಯೋಗ ಸೇರಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಅಮೆರಿಕ ಪಿಐಎ ವಿಮಾನಗಳಿಗೆ ನಿಷೇಧ ಹೇರಿರುವುದಾಗಿ ವರದಿ ವಿವರಿಸಿದೆ.
ಈ ಕುರಿತು ಪಿಐಎ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಮೆರಿಕ ಪಿಐಎ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿರುವುದನ್ನು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದ್ದು, ಪಿಐಎ ಖಚಿತಪಡಿಸಿರುವುದಾಗಿ ತಿಳಿಸಿದೆ.
ಕಳೆದ ಮೇ ತಿಂಗಳಲ್ಲಿ ಜನವಸತಿ ಪ್ರದೇಶದಲ್ಲಿ ಪಿಐಎ ವಿಮಾನ ಪತನಗೊಂಡು ಸುಮಾರು 97 ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಈ ಘಟನೆ ನಂತರ ಪಾಕ್ ಸರ್ಕಾರ ತನಿಖೆ ನಡೆಸಿದಾಗ, ಶೇ.40ರಷ್ಟು ಪೈಲಟ್ ಗಳ ಬಳಿ ಸಮರ್ಪಕ ಪ್ರಮಾಣಪತ್ರ ಇಲ್ಲದಿರುವುದು ಪತ್ತೆಯಾಗಿತ್ತು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.