![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 29, 2022, 7:30 AM IST
ವಾಷಿಂಗ್ಟನ್: ಶತಮಾನದ ಹಿಮಪಾತದಿಂದ ಅಮೆರಿಕ ತತ್ತರಿಸಿ ಹೋಗಿದೆ. ತೀವ್ರ ಚಳಿಯ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ನಯಾಗರಾ ಜಲಪಾತ ಹೆಪ್ಪುಗಟ್ಟಿದೆ.
ನಯಾಗರಾ ಫಾಲ್ಸ್ ಮೇಲಿನಿಂದ ಪ್ರತಿ ಸೆಕೆಂಡ್‌ಗೆ 3,160 ಟನ್ ನೀರು ಕೆಳಕ್ಕೆ ಬೀಳುತ್ತದೆ. ಆದರೆ ಇದೀಗ ಫಾಲ್ಸ್ ಹೆಪ್ಪುಗಟ್ಟಿದೆ. ನಯಾಗರಾ ಫಾಲ್ಸ್‌ನ ಒಳಹರಿವಿನಲ್ಲಿ ನೀರಿನ ಸಂಚಾರವಿದೆ. ಆದರೆ ಅದರ ಮೇಲ್ಮೈ ಸಂಪೂರ್ಣ ಮಂಜುಗಡ್ಡೆಯಾಗಿದೆ. ಹೆಪ್ಪುಗಟ್ಟಿದ ನಯಾಗರಾ ಫಾಲ್ಸ್‌ನ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ 1964ರಲ್ಲಿ ನಯಾಗರಾ ಜಲಪಾತದ ನೀರು ತೀವ್ರ ಶೀತದಿಂದ ಮಂಜುಗಡ್ಡೆಯಾಗಿತ್ತು.
ಜೆಸಿಬಿಗಳ ಮೂಲಕ ಹಿಮ ತೆರವು:
ಇನ್ನೊಂದೆಡೆ ಬಾಂಬ್ ಚಂಡಮಾರುತದಿಂದ ಅಮೆರಿಕ ಮತ್ತು ಕೆನಡಾದಲ್ಲಿ ಜನಜೀವನ ಅಸ್ತವ್ಯವಸ್ತವಾಗಿದೆ. ಇದುವರೆಗೂ 65ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ನ್ಯೂಯಾರ್ಕ್, ಬಫೆಲೊ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ರಸ್ತೆಗಳು ಹಿಮದಿಂದ ಆವರಿಸಿದ್ದು, ಜೆಸಿಬಿಗಳ ಮೂಲಕ ತೆರವು ಕಾರ್ಯ ಪ್ರಗತಿಯಲ್ಲಿದೆ. ಮನೆಗಳ ಚಾವಣಿಗಳು ಮತ್ತು ವಾಹನಗಳು ಹಿಮದಿಂದ ಆವೃತ್ತವಾಗಿವೆ.
ಹೆಚ್ಚುವರಿ ಮಿಲಿಟರಿ ಪೊಲೀಸರ ನಿಯೋಜನೆ:
ನ್ಯೂಯಾರ್ಕ್ ನಗರದಲ್ಲಿ ಸಂಚಾರ ನಿರ್ವಹಣೆಗಾಗಿ ಹೆಚ್ಚುವರಿಯಾಗಿ 100 ಮಿಲಿಟರಿ ಪೊಲೀಸರನ್ನು ನಿಯೋಜಿಸಲಾಗಿದೆ.
ನ್ಯೂಯಾರ್ಕ್ ನಗರದ ಕೆಲವೆಡೆ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ ಇನ್ನೂ 4,500 ಗ್ರಾಹಕರ ಮನೆಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಸ್ಥಗಿತಗೊಂಡಿರುವ ವಿಮಾನ ಸಂಚಾರ ಇನ್ನೂ ಪುನರ್‌ಆರಂಭಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಭಾರತ ಮೂಲದವರ ಸಾವು
ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯುತ್ತಿದ್ದಾಗ ಮಂಜುಗಡ್ಡೆ ಕುಸಿದು, ಮಹಿಳೆ ಸೇರಿದಂತೆ ಭಾರತ ಮೂಲದ ಮೂವರು ಮೃತಪಟ್ಟಿರುವ ಘಟನೆ ಅಮೆರಿಕದ ಅರಿಜೋನಾ ರಾಜ್ಯದ ಕೊಕೊನಿನೊ ಕೌಂಟಿಯ ವುಡ್ಸ್ ಕ್ಯಾನಿಯನ್ ಸರೋವರದಲ್ಲಿ ಸಂಭವಿಸಿದೆ.
ಮೃತರನ್ನು ಭಾರತ ಮೂಲದ ನಾರಾಯಣ ಮುದ್ದಣ (49), ಗೋಕುಲ್ ಮೆಡಿಸೆಟಿ (47) ಮತ್ತು ಹರಿತಾ ಮುದ್ದಣ ಎಂದು ಗುರುತಿಸಲಾಗಿದೆ. ಮೃತರು ಅರಿಜೋನಾದ ಚಾಂಡ್ಲರ್ ನಿವಾಸಿಗಳಾಗಿದ್ದಾರೆ.
ವುಡ್ಸ್ ಕ್ಯಾನಿಯನ್ ಸರೋವರಕ್ಕೆ ಬಿದ್ದ ಹರಿತಾ ಮುದ್ದಣ ಅವರನ್ನು ಸಿಬ್ಬಂದಿ ಯಶಸ್ವಿಯಾಗಿ ಮೇಲೆತ್ತಿದ್ದರು. ಆದರೆ ಜೀವ ಉಳಿಸುವ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.