US; ನೀಲಿತಾರೆ ಹಣ ಪ್ರಕರಣ: ಟ್ರಂಪ್ ಬೇಷರತ್ ರಿಲೀಸ್
ಅಧಿಕಾರ ಸ್ವೀಕರಿಸಲಿರುವಂತೆಯೇ ತೀರ್ಪು
Team Udayavani, Jan 11, 2025, 6:36 AM IST
ವಾಷಿಂಗ್ಟನ್: ಲೈಂಗಿಕ ಸಂಬಂಧ ಕುರಿತು ಬಾಯಿಬಿಡದಂತೆ ನೀಲಿ ತಾರೆಯೊಬ್ಬರಿಗೆ ಹಣ ನೀಡಿದ ಪ್ರಕರಣದಲ್ಲಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮ್ಯಾನ್‌ಹಟನ್ ಕ್ರಿಮಿನಲ್ ಕೋರ್ಟ್ ಬೇಷರತ್ ಬಿಡುಗಡೆಯ ಶಿಕ್ಷೆಯನ್ನು ನೀಡಿದೆ. ಇದರರ್ಥ, ಅವರು ಜೈಲಿಗೆ ಹೋಗುವುದಿಲ್ಲ ಮತ್ತು ಯಾವುದೇ ದಂಡವನ್ನು ಕಟ್ಟಬೇಕಾಗಿಲ್ಲ. ಇನ್ನು 10 ದಿನಗಳಲ್ಲಿ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಅಪರಾಧಕ್ಕಾಗಿ ಶಿಕ್ಷೆಗೊಳಾಗಿ ಅಧ್ಯಕ್ಷೀಯ ಸ್ಥಾನ ಅಲಂಕರಿಸಿದ ಅಮೆರಿಕದ ಮೊಲ ವ್ಯಕ್ತಿಯಾಗಲಿದ್ದಾರೆ.
ತಮ್ಮ ಫ್ಲೋರಿಡಾ ಕ್ಲಬ್‌ನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಟ್ರಂಪ್, ಈ ಪ್ರಕರಣದಲ್ಲಿ ತಾವು ನಿರ್ದೋಷಿ, ತಮ್ಮ ವಿರುದ್ಧ ಕೇಸ್ ರಾಜಕೀಯ ಕಾರಣಕ್ಕೆ ದಾಖಲಿಸಲಾಗಿದೆ ಎಂದು ವಾದಿಸಿದರು. 2006ರಲ್ಲಿ ತಮ್ಮೊಂದಿಗೆ ಟ್ರಂಪ್ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ನೀಲಿ ತಾರೆಯೊಬ್ಬರು 2016 ಚುನಾವಣೆ ವೇಳೆ ಆರೋಪಿಸಿದ್ದರು. ಬಳಿಕ, ಪ್ರಕರಣ ದಾಖಲಾಗಿ ಟ್ರಂಪ್ ದೋಷಿ ಎಂದು ಕೋರ್ಟ್ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.