![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Dec 3, 2020, 6:15 AM IST
ವಾಷಿಂಗ್ಟನ್: “ಜೂನ್ 15ರ ಗಾಲ್ವಾನ್ ಕಣಿವೆ ಸಂಘರ್ಷ ಚೀನದ ಪೂರ್ವ ನಿಯೋಜಿತ ಕೃತ್ಯ’ ಎಂದು ಅಮೆರಿಕ ಘಂಟಾಘೋಷವಾಗಿ ಸಾರಿದೆ. ಈ ದಾಳಿಗೂ ಮುನ್ನ ಚೀನ ವರ್ತನೆಗಳನ್ನು ಅಮೆರಿಕ ಇಂಚಿಂಚೂ ಬಹಿರಂಗಪಡಿಸಿದ್ದು, ಬೀಜಿಂಗ್‌ನ ಮಾನ ಜಾಗತಿಕವಾಗಿ ಹರಾಜುಹಾಕಿದೆ.
ಯುಎಸ್- ಚೀನ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ, ಅಮೆರಿಕ ಸಂಸತ್‌ಗೆ ಈ ವರ್ಷದ ಜಾಗತಿಕ ಗಡಿಬಿಕ್ಕಟ್ಟುಗಳ ಬಗ್ಗೆ ವಿಸ್ತೃತ ವರದಿ ಸಲ್ಲಿಸಿದೆ. ಇದರಲ್ಲಿ “ಎಲ್‌ಎಸಿ ಮುಖಾಮುಖೀಯನ್ನು ದಶಕದ ಅತಿಘೋರ ಬಿಕ್ಕಟ್ಟು’ ಎಂದು ಆಯೋಗ ವ್ಯಾಖ್ಯಾನಿಸಿದೆ.
ಚೀನದ ಪಕ್ಕಾ ಪ್ಲ್ರಾನ್: “ಗಡಿಯಲ್ಲಿ ಸಾವು-ನೋವು ಸೃಷ್ಟಿಸಲೆಂದೇ ಚೀನ ಸರಕಾರ ಗಾಲ್ವಾನ್ ಸಂಘರ್ಷದ ಪಿತೂರಿ ರೂಪಿಸಿತ್ತು. ಇದಕ್ಕೂ ಕೆಲವು ವಾರಗಳ ಮುನ್ನ ರಕ್ಷಣ ಸಚಿವ ವೀ ಫೆಂಘೆ ಸ್ಥಿರತೆಗಾಗಿ ಕಾದಾಟಕ್ಕಿಳಿಯಿರಿ ಎಂದು ಸೈನಿಕರಿಗೆ ಸೂಚಿಸಿದ್ದರು’ ಎಂದು ವರದಿ ಉಲ್ಲೇಖೀಸಿದೆ. “ಮಾರಣಾಂತಿಕ ಸಂಘರ್ಷಕ್ಕೆ ವಾರ ಮೊದಲೇ ಪಿಎಲ್‌ಎ 1000 ಸೈನಿಕರನ್ನು ಗಾಲ್ವಾನ್ ದಡದಲ್ಲಿ ನಿಯೋಜಿಸಿತ್ತು. ಇದೇ ವೇಳೆ ಚೀನ ನಡೆಸಿದ ಮಿಲಿಟರಿ ಕಾಮಗಾರಿಗಳು ಉಪಗ್ರಹ ಚಿತ್ರಗಳಲ್ಲೂ ಸ್ಪಷ್ಟವಾಗಿದ್ದವು’ ಎಂದು ಹೇಳಿದೆ.
“ಗ್ಲೋಬಲ್’ ಸುಳಿವು: ದುರ್ಘಟನೆಗೆ 2 ವಾರಗಳ ಮುಂಚೆ “ಗ್ಲೋಬಲ್ ಟೈಮ್ಸ್’ ಕೂಡ ಸುಳಿವು ನೀಡಿತ್ತು. ಅಮೆರಿಕ- ಚೀನ ನಡುವೆ ಭಾರತ ಮಧ್ಯಪ್ರವೇಶಿಸಿದರೆ, ಹೊಸದಿಲ್ಲಿ ಜತೆಗಿನ ವ್ಯಾಪಾರ ಮತ್ತು ಆರ್ಥಿಕ ಒಪ್ಪಂದಗಳು ವಿನಾಶಕಾರಿ ಹೊಡೆತ ಅನುಭವಿಸಲಿವೆ ಎಂದು ಎಚ್ಚರಿಸಿತ್ತು.
ಬಾಯ್ಬಿಡದ ಚೀನ: “ಮೇ ತಿಂಗಳಿನಿಂದಲೇ ಎಲ್‌ಎಸಿಯ ಬಹು ವಲಯಗಳಲ್ಲಿ ಪಿಎಲ್‌ಎ, ಭಾರತೀಯ ಯೋಧರಿಗೆ ಮುಖಾಮುಖೀ ಆಗಿತ್ತು. ಆದರೆ, ಗಾಲ್ವಾನ್ ಸಂಘರ್ಷದಲ್ಲಿ ಭಾರತ 20 ಯೋಧರು ಮಡಿದ ವಿಚಾರ ಹೇಳಿಕೊಂಡರೂ, ಚೀನ ಇದುವರೆಗೂ ತನ್ನ ಸಾವು-ನೋವಿನ ಬಗ್ಗೆ ವರದಿ ನೀಡಿಲ್ಲ’ ಎಂದು ವರದಿ ಹೇಳಿದೆ.
ಭಾರತದ ಅಕ್ಕಿಯೇ ಚೀನಕ್ಕೆ ಬೇಕಾಯ್ತು!
30 ವರ್ಷಗಳ ಹಿಂದೆ ಭಾರತದ ಅಕ್ಕಿ ವಿರುದ್ಧ ಮೂಗು ಮುರಿದಿದ್ದ ಚೀನಕ್ಕೆ ಕೊನೆಗೂ ಜ್ಞಾನೋದಯವಾಗಿದೆ. ಡಿಸೆಂಬರ್- ಫೆಬ್ರವರಿ ಅವಧಿಯಲ್ಲಿ ಪ್ರತಿ ಟನ್‌ಗೆ 22,125 ರೂ. ಕೊಟ್ಟು, 1 ಲಕ್ಷ ಟನ್ ಅಕ್ಕಿ ಖರೀದಿಸಲು ಚೀನ ಮುಂದಾಗಿದೆ. ಇಷ್ಟು ದಿನ ಚೀನವು ಥಾಯ್ಲೆಂಡ್, ವಿಯೆಟ್ನಾಂ, ಮ್ಯಾನ್ಮಾರ್ ಮತ್ತು ಪಾಕಿಸ್ಥಾನದಿಂದ ಅಕ್ಕಿ ಖರೀದಿಸುತ್ತಿತ್ತು. ಅಲ್ಲಿನ ಅಕ್ಕಿ ದರ ಹೆಚ್ಚಾಗಿದ್ದರಿಂದ ಚೀನ ಅನಿವಾರ್ಯವಾಗಿ ಭಾರತದತ್ತ ಮುಖಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಕ್ಕಿ ರಫ್ತು ಒಕ್ಕೂಟದ ಅಧ್ಯಕ್ಷ ಬಿ.ವಿ.ಕೃಷ್ಣ ರಾವ್, “ಇದೇ ಮೊದಲ ಬಾರಿಗೆ ಚೀನ ಭಾರತದಿಂದ ಅಕ್ಕಿ ಖರೀದಿಸುತ್ತಿದೆ. ನಮ್ಮ ದೇಶದ ಅಕ್ಕಿಯ ಗುಣಮಟ್ಟ ಪರಿಶೀಲಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲಿದ್ದಾರೆ’ ಎಂದು ಹೇಳಿದ್ದಾರೆ. ಭಾರತ ಜಗತ್ತಿನ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಷ್ಟ್ರವಾಗಿದ್ದರೆ, ಚೀನ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಆಮದು ಮಾಡಿಕೊಳ್ಳುವ ದೇಶ.
ಪಿಒಕೆಯಲ್ಲಿ ಚೀನ ಹೈಡ್ರೋಪವರ್ ಪ್ಲ್ರಾಂಟ್
ಪಡೆದ ಸಾಲದ ಋಣದಲ್ಲಿರುವ ಪಾಕಿಸ್ಥಾನ ಈಗ ಪಿಒಕೆಯಲ್ಲಿ ಚೀನಕ್ಕೆ ಹೈಡ್ರೋಪವರ್ ಯೋಜನೆಗೆ ಅವಕಾಶ ಕಲ್ಪಿಸಿದೆ. ಚೀನ- ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ನ ಭಾಗವಾಗಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ 1.35 ಬಿಲಿಯನ್ ಡಾಲರ್ ವೆಚ್ಚದಲ್ಲಿ 700 ಮೆಗಾವ್ಯಾಟ್ ಹೈಡ್ರೋಪವರ್ ಯೋಜನೆಗೆ ಪಿಒಕೆ ಆಡಳಿತ ಸಹಿ ಹಾಕಿದೆ. ಸಿಧಾನೊಟಿ ಜಿಲ್ಲೆಯ ಝೇಲಂ ನದಿ ದಡದಲ್ಲಿ ಚೀನದ ಗೆಝೌಬಾ ಗ್ರೂಪ್ ತನ್ನ ಸ್ಥಳೀಯ ಪಾಲುದಾರ ಲರಾಯ್º ಗ್ರೂಪ್ ಜತೆಗೂಡಿ “ಆಜಾದ್ ಪಠಾಣ್ ಹೈಡ್ರೋಪವರ್ ಯೋಜನೆ’ ಆರಂಭಿಸಲಿದೆ ಎಂದು “ಡಾನ್’ ವರದಿ ಮಾಡಿದೆ.
ತುದಿಗಾಲಿನಲ್ಲಿ ನೌಕಾಪಡೆ
ಲಡಾಖ್ ಗಡಿಯಂತೆ ಒಂದುವೇಳೆ ಚೀನ ನೌಕಾಪಡೆ ಹಿಂದೂ ಮಹಾಸಾಗರ ವಲಯದಲ್ಲಿ ದುಸ್ಸಾಹಸ ತೋರಲು ಬಂದಿದ್ದರೆ, ಭಾರತೀಯ ನೌಕಾಪಡೆ ಪಿಎಲ್‌ಎ ಯುದ್ಧ ನೌಕೆಗಳನ್ನು ಹಿಮ್ಮೆಟ್ಟಿಸಲು ಸಕಲ ರೀತಿಯಿಂದ ಸಜ್ಜಾಗಿತ್ತು ಎಂದು ಉಪ ಅಡ್ಮಿರಲ್ ಎ.ಕೆ. ಚಾವ್ಲಾ ತಿಳಿಸಿ ದ್ದಾರೆ.ಸುದ್ದಿ ಗೋಷ್ಠಿಯಲ್ಲಿ ಅವರು, “ಪಿಎಲ್‌ಎ ಒಡ್ಡುತ್ತಿದ್ದ ಯಾವುದೇ ಅಡೆತಡೆಗಳ ವಿರುದ್ಧ ಕಾರ್ಯಾಚರಣೆ ನಡೆಸಲು ನಾವು ಸಮರ್ಥರಿದ್ದೆವು’ ಎಂದು ಹೇಳಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.