ನಲುಗಿದ ಅಮೆರಿಕಾ: ಚೀನಾ, ಇಟಲಿಯನ್ನು ಮೀರಿಸಿ 1 ಲಕ್ಷ ಗಡಿ ದಾಟಿದ ಸೋಂಕು ಪೀಡಿತರ ಪ್ರಮಾಣ
Team Udayavani, Mar 28, 2020, 9:56 AM IST
ವಾಷಿಂಗ್ಟನ್: ಕೋವಿಡ್-19 ವೈರಸ್ ಅಮೆರಿಕವನ್ನು ಅಕ್ಷರಶಃ ನಲುಗಿಸಿದ್ದು ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಆ ಮೂಲಕ ಅತೀ ವೇಗವಾಗಿ ಸೋಂಕು ಪೀಡಿತರ ಸಂಖ್ಯೆ 1 ಲಕ್ಷ ದಾಟಿದ ಮೊದಲ ದೇಶವೆನಿಸಿಕೊಂಡಿದೆ. ಈ ಕುರಿತು ಜಾಣ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ದಾಖಲೆಯನ್ನು ಬಿಡುಗಡೆ ಮಾಡಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಅಮೆರಿಕಾದಲ್ಲಿ ಈಗಾಗಲೇ 1,00,717 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, 1,544 ಜನರು ಈ ಮಾರಣಾಂತಿಕ ವೈರಸ್ ಗೆ ಬಲಿಯಾಗಿದ್ದಾರೆ. ನ್ಯೂಯಾರ್ಕ್ ನಲ್ಲಿ ಅತೀ ಹೆಚ್ಚು ಸೋಂಕು ಪೀಡಿತರಿದ್ದಾರೆ.
ಸೋಂಕು ಮೊದಲು ಕಂಡುಬಂದ ಚೀನಾದ ನಂತರ ಅಮೆರಿಕಾದಲ್ಲಿ ಈ ಮೊದಲು 15,000 ದೃಢಪಟ್ಟ ಪ್ರಕರಣಗಳನ್ನು ವರದಿಯಾಗಿದ್ದಾರೆ, ಇಟಲಿಯಲ್ಲಿ 20,000 ಪ್ರಕರಣಗಳು ದಾಖಲಾಗಿದ್ದವು. ಆದರೇ ಇದೀಗ ಅದರ ಪ್ರಮಾಣ ದುಪ್ಪಟ್ಟಾಗಿದೆ.
ಗಮನಾರ್ಹ ಸಂಗತಿಯೆಂದರೇ ಅಮೆರಿಕಾದಲ್ಲಿ ಈ ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣ 1.5% ಇದ್ದರೇ, ಇಟಲಿಯಲ್ಲಿ 10.5% ಇದೆ. ಇಲ್ಲಿ (ಇಟಲಿ) ಸೋಂಕು ಪೀಡಿತರ ಪ್ರಮಾಣ 86,498, ಚೀನಾದಲ್ಲಿ 81,897 ಜನರು ಸೋಂಕು ತಗುಲಿರುವುದು ದೃಢಪಟ್ಟಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.