ಜಾರ್ಜಿಯಾ ಡೆಮಾಕ್ರಾಟ್ ತೆಕ್ಕೆಗೆ
Team Udayavani, Nov 21, 2020, 6:59 AM IST
ವಾಷಿಂಗ್ಟನ್: ರಿಪಬ್ಲಿಕನ್ ಬಾಹುಳ್ಯದ ಜಾರ್ಜಿಯಾವನ್ನು ತಮ್ಮ ತೆಕ್ಕೆಗೆ ಪಡೆಯುವಲ್ಲಿ ಕೊನೆಗೂ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಯಶಸ್ವಿಯಾಗಿದ್ದಾರೆ. ಮತಗಳ ಮರುಎಣಿಕೆ ಪ್ರಕ್ರಿಯೆ ಶುಕ್ರವಾರ ಮುಗಿದಿದ್ದು, ಬೈಡೆನ್ 12,284 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಈ ಮೂಲಕ 1992ರ ಬಳಿಕ ಪ್ರಮುಖ ಪ್ರಾಂತ್ಯ ಜಾರ್ಜಿಯಾದಲ್ಲಿ ಗೆಲುವಿನ ನಗೆ ಬೀರಿದ ಮೊದಲ ಡೆಮಾಕ್ರಾಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ನ.3ರಂದು ನಡೆದ ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎನ್ನುವುದು ಮರುಎಣಿಕೆಯಿಂದ ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಬ್ಲ್ಯುಎಚ್‌ಒಗೆ ಸೇರ್ಪಡೆ: ಇದೇ ವೇಳೆ, ಶುಕ್ರವಾರ ಮಾತನಾಡಿರುವ ಬೈಡೆನ್, “ವಿಶ್ವ ಆರೋಗ್ಯ ಸಂಸ್ಥೆಗೆ ಮತ್ತೆ ಅಮೆರಿಕ ಸೇರ್ಪಡೆಯಾಗಲಿದೆ’ ಎಂದು ಘೋಷಿಸಿದ್ದಾರೆ. ಜತೆಗೆ, ಚೀನವು ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದೂ ಹೇಳಿದ್ದಾರೆ. ಕೊರೊನಾ ಸೋಂಕಿಗೆ ಸಂಬಂಧಿಸಿ ಡಬ್ಲ್ಯುಎಚ್‌ಒ ಮೇಲೆ ಕಿಡಿಕಾರಿದ್ದ ಟ್ರಂಪ್ ಎಪ್ರಿಲ್‌ನಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವ ಘೋಷಣೆ ಮಾಡಿದ್ದರು.
ಟ್ರಂಪ್ ಕಾನೂನು ಸಲಹೆಗಾರನ ತಲೆಯಿಂದ ಇಳಿದಿದ್ದೇನು?
ಟ್ರಂಪ್ ಕಾನೂನುಪಡೆಯ ಪ್ರಮುಖರಾದ ರುಡಿ ಗಿಯುಲಾನಿ, ಸೋಲಿಗೆ ಕಾರಣಗಳನ್ನು ವಿವರಿಸುತ್ತಿದ್ದರು. ಅದೇ ವೇಳೆ ಅವರ ತಲೆಯ ಎಡ ಮತ್ತು ಬಲಬದಿಯಿಂದ ಕಪ್ಪುದ್ರವ ಇಳಿದು ಗಲ್ಲ ವನ್ನು ಮುಟ್ಟಿತು. ಅದೇನೆಂದು ಯಾರಿಗೂ ಅರ್ಥವಾಗಲಿಲ್ಲ. ಊಹೆಗಳ ಪ್ರಕಾರ ಅದು ಬೆವರಿನ ಪರಿಣಾಮ ತಲೆಗೆ ಹಚ್ಚಿದ್ದ ಬಣ್ಣ ದ್ರವಿ ಸಿದ್ದು. ಇನ್ನೊಂದು ಊಹೆಯ ಪ್ರಕಾರ, ಕಣ್ಣಿಗೆ ಹಾಕಿದ್ದ ಕನ್ನಡಕದ ಕಟ್ಟುಗಳಿಂದ ಇಳಿದಿದ್ದು. ಒಬ್ಬ ಕೇಶವಿನ್ಯಾಸಕನ ಪ್ರಕಾರ, ರುಡಿ ತಲೆಯ ಅಕ್ಕಪಕ್ಕದ ಭಾಗ ಸುಟ್ಟಂತಾಗಿದ್ದನ್ನು ಮರೆ ಮಾಚಲು ಹಚ್ಚಿದ್ದ ಕಾಡಿಗೆ. ವಿಚಿತ್ರವೆಂದರೆ ಸುದ್ದಿಗೋಷ್ಠಿ ಸುದ್ದಿಯಾಗುವುದರ ಬದಲು, ಈ ವಿಷಯ ಬಹಳ ಸುದ್ದಿ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.