![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 7, 2020, 5:55 AM IST
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಕಣ್ಣಾಮುಚ್ಚಾಲೆ ಆಟ ಇನ್ನೂ ಮುಂದುವರಿದಿದ್ದು, ಹೆಚ್ಚು ಕಡಿಮೆ ಜೋ ಬೈಡೆನ್ ಅವರೇ ಆಯ್ಕೆಯಾಗುವ ಸಂಭವಗಳು ಹೆಚ್ಚಾಗಿವೆ.
ಬೈಡೆನ್ ಅವರಿಗೆ ಶುಕ್ರವಾರದ ಬೋನಸ್ ಆಗಿ ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಮುನ್ನಡೆ ಸಿಕ್ಕಿದೆ. ಒಂದು ವೇಳೆ ಪೆನ್ಸಿಲ್ವೇನಿಯಾದಲ್ಲಿ ಬೈಡೆನ್ ಗೆದ್ದರೆ ದೊಡ್ಡಣ್ಣನ ಗದ್ದುಗೆ ಏರುವುದು ಪಕ್ಕಾ ಆಗುತ್ತದೆ.
ಜನಪ್ರಿಯ ಮತಗಳ ಲೆಕ್ಕಾಚಾರದಲ್ಲಿ ಡೆಮಾಕ್ರ್ಯಾಟ್ ಪಕ್ಷದ ಬೈಡನ್‌ಗೆ 3,297,614(ಶೇ.49.4) ಮತ ಸಿಕ್ಕಿದ್ದರೆ, ಹಾಲಿ ಅಧ್ಯಕ್ಷ, ರಿಪಬ್ಲಿಕನ್‌ನ ಡೊನಾಲ್ಡ್ ಟ್ರಂಪ್‌ಗೆ 3,290,788(ಶೇ.49.3) ಮತ ಸಿಕ್ಕಿವೆ. ಈ ಮೂಲಕ ಈ ಇಬ್ಬರ ನಡುವೆ ಭಾರೀ ಜಿದ್ದಾಜಿದ್ದಿ ನಡೆಯುತ್ತಿರುವುದು ಖಚಿತವಾಗಿದೆ.
ಸದ್ಯ ಪೆನ್ಸಿಲ್ವೇನಿಯಾ, ಜಾರ್ಜಿಯಾ, ಅರಿಝೋನಾ ಮತ್ತು ನೆವಾಡಾ ರಾಜ್ಯಗಳ ಫಲಿತಾಂಶವೇ ಇವರಿಬ್ಬರ ಹಣೆಬರಹ ಬರೆಯಲಿದೆ. ಈ ನಾಲ್ಕೂ ರಾಜ್ಯಗಳಲ್ಲೂ ಬೈಡೆನ್ ಮುಂದಿದ್ದಾರೆ.
ಯಾವ ರಾಜ್ಯದಲ್ಲಿ ಏನು ಸ್ಥಿತಿ?
ಸದ್ಯ ಬೈಡೆನ್ ಅವರು 264 ಎಲೆಕ್ಟೋರಲ್ ಮತಗಳನ್ನು ಗಳಿಸಿದ್ದಾರೆ. ಅತೀ ಕಡಿಮೆ ಎಲೆಕ್ಟೋರಲ್ ವೋಟುಗಳನ್ನು ಒಳಗೊಂಡಿರುವ ನೆವಾಡ (6)ದಲ್ಲಿ ಗೆದ್ದರೆ ಸಾಕು, ಬೈಡನ್‌ಗೆ ಅಮೆರಿಕದ ಗದ್ದುಗೆ ಒಲಿಯಲಿದೆ.
120 ವರ್ಷಗಳಲ್ಲೇ ಹೆಚ್ಚು
ಅಮೆರಿಕದಲ್ಲಿ 120 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಮತದಾನವಾಗಿದೆ. ಅಮೆರಿಕದಲ್ಲಿ 239 ದಶಲಕ್ಷ ಅರ್ಹ ಮತದಾರರಿದ್ದು, ಇವರಲ್ಲಿ 160 ದಶಲಕ್ಷ ಮಂದಿ ಮತ ಚಲಾಯಿಸಿದ್ದಾರೆ. ಅಂದರೆ ನ. 3ರಂದು ಶೇ. 66.9ರಷ್ಟು ಮತದಾನವಾಗಿತ್ತು. ಇದೇ ರೀತಿ 1900ರ ಚುನಾವಣೆಯಲ್ಲೂ ಶೇ. 73.7ರಷ್ಟು ಮತದಾನವಾಗಿತ್ತು. ಸದ್ಯ ಅಂಚೆ ಮತಗಳನ್ನೂ ಎಣಿಕೆ ಮಾಡಿದರೆ, ಆಗಿನದ್ದಕ್ಕಿಂತ ಹೆಚ್ಚು ಮತದಾನವಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇದುವರೆಗಿನ ಮತ
ಬೈಡೆನ್ 264
ಟ್ರಂಪ್ 214
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.