ಅಮೆರಿಕ ಚುನಾವಣೆ: ಕಮಲಾ ದೇವಿ ಹೆಸರು ಸೂಚಿಸಲು ಒಬಾಮಾ ಕಾರಣ!


Team Udayavani, Aug 12, 2020, 7:25 PM IST

kamala haris

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕಾವು ಹೆಚ್ಚಾಗುತ್ತಿದೆ.

ಅಧ್ಯಕ್ಷೀಯ ಚುನಾವಣೆಯ ಮೊದಲು ಡೆಮಾಕ್ರಟಿಕ್‌ ಪಕ್ಷವು ಭಾರತೀಯ-ಆಫ್ರಿಕನ್‌ ಮೂಲದ ಕಮಲಾ ದೇವಿ ಹ್ಯಾರಿಸ್‌ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದೆ.

ಈ ಮೂಲಕ ಡೆಮಾಕ್ರಟ್‌ ಮತ್ತು ರಿಪಬ್ಲಿಕ್‌ ನಡುವೆ ಚುನಾವಣೆಯ ಟ್ರಂಪ್‌ ಕಾರ್ಡ್‌ ಹೊರಬಿದ್ದಿದೆ.

ಕೆಳವು ದಿನಗಳ ಹಿಂದೆ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ ಅವರು ಕಮಲಾ ದೇವಿ ಅವರ ಈ ಘೋಷಣೆಯ ಸುಳಿವನ್ನು ನೀಡಿದ್ದರು. ಚುನಾವಣೆಯ ತಯಾರಿಯಲ್ಲಿರುವ ಬಿಡೆನ್‌ ಕೈಯಲ್ಲಿ ಇದಕ್ಕೆ ಸಂಬಂಧಿಸಿದಂತಹ ಕಾಗದ ಪತ್ರಗಳಿದ್ದವು. ಬಳಿಕ ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಬಿಡೆನ್‌ ಬಳಿಯಿದ್ದ ಕಾಗದದಲ್ಲಿ ಐದು ಹೆಸರುಗಳಿತ್ತು ಎನ್ನಲಾಗಿತ್ತು. ಅದರಲ್ಲಿ ಇಂದು ಘೋಷಣೆಯಾದ ಕಮಲಾ ದೇವಿ ಅವರ ಹೆಸರು ಪಟ್ಟಿಯ ಮೇಲ್ಭಾಗದಲ್ಲಿತ್ತು.

ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ಹರಿದಾಡಿತ್ತು. ಅಂದಿನಿಂದ, ಕಮಲಾ ದೇವಿ ಡೆಮಾಕ್ರಟಿಕ್‌ ಪಕ್ಷದ ಉಪಾಧ್ಯಕ್ಷರ ಹುದ್ದೆಗೆ ಮೊದಲ ಆಯ್ಕೆ ಎಂದೇ ಹೇಳಲಾಗಿತ್ತು. ದಿನಗಳ ಹಿಂದೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರು ಕಮಲಾ ದೇವಿ ಅವರ ಹೆಸರನ್ನು ಬಹಿರಂಗವಾಗಿ ಪ್ರಸ್ತಾವಿಸಿದ್ದರು. ಬಳಿಕ ಇದನ್ನು ಒಪ್ಪಿಕೊಂಡ ಪಕ್ಷ ಇದೀಗ ಕಮಲಾ ಅವರನ್ನು ಈ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಡೆಮಾಕ್ರಟಿಕ್‌ ಪಕ್ಷವು ಎರಡು ಸಂದೇಶಗಳನ್ನು ನೀಡಲು ಬಯಸಿದೆ.

ಕ್ಯಾಲಿಫೋರ್ನಿಯಾ ಸೆನೆಟರ್‌ ಆಗಿರುವ ಕಮಲಾ ಹ್ಯಾರಿಸ್‌ ಅವರನ್ನು ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಮೊದಲ ಕಪ್ಪು ಮಹಿಳೆ ಹಾಗೂ ಮೊದಲ ಏಷ್ಯನ್‌ ಅಮೆರಿಕ ಮಹಿಳೆಯನ್ನು ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಮಾಡುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಂತಾಗಿದೆ. ಇದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಒಂದು ಕಲ್ಲಿನಿಂದ ಎರಡು ಹೊಡೆತ
ಕಮಲಾ ಅವರು ಡೆಮಾಕ್ರಟಿಕ್‌ ಪಕ್ಷವನ್ನು ಜನಾಂಗೀಯ ಸಮಾನತೆಯ ಸಂಕೇತವೆಂದು ಬಣ್ಣಿಸಿದ್ದರು. ಇದರ ತಯಾರಿ ಕಳೆದ ವರ್ಷ ವಿಸ್ಕೋಸಿನ್‌ನಲ್ಲಿ ಪ್ರಾರಂಭವಾಗಿತ್ತು. ಬಳಿಕದ ದಿನಗಳಲ್ಲಿ ಡೆಮಾಕ್ರಟಿಕ್‌ ಪಕ್ಷದ ಸಮಾವೇಶದಲ್ಲಿ ಬಿಡೆನ್‌ ಅವರು ಕಮಲಾ ಅವರ ಕುರಿತು ತುಟಿ ಬಿಚ್ಚಿದ್ದರು. ಕಮಲಾ ಅವರು ಆಫ್ರಿಕನ್‌ ಹಾಗೂ ಭಾರತೀಯ ಮೂಲದವರಾಗಿದ್ದಾರೆ ಎಂದಿದ್ದರು. ಇಲ್ಲಿ ಬಿಡೆನ್‌ ಅವರು ಜನಾಂಗೀಯ ಘರ್ಷಣೆ ಸಂಭವಿಸುವುದಿಲ್ಲ ಎಂದು ಹೇಳಲು ಇದನ್ನು ಅವಕಾಶವಾಗಿ ಬಳಸಿಕೊಂಡಿದ್ದರು.

ಹಾಗೆ ನೋಡಿದರೆ ಅಮೆರಿಕದಲ್ಲಿ ಭಾರತೀಯ ಮೂಲದ ಜನರನ್ನು ಸಾಮಾನ್ಯವಾಗಿ ಡೆಮಾಕ್ರಟಿಕ್‌ ಬೆಂಬಲಿಗರೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಬರಾಕ್‌ ಒಬಾಮ, ಜೋ ಬಿಡನ್‌, ಹಿಲರಿ ಕ್ಲಿಂಟನ್‌ ಮೊದಲಾದವರು. ಭಾರತೀಯರತ್ತ ಗಮನ ಹರಿಸಿದ್ದರು. ಟ್ರಂಪ್‌ ಇತ್ತೀಚೆಗೆ ಎಚ್‌ -1 ಬಿ ವೀಸಾಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದಾಗಿ ಘೋಷಿಸಿದಾಗ ಈ ಕ್ರಮದಲ್ಲಿ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದವರಲ್ಲಿ ಡೆಮಾಕ್ರಟಿಕ್‌ಗಳು ಮೊದಲಿದ್ದರು. ಡೆಮಾಕ್ರಟ್ಸ್‌ಗಳ ವಿರೋಧಕ್ಕೆ ಟ್ರಂಪ್‌ ತಲೆಬಾಗಬೇಕಾಯಿತು. ಇಲ್ಲಿ ಟ್ರಂಪ್‌ ತಲೆಬಾಗದೇ ಹೋಗಿದ್ದರೆ ಅದು ಚುನಾವಣೆಯಲ್ಲಿ ಟ್ರಂಪ್‌ಗೆ ಭಾರೀ ಹಿನ್ನಡೆಯಾಗುತ್ತಿತ್ತು. ಯಾಕೆಂದರೆ ಅದು ಬಿಡೆನ್‌ ಅವರಿಗೆ ಸುಲಭವಾಗುತ್ತಿತ್ತು.

ಈಗ ಮುಂದುವರಿದು ಕಮಲಾ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಡೆಮಾಕ್ರಟಿಕ್‌ಗಳು ಭಾರತೀಯರಿಗೆ ಮತ್ತು ಆಫ್ರಿಕನ್‌ ಮೂಲದ ನಾಗರಿಕರಿಗೆ ರಿಪಬ್ಲಿಕನ್‌ ಪಕ್ಷಕ್ಕಿಂತ ನಾವು ಸಂಪೂರ್ಣವಾಗಿ ಭಿನ್ನವೆಂದು ಸಾರುವ ಸಂದೇಶವನ್ನು ಕಳುಹಿಸಲು ಮುಂದಾಗಿದ್ದಾರೆ. ಜಾರ್ಜ್‌ ಫ್ಲಾಯ್ಡ್ ಅವರ ಹತ್ಯೆಯ ಬಳಿಕ ಕರಿಯರು ಮತ್ತು ರಿಪಬ್ಲಿಕನ್‌ರಿಗೆ ಸರಿ ಹೊಂದುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡೆಮೋಕ್ರಟ್ಸ್‌ ಇದರ ಲಾಭ ಪಡೆಯಲು ಮುಂದಾಗಿದೆ.

ಜೋ ಬಿಡೆನ್‌ರನ್ನು ಟೀಕಿಸಿದ್ದ ಕಮಲಾ
ಡೆಮಾಕ್ರಟಿಕ್‌ ಪಕ್ಷದ ಕೆಲವು ಸಭೆಗಳಲ್ಲಿ ಜೋ ಬಿಡೆನ್‌ ಅವರನ್ನು ಕಮಲಾ ದೇವಿ ಅವರು ಹಲವಾರು ಬಾರಿ ಟೀಕಿಸಿದ್ದಾರೆ. “ನಿಮ್ಮ ಬಗ್ಗೆ ಯೋಚಿಸುವ ಮೊದಲು ನೀವು ರಾಷ್ಟ್ರದ ಬಗ್ಗೆ ಚಿಂತಿಸಬೇಕು. ಟ್ರಂಪ್‌ ಅವರನ್ನು ವಿರೋಧಿಸುವಾಗ ನಾವು ವಿದೇಶಾಂಗ ನೀತಿಯ ಬಗ್ಗೆ ತುಂಬಾ ಮೃದುವಾದ ಮನೋಭಾವವನ್ನು ಹೊಂದಬಾರದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅಮೆರಿಕವನ್ನು ಉತ್ತುಂಗದಲ್ಲಿಡಲು ಕಟ್ಟುನಿಟ್ಟಾದ ಮತ್ತು ಕೆಲವು ಮೃದುವಾದ ನೀತಿಗಳನ್ನು ಇಟ್ಟುಕೊಳ್ಳುವುದು ಅವಶ್ಯಕ’ ಎಂದು ಸಭೆಯಲ್ಲಿ ಜೋ ಬಿಡೆನ್‌ ಅವರ ಕುರಿತು ಕಮಲಾ ಅವರು ಹೇಳಿದ್ದರು. ವಿಶೇಷ ಎಂದರೆ ಕಮಲಾ ಅವರು ಜೋ ಬಿಡೆನ್‌ ಅವರ ಪುತ್ರನ ಉತ್ತಮ ಸ್ನೇಹಿತೆಯಾಗಿದ್ದಾರೆ. ಆದರೆ ಜೋ ಅವರೊಂದಿಗೆ ಕೆಲವು ನೀತಿಗಳ ಕುರಿತಾಗಿ ಅಸಮಧಾನ ಇದೆ.

ಮಲಾ ಹ್ಯಾರಿಸ್ (55ವರ್ಷ) ಅವರ ತಂದೆ ಜಮೈಕಾ ವಲಸಿಗ, ತಾಯಿ ಭಾರತೀಯ ಮೂಲದವರು. ಕಮಲಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲಾ ಅಟಾರ್ನಿ ಆಗಿ ಹಾಗೂ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದವರಾಗಿದ್ದಾರೆ.

ಇದೀಗ ಕಮಲಾ ಅವರನ್ನು ಉಪಾಧ್ಯಕರ ಹುದ್ದೆಯ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಜೋ ಬಿಡನ್‌ ಮತ್ತು ಡೆಮಾಕ್ರಟಿಕ್‌ ಪಕ್ಷವು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದೆ. ಎಲ್ಲ ಅಭಿಪ್ರಯಾಗಳನ್ನು ನಾವು ಗೌರವಿಸಿ ಮುನ್ನಡೆಯುತ್ತೇವೆ ಎಂದು ಹೇಳಲು ಹೊರಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜೋ ಬಿಡೆನ್‌ ಮತ್ತು ಕಮಲಾ ನಡುವಿನ ಪೈಪೋಟಿ ಕಡಿಮೆಯಾಗಿದೆ. ಇಲ್ಲಿ ಕಮಲಾ ಮತ್ತು ಜೊ ಬಿಡೆನ್‌ ನಡುವಿನ ವೈಚಾರಿಕ ಅಂತರವನ್ನು ರಿಪಬ್ಲಿಕನ್‌ ಪಕ್ಷವು ಸಮಸ್ಯೆಯನ್ನಾಗಿ ಚಿತ್ರಿಸಲು ಮುಂದಾಗಿದೆ. ಈ ಹಿಂದೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರ ಸಭೆಯಲ್ಲಿ ಡೆಮಾಕ್ರಟಿಕ್‌ ಪಕ್ಷದಲ್ಲಿನ ಈ ವೈಚಾರಿಕ ಅಂತರಗಳು ಚರ್ಚೆಯಾಗಿದ್ದವು. ಡೆಮಾಕ್ರಟ್ಸ್‌ ಗೆದ್ದರೆ ಅಮೆರಿಕವು ಈ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್‌ ಹಲವು ಬಾರಿ ಜನರ ಮುಂದಿಟ್ಟಿದ್ದರು. ಈ ಕಾರಣಕ್ಕೆ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲು ಡೆಮಾಕ್ರಟ್ಸ್‌ ಮುಂದಾಗಿದೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.