ಕಾಬೂಲ್ ತೊರೆದ ಅಮೆರಿಕ ಸೇನಾ ಪಡೆ : ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ
Team Udayavani, Aug 31, 2021, 10:30 AM IST
ಕಾಬೂಲ್ : 20 ವರ್ಷಗಳ ನಂತರ ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಿಂದ ನಿರ್ಗಮಿಸಿದಾಗ ಬೆನ್ನಿಗೆ, ಅಮೆರಿಕದ ಸೇನಾ ಪಡೆ ಸಾವಿರಾರು ಸೈನಿಕರನ್ನು ಕೊಂದಿದ್ದಲ್ಲದೇ, ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಿದೆ ಎಂದು ತಾಲಿಬಾನ್ ಮತ್ತೆ ತನ್ನ ಕ್ಯಾತೆ ಮುಂದುವರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್, “20 ವರ್ಷಗಳ ಮಿಲಿಟರಿ ಕಾರ್ಯಾಚರಣೆಯ ನಂತರ ಅಫ್ಘಾನಿಸ್ತಾನದಿಂದ ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡಿದೆ. ಸಾವಿರಾರು ಸೈನಿಕರನ್ನು ಕೊಂದು ರಕ್ತ ಬಸಿದಿದ್ದಾರೆ. ಅಮೆರಿಕ ಇಲ್ಲಿ ಊಹಿಸಲಾರದಷ್ಟು ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಣಜಿ ಟ್ರೋಫಿ: ಒಂದೇ ಗುಂಪಿನಲ್ಲಿ ಕರ್ನಾಟಕ, ಮುಂಬೈ, ದೆಹಲಿ ತಂಡಗಳು
ಯುಎಸ್ ಕಾಬೂಲ್ ನಿಂದ ಹೊರ ನಡೆದ ಹಿನ್ನೆಲೆಯಲ್ಲಿ ತಾಲಿಬಾನ್ ಉಗ್ರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಯುಎಸ್ ವಿಮಾನಗಳು ರಾತ್ರಿ ಆಕಾಶದಲ್ಲಿ ಕಾಬೂಲ್ ನನ್ನು ತೊರೆಯುತ್ತಿರುವುದನ್ನು ನೋಡೊ ಉಗ್ರ ಪಡೆ ಹರ್ಷ ವ್ಯಕ್ತ ಪಡಿಸಿದ್ದಲ್ಲದೇ, ಬಂದೂಕುಗಳನ್ನು ಗಾಳಿಯಲ್ಲಿ ಗುಂಡು ಹಾರಿಸಿ, ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಯುದ್ಧದ ನಂತರ ವಿಜಯವನ್ನು ಆಚರಿಸಿದ್ದಾರೆಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇನ್ನು, ಈ ಬಗ್ಗೆ ತಾಲಿಬಾನ್ ವಕ್ತಾರ ಖಾರಿ ಯೂಸುಫ್ ಪ್ರತಿಕ್ರಿಯಿಸಿದ್ದು, ಯುಎಸ್ ನ ಸೇನಾ ಪಡೆಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತೊರೆದಿದೆ. ನಮ್ಮ ದೇಶವು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ” ಎಂದು ಹೇಳಿದ್ದಾರೆ.
ಆದಾಗ್ಯೂ, ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರ ಪಡೆಗಳ ನೆರಳಿನಿಂದ ತಪ್ಪಿಸಿಕೊಳ್ಳಲು ಬಯಸಿದ ಸುಮಾರು ಅಂದಾಜು 100 ಜನರು ಅಮೆರಿಕನ್ನರು ಇನ್ನೂ ಅಫ್ಗಾನ್ ನಲ್ಲಿ ಸಿಲುಕಿಕೊಂಡಿದ್ದಾರೆಂದು ವರದಿಯಾಗಿವೆ.
ಯುನೈಟೆಡ್ ಸ್ಟೇಟ್ಸ್ ಸೋಮವಾರ ತಡರಾತ್ರಿ ಅಫ್ಘಾನಿಸ್ತಾನದಿಂದ ತನ್ನ ಸೇನಾ ಪಡೆಗಳನ್ನು ವಾಪಸ್ ಪಡೆದುಕೊಂಡಿತು, ಅಮೆರಿಕದ ಸುದೀರ್ಘ ಯುದ್ಧವನ್ನು ಕೊನೆಗೊಳಿಸಿತು ಮತ್ತು ಮಿಲಿಟರಿ ಇತಿಹಾಸದಲ್ಲಿ ಒಂದು ಅಧ್ಯಾಯಕ್ಕೆ ಪೂರ್ಣ ವಿರಾಮವಿಟ್ಟಿದೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಯುಎಸ್ ಸೆಂಟ್ರಲ್ ಕಮಾಂಡ್ ನ ಮುಖ್ಯಸ್ಥ ಜನರಲ್ ಫ್ರಾಂಕ್ ಮೆಕೆಂಜಿ, ಸೇನೆಯ ಕೊನೆಯ ವಿಮಾನಗಳು ಕಾಬೂಲ್ ವಿಮಾನ ನಿಲ್ದಾಣದಿಂದ ವಾಷಿಂಗ್ಟನ್ ಸಮಯ ಮಧ್ಯಾಹ್ನ 3:29 ಕ್ಕೆ ಮೊದಲು ಹೊರಟಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾರ್ಯಕಲಾಪದ ವೇಳೆ ಸಚಿವರ ಉಪಸ್ಥಿತಿ ಖಚಿತಪಡಿಸಿ: ಸಚಿವರಿಗೆ ಸ್ಪೀಕರ್ ಕಾಗೇರಿ ಪತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.