ಫೆಡರಲ್ ದರ ಜಾಸ್ತಿ: ಭಾರತಕ್ಕೆ ತೊಂದರೆ?
Team Udayavani, Jul 29, 2022, 6:20 AM IST
ವಾಷಿಂಗ್ಟನ್: ಅಮೆರಿಕ ಫೆಡರಲ್ ರಿಸರ್ವ್, ಅಲ್ಲಿನ ಬ್ಯಾಂಕ್‌ಗಳಿಗೆ ತಾನು ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು 75 ಬೇಸಿಸ್ ಅಂಕಗಳಷ್ಟು ಜಾಸ್ತಿ ಮಾಡಿದೆ. ಹಾಗಾಗಿ, ಬ್ಯಾಂಕ್‌ಗಳು ಪಡೆಯುವ ಸಾಲದ ಮೇಲಿನ ಬಡ್ಡಿದರವು ಶೇ. 2.25ರಿಂದ ಶೇ. 2.50ಕ್ಕೆ ಏರಿಕೆಯಾಗಿದೆ.
ತಮ್ಮ ಸಾಲದ ಮೇಲಿನ ಬಡ್ಡಿ ಹೆಚ್ಚಳದ ಹೊರೆಯನ್ನು ಅಲ್ಲಿನ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಮೇಲೆ ಹಾಕುತ್ತವೆ. ಕಳೆದೆರಡು ತಿಂಗಳಲ್ಲಿ ಸತತ 2ನೇ ಬಾರಿ ಹೀಗಾಗಿದೆ.
ಭಾರತಕ್ಕೇನು ಅಪಾಯ?: ಭಾರತದಲ್ಲಿ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳವಾಗಿದೆ. ಅತ್ತ, ಅಮೆರಿಕದಲ್ಲೂ ಅದೇ ರೀತಿ ಬ್ಯಾಂಕ್ ಬಡ್ಡಿದರ ಹೆಚ್ಚಾಗುತ್ತಾ ಹೋದರೆ, ಭಾರತ ಮತ್ತು ಅಮೆರಿಕದ ಬ್ಯಾಂಕ್‌ಗಳ ಬಡ್ಡಿ ದರಗಳಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ ಎಂದೆನಿಸುತ್ತದೆ. ಆಗ ಭಾರತದಲ್ಲಿ ಹೂಡಿಕೆ ಮಾಡಿರುವ ಅಮೆರಿಕದ ಉದ್ಯಮಿಗಳು ತಮ್ಮ ಬಂಡವಾಳವನ್ನು ಹಿಂಪಡೆಯುತ್ತಾರೆ. ಇದರಿಂದ ಡಾಲರ್ ವಿರುದ್ಧ ರೂಪಾಯಿ ಮತ್ತಷ್ಟು ದುರ್ಬಲವಾಗಿ, ಭಾರತದಲ್ಲಿ ಹಣದುಬ್ಬರ ಜಾಸ್ತಿಯಾಗುತ್ತದೆ. ಅದರ ಪರಿಣಾಮ, ಅಗತ್ಯ ವಸ್ತುಗಳು, ತೈಲ ಮುಂತಾದವುಗಳ ಬೆಲೆ ಹೆಚ್ಚಾಗುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.