Aircraft: 8 ಮಂದಿಯನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಜಪಾನ್‌ನ ಯಕುಶಿಮಾ ದ್ವೀಪದ ಬಳಿ ಪತನ
Team Udayavani, Nov 29, 2023, 3:30 PM IST
ವಾಷಿಂಗ್ಟನ್ : ಎಂಟು ಜನರಿದ್ದ ಅಮೇರಿಕನ್ ಆಸ್ಪ್ರೆ ಸೇನಾ ವಿಮಾನವು ಬುಧವಾರ ಜಪಾನ್ ಕರಾವಳಿಯಲ್ಲಿ ಪತನಗೊಂಡಿದೆ ಎಂದು ಜಪಾನಿನ ಕೋಸ್ಟ್ ಗಾರ್ಡ್ ಅನ್ನು ಉಲ್ಲೇಖಿಸಿ ಜಪಾನ್‌ನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಈ ಘಟನೆಯು ದೇಶದ ದಕ್ಷಿಣದ ಪ್ರಮುಖ ದ್ವೀಪವಾದ ಕ್ಯುಶುವಿನ ದಕ್ಷಿಣದಲ್ಲಿರುವ ಯಕುಶಿಮಾ ದ್ವೀಪದ ಬಳಿ ಸಂಭವಿಸಿದೆ ಎನ್ನಲಾಗಿದೆ.
“ಯುಎಸ್ ಮಿಲಿಟರಿ ಆಸ್ಪ್ರೆ ಯುದ್ಧ ವಿಮಾನವು ಯಕುಶಿಮಾ ದ್ವೀಪದಲ್ಲಿ ಪತನಗೊಂಡಿದೆ ಎಂದು ನಮಗೆ ಇಂದು ಮಧ್ಯಾಹ್ನ 2:47 ಕ್ಕೆ ಸುದ್ದಿ ಬಂದಿದೆ” ಎಂದು ವಕ್ತಾರರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಸಮುದ್ರಕ್ಕೆ ಬಿದ್ದಾಗ ವಿಮಾನದ ಎಡ ಇಂಜಿನ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಯಕುಶಿಮಾ ದ್ವೀಪವು ಜಪಾನ್‌ನ ದಕ್ಷಿಣದ ಪ್ರಮುಖ ದ್ವೀಪವಾದ ಕ್ಯುಶುವಿನ ದಕ್ಷಿಣದಲ್ಲಿದೆ.
ಸೇನಾ ವಿಮಾನ ಯಮಗುಚಿ ಪ್ರದೇಶದ ಇವಾಕುನಿ ಯುಎಸ್ ನೆಲೆಯಿಂದ ಓಕಿನಾವಾದಲ್ಲಿನ ಕಡೇನಾ ಬೇಸ್‌ಗೆ ಹೊರಟಿತ್ತು ಎಂದು ಜಪಾನಿನ ಪ್ರಸಾರಕ NHK ವರದಿ ಮಾಡಿದೆ. ಪತನಗೊಂಡ ವಿಮಾನದಲ್ಲಿದ್ದವರ ವಿವರ ಇನ್ನೂ ಲಭ್ಯವಾಗಲಿಲ್ಲ ಅಲ್ಲದೆ ಅವರ ಸ್ಥಿತಿಗತಿಗಳ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.
ಕಳೆದ ಆಗಸ್ಟ್‌ನಲ್ಲಿ, ಉತ್ತರ ಆಸ್ಟ್ರೇಲಿಯಾದಲ್ಲಿ ಬೇರೊಂದು ಆಸ್ಪ್ರೆ ವಿಮಾನ ಅಪಘಾತಕ್ಕೀಡಾಯಿತು, ಈ ವೇಳೆ ಇದರಲ್ಲಿದ್ದ 23 ಜನರಲ್ಲಿ ಮೂವರು ಸಾವನ್ನಪ್ಪಿದರು.
ಇದನ್ನೂ ಓದಿ: Drought:ಬರಗಾಲದ ಪರಿಹಾರ ಕುರಿತು ಸಮೀಕ್ಷೆ; ಎನ್.ಡಿ.ಆರ್.ಎಫ್ ಪ್ರಕಾರ ಪರಿಹಾರ: ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.