ಬಾಹ್ಯಾಕಾಶ ಪಡೆ ಸ್ಥಾಪನೆಗೆ ಅಮೆರಿಕ ಸಿದ್ಧತೆ
ಚೀನಾ, ರಷ್ಯಾಗೆ ಸೆಡ್ಡು ಹೊಡೆಯಲು ಸಜ್ಜು
Team Udayavani, Dec 21, 2019, 9:37 PM IST
ವಾಷಿಂಗ್ಟನ್: ವಿಶ್ವದಲ್ಲಿ ಮುಂದಿನ ದಿನಗಳಲ್ಲಿ ಯುದ್ಧಕ್ಕೆ ಬಾಹ್ಯಾಕಾಶವೇ ಭೂಮಿಕೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಪ್ರಬಲ ರಾಷ್ಟ್ರಗಳು ಸಜ್ಜಾಗುತ್ತಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಹಾಗೂ ರಷ್ಯಾ ಸುಧಾರಿತ ಉಪಗ್ರಹಗಳನ್ನು ತಯಾರಿಸುತ್ತಿದೆ. ಇದು ಅಮೆರಿಕಕ್ಕೆ ಸವಾಲಾಗಿ ಪರಿಣಮಿಸಿದ್ದು, ಇದೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬಾಹ್ಯಾಕಾಶ ಪಡೆಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ಇದಕ್ಕಾಗಿ ಅವರು 2020 ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಗೆ ಸಹಿ ಹಾಕಿದ್ದಾರೆ. ಇದೇ ವೇಳೆ ಅಮೆರಿಕದ ಸೇನೆಯನ್ನು ಉದ್ದೇಶಿಸಿ ಮಾತನಾಡಿದ್ದು, ಬಾಹ್ಯಾಕಾಶದಲ್ಲಿ ಎಲ್ಲವೂ ಸಂಭವಿಸಲಿದೆ. ಏಕೆಂದರೆ ಬಾಹ್ಯಾಕಾಶವು ವಿಶ್ವದ ಹೊಸ ಯುದ್ಧ ಪ್ರಾಂತ್ಯವಾಗಲಿದೆ ಎಂದು ಬಣ್ಣಿಸಿದ್ದಾರೆ. ಅಮೆರಿಕ ಮಿಲಿಟರಿಯಲ್ಲಿ ಭೂ ಸೇನೆ, ವಾಯುಪಡೆ, ನೌಕಾಪಡೆ, ಕರಾವಳಿ ಪಡೆ ಬಳಿಕ ಬಾಹ್ಯಾಕಾಶ ಪಡೆಯು ಆರನೇ ಅಂಗವಾಗಲಿದೆ. ಈ ಪಡೆಗೆ ಪ್ರತ್ಯೇಕ ಅನುದಾನ ನೀಡುವುದಾಗಿ ಅವರು ತಿಳಿಸಿದ್ದಾರೆ.
ಗುಪ್ತಚರ, ಕಣ್ಗಾವಲು, ಸ್ಥಳಾನ್ವೇಷಣೆ ಮತ್ತಿತರ ಚಟುವಟಿಕೆಗೆ ಚೀನಾ ಹಾಗೂ ರಷ್ಯಾ ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇರಾನ್, ಉತ್ತರ ಕೊರಿಯಾ ಕೂಡ ಇಂತಹ ಕಾರ್ಯದಲ್ಲಿ ಸಕ್ರಿಯವಾಗಿದೆ. ಅಮೆರಿಕ ಕೂಡ ಇದಕ್ಕೆ ಅಣಿಯಾಗುತ್ತಿದೆ.
ಸಂಭವನೀಯ ಬಾಹ್ಯಾಕಾಶ ಯುದ್ಧದಲ್ಲಿ ಉಪಗ್ರಹಗಳ ಮೂಲಕ ಉಪಗ್ರಹಗಳನ್ನು ಹೊಡೆದುರುಳಿಸುವುದು, ವಿಫಲಗೊಳಿಸುವುದು ಮತ್ತಿತರ ಚಟುವಟಿಕೆಗಳು ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.