ಇತಿಹಾಸ ಬರೆದ ಟ್ರಂಪ್
ಪ್ರಥಮ ಬಾರಿಗೆ ಉತ್ತರ ಕೊರಿಯಾಗೆ ಕಾಲಿಟ್ಟ ಅಮೆರಿಕ ಅಧ್ಯಕ್ಷ
Team Udayavani, Jul 1, 2019, 5:56 AM IST
ಉತ್ತರ ಕೊರಿಯಾದಲ್ಲಿ ಟ್ರಂಪ್-ಕಿಮ್ ಭೇಟಿ.
ಸಿಯೋಲ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಉತ್ತರ ಕೊರಿಯಾಗೆ ತೆರಳಿ ಅಲ್ಲಿನ ಅಧ್ಯಕ್ಷ ಕಿಮ್ ಜಾಂಗ್ ಉನ್‌ರನ್ನು ಐತಿಹಾಸಿಕ ಭೇಟಿ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷರೊಬ್ಬರು ಉತ್ತರ ಕೊರಿಯಾ ನೆಲದಲ್ಲಿ ಕಾಲಿಟ್ಟಿದ್ದು ಇದೇ ಮೊದಲ ಬಾರಿ!
ಜಪಾನ್‌ನ ಒಸಾಕಾದಲ್ಲಿ ಶನಿವಾರ ಜಿ20 ಶೃಂಗ ಮುಕ್ತಾಯವಾಗುತ್ತಿದ್ದಂತೆ, ನಾನು ದಕ್ಷಿಣ ಕೊರಿಯಾಗೆ ತೆರಳುತ್ತಿದ್ದೇನೆ. ಸಾಧ್ಯವಾದರೆ ಒಮ್ಮೆ ಗಡಿ ಭಾಗದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್‌ರನ್ನು ಭೇಟಿ ಮಾಡಬಹುದು ಎಂದು ಶನಿವಾರ ಟ್ರಂಪ್ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರ ಕೊರಿಯಾ ಧನಾತ್ಮಕವಾಗಿ ಪ್ರತಿಕ್ರಿಯಿಸಿತ್ತು. ಹೀಗಾಗಿ ರವಿವಾರ ಇಬ್ಬರೂ ಮುಖಂಡರು ಗಡಿಯಲ್ಲಿ ಭೇಟಿ ಮಾಡಿದ್ದಾರೆ.
ಟ್ರಂಪ್ ಹಾಗೂ ಕಿಮ್‌ಗೆ ಇದು ಮೂರನೇ ಭೇಟಿಯಾ ಗಿದ್ದು, ಮೊದಲ ಬಾರಿ ಕಳೆದ ವರ್ಷ ಸಿಂಗಾಪುರದಲ್ಲಿ ನಡೆಸಿದ ಭೇಟಿಗೆ ಭಾರಿ ಪ್ರಚಾರ ಸಿಕ್ಕಿತ್ತು. ಅಲ್ಲಿಯವರೆಗೆ ಅಣ್ವಸ್ತ್ರ ದಾಳಿ ನಡೆಸುವಷ್ಟರ ಮಟ್ಟಿಗೆ ದ್ವೇಷ ಎರಡೂ ದೇಶಗಳ ಮಧ್ಯೆ ನಡೆದಿತ್ತಾದರೂ, ಇಬ್ಬರೂ ನಾಯಕರು ಕೈಕುಲುಕಲು ನಿರ್ಧರಿಸಿದ್ದರು. ಅದರ ಅನಂತರ ಜಪಾನ್‌ನಲ್ಲೂ ಭೇಟಿ ನಡೆದಿತ್ತು. ಆದರೆ ಎರಡೂ ಭೇಟಿಗಳಿಂದಲೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಿದ್ದರೂ, ಉಭಯ ದೇಶಗಳ ಮಧ್ಯೆ ಇದ್ದ ಸಂಘರ್ಷ ಕೊನೆಯಾಗಿತ್ತು. ಜಪಾನ್ ಭೇಟಿಯ ಅನಂತರ ಉತ್ತರ ಕೊರಿಯಾ ನಾಯಕರು ಮತ್ತೆ ಅಮೆರಿಕ ಕುರಿತು ಅಪಸ್ವರ ಎತ್ತಲು ಆರಂಭಿಸುತ್ತಿದ್ದಂತೆಯೇ ಈ ಭೇಟಿ ನಡೆದಿದೆ.
ಇದು ಶಾಂತಿಯ ಹಸ್ತಲಾಘವ: ಇದು ಇಡೀ ದೇಶಕ್ಕೆ ಒಂದು ಅದ್ಭುತ ದಿನ. ನನಗೆ ಹೆಮ್ಮೆಯ ದಿನವೂ ಹೌದು. ತುಂಬಾ ಒಳ್ಳೆಯ ಸಂಗತಿಗಳು ಜರ ಗುತ್ತಿವೆ ಎಂದು ಕಿಮ್‌ರನ್ನು ಭೇಟಿ ಮಾಡಿದ ಅನಂತರ ಟ್ರಂಪ್ ಹೇಳಿಕೊಂಡಿದ್ದಾರೆ. ಅಲ್ಲದೆ, ಇದೊಂದು ಶಾಂತಿಯ ಹಸ್ತಲಾಘವವಾಗಿತ್ತು ಎಂದೂ ಅವರು ಹೇಳಿದ್ದಾರೆ. ಉತ್ತರ ಮತ್ತು ದಕ್ಷಿಣ ಕೊರಿಯಾದ ವಿಭಜನೆಯಾಗುವ ಈ ಸ್ಥಳದಲ್ಲಿ ನಾವು ನಮ್ಮ ಕಹಿನೆನಪುಗಳನ್ನು ಮರೆಯಲು ನಿರ್ಧರಿಸಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಇದೇ ವೇಳೆ ಉಭಯ ದೇಶಗಳ ಮುಖಂಡರು ಮಾತು ಕತೆಯನ್ನು ಪುನಃ ಆರಂಭಿಸಲು ನಿರ್ಧರಿಸಿದ್ದಾರೆ.
ಡಿಎಂಝಡ್‌ನಲ್ಲಿ ನಡೆದಿದ್ದೇನು?: ಡಿಎಂಝಡ್‌ಗೆ ಇಬ್ಬರೂ ಮುಖಂಡರು ಆಗಮಿಸುತ್ತಿದ್ದಂತೆಯೇ ಇಬ್ಬರೂ ಕೈ ಕುಲುಕಿ ದುಬಾಷಿಯ ನೆರವಿನಿಂದ ಉಭಯಕುಶಲೋಪರಿ ನಡೆಸಿದರು. ನಿಮ್ಮನ್ನು ಪುನಃ ಭೇಟಿ ಮಾಡಿದ್ದು ಸಂತಸವಾಯಿತು. ಈ ಸ್ಥಳದಲ್ಲಿ ನಿಮ್ಮನ್ನು ಭೇಟಿ ಮಾಡಲು ನಾನು ನಿರೀಕ್ಷಿಸಿದ್ದೆ ಎಂದು ಟ್ರಂಪ್ ಹೇಳಿದರು. ಅಲ್ಲದೆ, ಉತ್ತರ ಕೊರಿಯಾದ ಭೂಪ್ರದೇಶಕ್ಕೂ ತೆರಳಿದ್ದರು. ಈ ಇಡೀ ಸನ್ನಿವೇಶವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ನೇರ ಪ್ರಸಾರ ಮಾಡಿದ್ದವು.
ಆರಂಭದಲ್ಲಿ ಇದೊಂದು ಹಠಾತ್ ಭೇಟಿಯಾಗಿ ತ್ತಾದರೂ, ಅನಂತರ ಇದು ಸುದೀರ್ಘ ಭೇಟಿಯಾ ಗಿಯೇ ಪರಿವರ್ತನೆ ಯಾಯಿತು. ಡಿಎಂಝಡ್‌ನಲ್ಲಿ ಕೈಕುಲುಕಿದ ಅನಂತರ ಇಬ್ಬರೂ ದಕ್ಷಿಣ ಕೊರಿಯಾದ ಪನ್ಮುಂಜೋಮ್‌ಗೆ ಆಗಮಿಸಿದರು. ಇಲ್ಲಿನ ಫ್ರೀಡಮ್ ಹೌಸ್‌ನಲ್ಲಿ ಒಂದು ಗಂಟೆ ಕಾಲ ಮಾತನಾಡಿದರು. ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಕೂಡ ಇವರೊಂದಿಗೆ ಸೇರಿಕೊಂಡಿದ್ದರು.
ಶ್ವೇತಭವನಕ್ಕೆ ಬನ್ನಿ…
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್‌ರನ್ನು ಟ್ರಂಪ್ ಶ್ವೇತಭವನಕ್ಕೆ ಆಹ್ವಾನಿಸಿದ್ದಾರೆ. ಯಾವುದೇ ಸಮಯ ದಲ್ಲೂ ನೀವು ಶ್ವೇತಭವನಕ್ಕೆ ಆಗಮಿಸಬಹುದು ಎಂದು ಟ್ರಂಪ್ ಹೇಳಿದ್ದಾರೆ.
ಯಾವ ದೇಶದ್ದೂ ಅಲ್ಲದ ಸ್ಥಳದಲ್ಲಿ ಭೇಟಿ!
ಟ್ರಂಪ್ ಮತ್ತು ಕಿಮ್ ಭೇಟಿ ಮಾಡಿದ್ದು ದಕ್ಷಿಣ ಮತ್ತು ಉತ್ತರ ಕೊರಿಯಾದ್ದಲ್ಲದ, ಆದರೆ ಈ ಎರಡೂ ದೇಶಗಳ ಮಧ್ಯದಲ್ಲಿರುವ ಪ್ರದೇಶದಲ್ಲಿ ! ಇದನ್ನು ಡಿಮಿಲಿಟರೈಸ್ಡ್ ಝೋನ್ (ಸೇನಾಮುಕ್ತ ವಲಯ) ಎಂದು ಕರೆಯಲಾಗುತ್ತದೆ. 1953ರಲ್ಲಿ ದಕ್ಷಿಣ ಮತ್ತು ಉತ್ತರ ಕೊರಿಯಾ ಮಧ್ಯೆ ನಡೆದ ಯುದ್ಧದಲ್ಲಿ ಈ 248 ಕಿ.ಮೀ. ಉದ್ದದ, 4 ಕಿ.ಮೀ. ಅಗಲದ ಪ್ರದೇಶವನ್ನು ಸೇನಾಮುಕ್ತ ವಲಯ ಎಂದು ಘೋಷಿಸಲಾಯಿತು. ಇಲ್ಲಿ ವಿಶ್ವಸಂಸ್ಥೆ ಹಾಗೂ ಉತ್ತರ ಕೊರಿಯಾದ ಆಡಳಿತವಿದೆ. ಆದರೆ ಇದು ಸೇನಾಮುಕ್ತ ಎಂದು ಹೆಸರಿನಲ್ಲಷ್ಟೇ ಇದ್ದು, ಯುದ್ಧದ ಅನಂತರದಲ್ಲಿ ಹಲವು ಬಾರಿ ಉಭಯ ದೇಶಗಳ ಸೇನೆ ಪರಸ್ಪರ ದಾಳಿ ನಡೆಸಿವೆ. ಈ ಭಾಗದಲ್ಲಿನ ಸಾವಿರಾರು ಜನರು ದಕ್ಷಿಣ ಕೊರಿಯಾಗೆ ಉದ್ಯೋಗ ಹಾಗೂ ಉತ್ತಮ ಜೀವನವನ್ನು ಅರಸಿಕೊಂಡು ಗುಳೆ ಹೋಗಿದ್ದಾರೆ.
ಮೊದಲೂ ನಡೆದಿತ್ತು ಭೇಟಿ
ಈ ಹಿಂದೆ ಅಮೆರಿಕದ ಹಲವು ಅಧ್ಯಕ್ಷರು ಈ ಭಾಗಕ್ಕೆ ಭೇಟಿ ನೀಡಿದ್ದರು. ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಡಿಎಂಝಡ್‌ಗೆ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ, ಬೈನಾಕ್ಯುಲರ್ ಹಿಡಿದು ತೆರಳಿದ್ದರು. ಇನ್ನು ಜಿಮ್ಮಿ ಕಾರ್ಟರ್ ಮತ್ತು ಬಿಲ್ ಕ್ಲಿಂಟನ್ ಅಂತೂ ಉತ್ತರ ಕೊರಿಯಾದ ರಾಜಧಾನಿ ಪೊÂàಂಗ್ಯೋಂಗ್‌ಗೇ ಭೇಟಿ ನೀಡಿದ್ದರು. ಆದರೆ ಇವರಿಬ್ಬರೂ ಅಧಿಕಾರ ತೊರೆದ ಅನಂತರವೇ ಅಲ್ಲಿಗೆ ತೆರಳಿದ್ದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.