ಅಮೆರಿಕಾದಲ್ಲಿ ಒಂದೇ ದಿನ 52 ಸಾವಿರ ಜನರಿಗೆ ಸೋಂಕು: ಶೀಘ್ರ ವೈರಸ್ ಮುಕ್ತ ರಾಷ್ಟ್ರ- ಟ್ರಂಪ್
Team Udayavani, Jul 2, 2020, 8:19 AM IST
ನ್ಯೂಯಾರ್ಕ್: ಜಾಗತಿಕವಾಗಿ ಸಾಂಕ್ರಾಮಿಕ ರೋಗವು ವೇಗವಾಗಿ ಹಬ್ಬುತ್ತಿದೆ, ಸಮರ್ಪಕವಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಗಂಭೀರ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ಇದೇ ಮೊದಲ ಬಾರಿಗೆ 52 ಸಾವಿರ ಜನರಿಗೆ ಸೋಂಕು ತಗುಲಿದೆ.
ಅಮೆರಿಕಾದ ಪ್ರಮುಖ 14 ರಾಜ್ಯಗಳಲ್ಲಿ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಈಗಾಗಲೇ 26,83,894 ಜನರು ಸೊಂಕಿಗೆ ತುತ್ತಾಗಿದ್ದಾರೆ. ಮಾತ್ರವಲ್ಲದೆ ಒಂದೇ ದಿನ 706 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,28,028ಕ್ಕೆ ಏರಿಕೆಯಾಗಿದೆ.
ಈ ಹಿಂದೆ ಬ್ರೆಜಿಲ್ ನಲ್ಲೂ ಕೂಡ ಮೊದಲ ಬಾರಿಗೆ ಒಂದೇ ದಿನ 50 ಸಾವಿರ ಜನರಿಗೆ ಸೊಂಕು ತಗುಲಿತ್ತು. ಅದಾದ ನಂತರ ಅಮೆರಿಕಾ ಈ ದಾಖಲೆ ಬರೆದಿದೆ.
ಈವರೆಗೂ ಮಾಸ್ಕ್ ಧರಿಸದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಂಕ್ರಾಮಿಕ ರೋಗವು ಶೀಘ್ರವಾಗಿ ಕಣ್ಮರೆಯಾಗುತ್ತದೆ. ಮಾಸ್ಕ್ ಧರಿಸಿದೇ ಇರುವುದರಿಂದ ಯಾವುದೇ ತೊಂದರೇ ಇಲ್ಲ ಎಂಬ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದರು.
ಇದೀಗ ಜಾಗತಿಕವಾಗಿ ಪ್ರತಿನಿತ್ಯ 1.60 ಲಕ್ಷ ಪ್ರಕರಣಗಳು ವರದಿಯಾಗುತ್ತಿದ್ದು ಕಳೆದ ಒಂದು ವಾರದಲ್ಲಿ ದಾಖಲೆಯ ಪ್ರಮಾಣದಲ್ಲಿ ಜನರು ಈ ಮಾರಕ ವೈರಸ್ ಗೆ ಭಾಧಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ 507 ಜನರು ಈ ಮಾರಾಣಾಂತಿಕ ವೈರಸ್ ಗೆ ಪ್ರಾಣತ್ಯೆಜಿಸಿದ್ದಾರೆ. ಆ ಮೂಲಕ ಮೃತರ ಪ್ರಮಾಣ 17,400ಕ್ಕೆ ತಲುಪಿದೆ. ಮಾತ್ರವಲ್ಲದೆ 18,653 ಹೊಸ ಸೊಂಕಿತರು ಕಂಡುಬಂದಿದ್ದು, ಒಟ್ಟಾರೆಯಾಗಿ 5.85 ಲಕ್ಷ ಜನರಿಗೆ ವೈರಾಣು ತಗುಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.