ಕೋವಿಡ್-19 ಆರ್ಭಟಕ್ಕೆ ಅಮೆರಿಕಾದಲ್ಲಿ 20 ಸಾವಿರ ಬಲಿ: ಇಟಲಿಯನ್ನು ಮೀರಿಸಿದ ಸಾವಿನ ಪ್ರಮಾಣ
Team Udayavani, Apr 12, 2020, 8:03 AM IST
ವಾಷಿಂಗ್ಟನ್: ಇಡೀ ವಿಶ್ವವನ್ನೇ ಅಪಾಯಕ್ಕೆ ತಂದೊಡ್ಡಿರುವ ಕೋವಿಡ್-19 ಮಹಾಮಾರಿಗೆ ಅಮೆರಿಕಾದಲ್ಲಿ ಬಲಿಯಾದವರ ಸಂಖ್ಯೆ 20 ಸಾವಿರದ ಗಡಿ ದಾಟಿದೆ. ದುರದೃಷ್ಟವೆಂದರೇ ಸಾವಿನ ಪ್ರಮಾಣದಲ್ಲಿ ಇಟಲಿಯನ್ನು ಮೀರಿಸಿದೆ. ಆ ಮೂಲಕ ಕೋವಿಡ್-19 ಸಾಂಕ್ರಮಿಕ ರೋಗಕ್ಕೆ ಅತೀ ಹೆಚ್ಚು ಜನರು ಬಲಿಯಾದ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ ಶನಿವಾರದ ವೇಳೆಗೆ ಅಮೆರಿಕಾದಲ್ಲಿ ಈ ಮಾರಕ ವೈರಸ್ ಗೆ 20,557 ಜನರು ಮೃತಪಟ್ಟಿದ್ದಾರೆ. ಮಾತ್ರವಲ್ಲದೆ ಸೋಂಕಿತರ ಪ್ರಮಾಣ ಕೂಡ 5,32,879ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ನ್ಯೂಯಾರ್ಕ್ ನಗರ ಕೋವಿಡ್ 19 ಅಟ್ಟಹಾಸಕ್ಕೆ ನಲುಗಿ ಹೋಗಿದೆ.
ಇಟಲಿಯಲ್ಲಿ ಈ ವೈರಾಣುವಿನಿಂದ 18,849 ಜನರು ಮೃತಪಟ್ಟಿದ್ದಾರೆ. ಈ ದೇಶ ಕೂಡ ವೈರಸ್ ನ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗಿತ್ತು ಎಂಬುದನ್ನು ಗಮನಿಸಬಹುದು. ಸ್ಪೇನ್ ನಲ್ಲೂ ಕೂಡ ಈ ಮಹಾಮಾರಿ ರುದ್ರ ನರ್ತನ ಮಾಡುತ್ತಿದೆ.
ಜಗತ್ತಿನಾದ್ಯಂತ 17,80,312 ಜನರು ಈ ಸೋಂಕಿಗೆ ತುತ್ತಾಗಿದ್ದು 1,08,827 ಜನರು ಪ್ರಾಣ ತ್ಯೆಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.