US ಭಾರತದ ಮೇಲೆ ನಿಷೇಧಕ್ಕೆ ಯುಎಸ್‌ಸಿಐಆರ್‌ಎಫ್ ಆಗ್ರಹ
Team Udayavani, Dec 17, 2023, 12:48 AM IST
ವಾಷಿಂಗ್ಟನ್: ಘೋಷಿತ ಖಲಿಸ್ಥಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್‌ನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತವನ್ನು “ಕಳವಳಕಾರಿ ದೇಶ’ ಎಂಬುದಾಗಿ ಹೆಸರಿಸಿ ಅಮೆರಿಕದ ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಕಾಯ್ದೆಯಡಿ ಭಾರತದ ಮೇಲೆ ನಿಷೇಧಗಳನ್ನು ಹೇರುವಂತೆ ಅಮೆರಿಕದ ಧಾರ್ಮಿಕ ಹಕ್ಕು ಸ್ವಾತಂತ್ರ್ಯ ವಾಚ್‌ಡಾಗ್ ಸಂಸ್ಥೆ ಬೈಡೆನ್ ಆಡಳಿತವನ್ನು ಆಗ್ರಹಿಸಿದೆ.
ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಬಗೆಗಿನ ಅಮೆರಿಕನ್ ಆಯೋಗ (ಯುಎಸ್‌ಸಿಐಆರ್‌ಎಫ್) ತನ್ನ ವಾರ್ಷಿಕ ವರದಿಯಲ್ಲಿ ಈ ಆಗ್ರಹ ಮಾಡಿದೆ. ಆದರೆ ಈ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ವಿಶೇಷವೆಂದರೆ ಈ ಆರೋಪಗಳ ಬಗ್ಗೆ ಸಾಕ್ಷ್ಯ ಒದಗಿಸುವಂತೆ ಭಾರತ ಕೇಳಿಕೊಂಡಿದ್ದರೂ ಕೆನಡ ಮತ್ತು ಅಮೆರಿಕ ಸಾಕ್ಷ್ಯಗಳನ್ನು ನೀಡಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.