ಈಕೆಗೆ ದಿನಾ ತಿನ್ನಲು ಜಾನ್ಸನ್ ಬೇಬಿ ಪೌಡರೇ ಬೇಕಂತೆ… ಇದು ಬಿಟ್ಟು ಬೇರೆ ಏನು ಬೇಡ್ವಂತೆ
ಇದಕ್ಕಾಗಿ ಆಕೆ ವರ್ಷಕ್ಕೆ ಎಷ್ಟು ದುಡ್ಡು ಖರ್ಚು ಮಾಡುತ್ತಾಳೆ ಗೊತ್ತಾ?
Team Udayavani, Dec 8, 2023, 4:47 PM IST
ವಾಷಿಂಗ್ಟನ್: ದೇಶದಲ್ಲಿ ನಾನಾ ರೀತಿಯ ಜನ ನೋಡಲು ಸಿಗುತ್ತಾರೆ ಅವರ ಆಚಾರ ವಿಚಾರಗಳು ಕೂಡಾ ಬೇರೆಯಾಗಿರುತ್ತವೆ ಆಯಾಯ ದೇಶಕ್ಕೆ ಹೊಂದುವಂತೆ ವಸ್ತ್ರ ವಿನ್ಯಾಸ, ಆಹಾರ ಪದ್ಧತಿಗಳಲ್ಲೂ ಬದಲಾಗಿರುತ್ತದೆ ಆದರೆ ಇಲ್ಲೊಬ್ಬಳು ಯುವತಿ ಅದಕ್ಕೆಲ್ಲ ಭಿನ್ನವೆಂಬಂತೆ ಎನಿಸಿಕೊಂಡಿದ್ದಾಳೆ ಅದು ಹೇಗೆ ಎನ್ನುತ್ತೀರಾ ಇಲ್ಲಿದೆ ಸ್ಟೋರಿ…
ಅಮೇರಿಕಾದ ಲೂಯಿಸಿಯಾನದ ನ್ಯೂ ಓರ್ಲಿಯನ್ಸ್‌ನ 27 ವರ್ಷದ ಡ್ರೆಕಾ ಮಾರ್ಟಿನ್ ಎಂಬ ಮಹಿಳೆ ಜೀವನ ಕ್ರಮದ ಬಗ್ಗೆ ಹೇಳಲು ಹೊರಟಿರುವುದು. ಇಲ್ಲಿ ಯಾಕೆ ಆಕೆ ಕೊಂಚ ಭಿನ್ನ ಎಂಬುದನ್ನು ಹೇಳುತ್ತೇವೆ… ಹುಟ್ಟಿದ ಮಕ್ಕಳ ಮೈ ಮೃದುವಾಗಿಡಲು ಹೆಚ್ಚಿನವರು ಜಾನ್ಸನ್ ಬೇಬಿ ಪೌಡರ್ ಉಪಯೋಗಿಸುತ್ತಾರೆ, ಅದು ಬಿಟ್ಟರೆ ಬೇರೆಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ ಆದರೆ ಅಮೆರಿಕದ ಡ್ರೆಕಾ ಮಾರ್ಟಿನ್ ಗೆ ಈ ಪೌಡರೇ ಫೆವರೇಟ್ ಫುಡ್ ಅಂತೆ.
ಈ ಕುರಿತು ಆಕೆಯೇ ಹೇಳಿದಂತೆ ಮೊದ ಮೊದಲು ಸ್ವಲ್ಪ ಸ್ವಲ್ಪವೇ ತಿನ್ನುತ್ತಿದ್ದ ಪೌಡರ್ ಈಗ ದಿನಕ್ಕೆ 623 ಗ್ರಾಂ ನಷ್ಟು ತಿನ್ನುತ್ತೇನೆ ಎಂದಿದ್ದಾಳೆ ಅಷ್ಟು ಮಾತ್ರವಲ್ಲದೆ ಕೇವಲ ಜಾನ್ಸನ್ ಬೇಬಿ ಪೌಡರ್ ತಿನ್ನಲು ವರ್ಷಕ್ಕೆ 4000 ಡಾಲರ್ (3.33 ಲಕ್ಷ ರೂ) ಖರ್ಚು ಮಾಡುತ್ತಾರಂತೆ. ಕೇವಲ ಪೌಡರ್ ತಿನ್ನುವ ಹವ್ಯಾಸ ಶುರು ಮಾಡಿದ ಆಕೆಗೆ ಇದುವರೆಗೂ ಯಾವುದೇ ಅರೋಗ್ಯ ಸಮಸ್ಯೆ ಎದುರಾಗಿಲ್ಲ ಎಂದು ಹೇಳಿದ್ದಾಳೆ. ಈ ಪೌಡರ್ ತಿನ್ನಲು ಶುರು ಮಾಡಿದ ಆಕೆ ಈಗ ಬೇಬಿ ಪೌಡರನ್ನೇ ಮುಖ್ಯ ಆಹಾರವಾಗಿ ಸೇವಿಸುತ್ತಿದ್ದಾಳಂತೆ.
ಚಿಕ್ಕ ಮಗುವಾಗಿದ್ದಾಗಲೇ ಶುರು
ಡ್ರೆಕಾ ಮಾರ್ಟಿನ್ ಚಿಕ್ಕ ಮಗುವಾಗಿದ್ದಾಗ ಆಕೆಯನ್ನು ಸ್ನಾನ ಮಾಡಿಸಿ ಮೈಗೆ ಪೌಡರ್ ಹಚ್ಚಿದ ವೇಳೆ ಆಕೆ ಅದನ್ನು ನೆಕ್ಕುತ್ತಿದ್ದಳಂತೆ ಬಳಿಕ ಅದು ಮುಂದುವರೆದು ಕಳೆದ ಹತ್ತು ವರ್ಷದಿಂದ ನಿರಂತರವಾಗಿ ಪೌಡರ್ ಸೇವನೆ ಮಾಡುತ್ತಿದ್ದಾಳಂತೆ. ಮಧ್ಯದಲ್ಲಿ ಆಕೆ ಗರ್ಭವತಿಯಾಗಿದ್ದಾಗ ಕೆಲವು ತಿಂಗಳು ತಿನ್ನುವುದನ್ನು ಬಿಟ್ಟಿದ್ದಳಂತೆ ಆ ಬಳಿಕ ಮತ್ತೆ ಪೌಡರ್ ತಿನ್ನಲು ಆರಂಬಿಸಿದ್ದೇನೆ ಎಂದಿದ್ದಾಳೆ, ಇದೀಗ ಆಕೆಯ ಮಗ ದೊಡ್ಡವನಾಗಿದ್ದು ಪೌಡರ್ ತಿನ್ನದಂತೆ ಹೇಳಿದ್ದಾನೆ ಅದಕ್ಕಾಗಿ ಈಗ ಪೌಡರ್ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಕ್ರಮೇಣ ಮುಂದಿನ ದಿನಗಳಲ್ಲಿ ಮಗನಿಗಾಗಿ ಸಂಪೂರ್ಣ ತಿನ್ನುವುದನ್ನು ಬಿಡುವುದಾಗಿ ಹೇಳಿದ್ದಾಳೆ.
ಇದನ್ನೂ ಓದಿ: Guyana; ಮಿಲಿಟರಿ ಹೆಲಿಕಾಪ್ಟರ್ ಪತನ : 5 ಅಧಿಕಾರಿಗಳು ಮೃತ್ಯು, ಇಬ್ಬರು ಪಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.